ಕೊರೊನಾ ಆಪರೇಷನ್: ಚೀನಾದಲ್ಲಿ ರಾಖಿ ಸಾವಂತ್
ಮುಂಬೈ, ಫೆಬ್ರವರಿ 5: ಸದಾ ಒಂದಲ್ಲಾ ಒಂದು ವಿವಾದದಿಂದ ಜನರ ದೃಷ್ಟಿಯನ್ನು ತನ್ನತ್ತ ತಿರುಗುವಂತೆ ಮಾಡುವ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಇದೀಗ ಹೊಸ ವಿಷಯ ಬಿಚ್ಚಿಟ್ಟಿದ್ದಾರೆ.
ಕೊರೊನಾ ವೈರಸ್ ಹೊಡೆದೋಡಿಸಲು ರಾಖಿ ಸಾವಂತ್ ಚೀನಾಕ್ಕೆ ಹೋಗಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ನಾಸಾದ ವಿಜ್ಞಾನಿಗಳ ಜೊತೆಗೆ ಔಷಧದೊಂದಿಗೆ ಚೀನಾಕ್ಕೆ ತೆರಳುವುದಾಗಿ ಹೇಳಿಕೆ ನೀಡಿದ್ದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
ಆದರೆ ಇದೀಗ ಹೊಸ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ 'ಪ್ರಧಾನಿ ಮೋದಿ ನನಗೆ ಚೀನಾಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ. ಹಾಗೆಯೇ ಈ ವೈರಸ್‌ನ್ನು ಕೊಲ್ಲಲು ನಿನ್ನಿಂದ ಮಾತ್ರ ಸಾಧ್ಯ ಎಂದು ನನ್ನ ಮೇಲೆ ಭರವಸೆ ಇಟ್ಟಿದ್ದಾರೆ ಹಾಗಾಗಿ ನಾನು ಚೀನಾಕ್ಕೆ ಬಂದಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.

ಕೊರೊನಾ ವೈರಸ್‌ಗೆ 400ಕ್ಕೂ ಹೆಚ್ಚು ಮಂದಿ ಬಲಿ
ಹೌದು. ಕೊರೊನಾ ವೈರಸ್ ಸದ್ಯ ಚೀನಾದಲ್ಲಿ 428 ಮಂದಿ ಬಲಿಯಾಗಿದ್ದಾರೆ. 20 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ವಿಶ್ವದೆಲ್ಲೆಡೆ ಹರಡುತ್ತಿರುವ ಕೊರೊನಾ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ಕೇರಳದಲ್ಲಿ ಈಗಾಗಲೇ 3 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದೆ.

ವೈರಸ್ ನಾಶಮಾಡಲು ಚೀನಾಕ್ಕೆ ಹೋಗುತ್ತಿದ್ದೇನೆ
ಹೀಗಿರುವಾಗ ನಾನು ಚೀನಾಗೆ ಹೋಗುತ್ತಿದ್ದೇನೆ, ನನ್ನ ಬಳಿ ಕೊರೊನಾ ವೈರಸ್ ಅನ್ನು ನಾಶ ಮಾಡಲು ಔಷಧಿ ಇದೆ. ಕೊರೊನಾ ವೈರಸ್ ಅನ್ನು ನಾನು ಕೊಂದೇ ಕೊಲ್ಲುತ್ತೇನೆ ಎಂದು ರಾಖಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾಳೆ. ಈ ವಿಡಿಯೋ ಸದ್ಯ ಸಖತ್ ವೈರಲ್ ಆಗಿದ್ದು, ರಾಖಿಯ ಡ್ರಾಮಾ ನೋಡಿ ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.

ನಾನು ಕ್ಷೇಮವಾಗಿ ಬರಲಿ ಎಂದು ಪ್ರಾರ್ಥಿಸಿ
ಮೋದಿಜಿ ನಾನು ಚೀನಾಗೆ ಹೋಗುತ್ತಿದ್ದೇನೆ. ಕೊರೊನಾ ವೈರಸ್ ಅನ್ನು ನಾಶ ಮಾಡುತ್ತೇನೆ. ನಾನು ಕ್ಷೇಮವಾಗಿ ವಾಪಸ್ ಬರಲಿ ಅಂತ ಎಲ್ಲರೂ ಪ್ರಾರ್ಥಿಸಿ. ನಾನು ನಾಸಾದಿಂದ ಕೊರೊನಾ ವೈರಸ್ ಅನ್ನು ನಾಶ ಮಾಡಲು ಸ್ಪೆಷಲ್ ಔಷಧಿ ತಂದಿದ್ದೇನೆ. ಚೀನಾದಲ್ಲಿ ಜನರು ಉಸಿರಾಡಲು ಕೂಡ ಕಷ್ಟ ಪಡುತ್ತಿದ್ದಾರೆ ಎಂದು ರಾಖಿ ವಿಡಿಯೋ ಮಾಡಿ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋವನ್ನು 77 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, ನೂರಾರು ಮಂದಿ ಕಮೆಂಟ್ ಮಾಡಿ ರಾಖಿಯ ಕಾಲೆಳೆದಿದ್ದಾರೆ.

ನನ್ನ ಬಳಿ ಕೊರೊನಾಕ್ಕೆ ಔಷಧ ಇದೆ ಎಂದ ರಾಖಿ
ಸಂಬಂಧ ಇರಲಿ, ಬಿಡಲಿ ಅಭಿಮಾನಿಗಳನ್ನು ರಂಜಿಸುವ ಯಾವ ಅವಕಾಶವನ್ನು ರಾಖಿ ಬಿಡಲ್ಲ. ಇಡೀ ಜಗತ್ತೆ ಕೊರೊನಾ ವೈರಸ್‌ನಿಂದ ಆತಂಕದಲ್ಲಿದ್ದರೆ, ರಾಖಿ ಮಾತ್ರ ಕೂಲ್ ಆಗಿ ನನ್ನ ಬಳಿ ಔಷಧಿ ಇದೆ ಎಂದು ಎಲ್ಲರಿಗೂ ಶಾಕ್ ನೀಡಿದ್ದಾಳೆ.












Click it and Unblock the Notifications