UTS App ಸ್ಥಗಿತ, RailOne ಅಚಲ ಎಂದ ರೈಲ್ವೆ ಇಲಾಖೆ: ವ್ಯಾಲೆಟ್ ದುಡ್ಡು ಏನಾಗುತ್ತೆ? ಇಲ್ಲಿದೆ ಉತ್ತರ
ಭಾರತೀಯ ರೈಲ್ವೆ ಇಲಾಖೆ ತನ್ನ ಡಿಜಿಟಲ್ ಸೇವೆಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತಿದ್ದು, ರೈಲ್ವೆ ಪ್ರಯಾಣಿಕರಿಗೆ ಅತಿ ಮುಖ್ಯವಾದ ಮಾಹಿತಿಯೊಂದನ್ನು ನೀಡಿದೆ. ನೀವು ಇಷ್ಟು ದಿನ ಜನರಲ್ ಟಿಕೆಟ್ ಅಥವಾ ಪ್ಲಾಟ್‌ಫಾರ್ಮ್ ಟಿಕೆಟ್ ಪಡೆಯಲು ಬಳಸುತ್ತಿದ್ದ 'UTSonMobile' (ಯುಟಿಎಸ್) 'ಆ್ಯಪ್' ಇನ್ನು ನೆನಪಿನ ಪುಟ ಸೇರಲಿದೆ. ಹೌದು, ಮಾರ್ಚ್ 1, 2026 ರಿಂದ ಹಂತ ಹಂತವಾಗಿ ಯುಟಿಎಸ್ ಆ್ಯಪ್ ಅನ್ನು ಸ್ಥಗಿತಗೊಳಿಸಲು (Decommission) ರೈಲ್ವೆ ಇಲಾಖೆ ನಿರ್ಧರಿಸಿದೆ. ಇದಕ್ಕೆ ಬದಲಾಗಿ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ತರುವ 'ರೈಲ್ ಒನ್'(RailOne) ಆ್ಯಪ್ ಅನ್ನು ಬಳಸುವಂತೆ ಪ್ರಯಾಣಿಕರಿಗೆ ಮನವಿ ಮಾಡಲಾಗಿದೆ.
ದಕ್ಷಿಣ ರೈಲ್ವೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಕೊನೆಯ ಕ್ಷಣದ ಗೊಂದಲಗಳನ್ನು ತಪ್ಪಿಸಲು ಪ್ರಯಾಣಿಕರು ಈಗಿನಿಂದಲೇ ರೈಲ್ ಒನ್ ಆ್ಯಪ್‌ಗೆ ಬದಲಾಗುವುದು ಸೂಕ್ತ ಎಂದು ಸಲಹೆ ನೀಡಿದೆ.

ಏಕೀಕೃತ ಸೇವೆಗಾಗಿ 'ರೈಲ್ ಒನ್' ಸೂಪರ್ ಆ್ಯಪ್
ಇಲ್ಲಿಯವರೆಗೆ ರೈಲ್ವೆ ಪ್ರಯಾಣಿಕರು ಬೇರೆ ಬೇರೆ ಸೇವೆಗಳಿಗೆ ಪ್ರತ್ಯೇಕ ಆ್ಯಪ್‌ಗಳನ್ನು ಬಳಸಬೇಕಿತ್ತು. ಟಿಕೆಟ್ ಬುಕಿಂಗ್‌ಗೆ ಐಆರ್‌ಸಿಟಿಸಿ (IRCTC), ರೈಲು ಎಲ್ಲಿದೆ ಎಂದು ನೋಡಲು NTES, ದೂರು ನೀಡಲು ರೈಲ್ ಮದದ್ (Rail Madad), ಮತ್ತು ಜನರಲ್ ಟಿಕೆಟ್‌ಗೆ ಯುಟಿಎಸ್ ಹೀಗೆ ಹತ್ತಾರು ಆ್ಯಪ್‌ಗಳನ್ನು ಇಟ್ಟುಕೊಳ್ಳಬೇಕಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಭಾರತೀಯ ರೈಲ್ವೆ 'ರೈಲ್ ಒನ್' ಎಂಬ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಪ್ರಯಾಣಿಕರ ಸಮಯವನ್ನು ಉಳಿಸುವುದಲ್ಲದೆ, ಮೊಬೈಲ್‌ನಲ್ಲಿ ಹಲವು ಆ್ಯಪ್‌ಗಳನ್ನು ಇಟ್ಟುಕೊಳ್ಳುವ ಕಿರಿಕಿರಿ ತಪ್ಪಿಸುತ್ತದೆ. ಮಾರ್ಚ್ 1 ರಿಂದ ಯುಟಿಎಸ್ ಆ್ಯಪ್ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಪ್ರಕ್ರಿಯೆ ಆರಂಭವಾಗಲಿದ್ದು, ರೈಲ್ ಒನ್ ಏಕೈಕ ಅಧಿಕೃತ ಆ್ಯಪ್ ಆಗಿ ಕಾರ್ಯನಿರ್ವಹಿಸಲಿದೆ.
ಲಾಗಿನ್ ಸಮಸ್ಯೆ ಇಲ್ಲ: ಹಳೆಯ ಐಡಿಯೇ ಸಾಕು
ಹೊಸ ಆ್ಯಪ್ ಬಂದ ತಕ್ಷಣ, ಮತ್ತೆ ಹೊಸದಾಗಿ ರಿಜಿಸ್ಟ್ರೇಷನ್ ಮಾಡಬೇಕಾ ಎಂಬ ಚಿಂತೆ ಬೇಡ. ರೈಲ್ ಒನ್ ಆ್ಯಪ್‌ನ ಅತಿದೊಡ್ಡ ಅನುಕೂಲವೆಂದರೆ ಅದರ 'ಸಿಂಗಲ್ ಸೈನ್ ಇನ್' (Single Sign-in) ವ್ಯವಸ್ಥೆ.
1. ನೀವು ಈಗಾಗಲೇ ಐಆರ್‌ಸಿಟಿಸಿ ಅಥವಾ ಯುಟಿಎಸ್ ಆ್ಯಪ್‌ಗಳಲ್ಲಿ ಖಾತೆ ಹೊಂದಿದ್ದರೆ, ಅದೇ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಬಳಸಿ ರೈಲ್ ಒನ್ ಆ್ಯಪ್‌ಗೆ ಲಾಗಿನ್ ಆಗಬಹುದು.
2. ಹೊಸದಾಗಿ ಖಾತೆ ತೆರೆಯುವ ಅಗತ್ಯವಿಲ್ಲ.
3. ನಿಮ್ಮ ಹಳೆಯ ಆರ್-ವಾಲೆಟ್ (R-Wallet) ಬ್ಯಾಲೆನ್ಸ್ ಕೂಡ ಸುರಕ್ಷಿತವಾಗಿ ಹೊಸ ಆ್ಯಪ್‌ಗೆ ವರ್ಗಾವಣೆಯಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ರೈಲ್ ಒನ್ ಆ್ಯಪ್‌ನ ಪ್ರಮುಖ ವೈಶಿಷ್ಟ್ಯಗಳು
ದಕ್ಷಿಣ ರೈಲ್ವೆ ತಿಳಿಸಿರುವಂತೆ, ಈ ಹೊಸ ಆ್ಯಪ್ ಕೇವಲ ಟಿಕೆಟ್ ಬುಕಿಂಗ್‌ಗೆ ಸೀಮಿತವಾಗಿಲ್ಲ. ಇದು ಪ್ರಯಾಣಿಕರ ಸಮಗ್ರ ಅನುಭವವನ್ನು ಉತ್ತಮಗೊಳಿಸುವ ಗುರಿ ಹೊಂದಿದೆ:
1. ಎಲ್ಲಾ ಟಿಕೆಟ್‌ಗಳು ಒಂದೇ ಕಡೆ: ಕಾಯ್ದಿರಿಸಿದ (Reserved), ಕಾಯ್ದಿರಿಸದ (Unreserved) ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಒಂದೇ ಆ್ಯಪ್‌ನಲ್ಲಿ ಬುಕ್ ಮಾಡಬಹುದು.
2. ಲೈವ್ ಟ್ರ್ಯಾಕಿಂಗ್: ನಿಮ್ಮ ರೈಲು ಎಲ್ಲಿದೆ, ಅದು ನಿಲ್ದಾಣಕ್ಕೆ ಯಾವಾಗ ಬರುತ್ತದೆ ಎಂಬ ಸಮಯದ ಮಾಹಿತಿಯನ್ನು (Real-time tracking) ಇದರಲ್ಲಿ ನೋಡಬಹುದು.
3. ಆಹಾರ ಸೇವೆ: ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮ ಸೀಟ್‌ಗೆ ಊಟವನ್ನು ಆರ್ಡರ್ ಮಾಡುವ ಇ-ಕ್ಯಾಟರಿಂಗ್ ಸೌಲಭ್ಯವೂ ಇದರಲ್ಲಿದೆ.
4. ದೂರು ಮತ್ತು ಪರಿಹಾರ: ಪ್ರಯಾಣದ ವೇಳೆ ಯಾವುದೇ ತೊಂದರೆಯಾದರೆ, ದೂರು ನೀಡಲು ಪ್ರತ್ಯೇಕ ಆ್ಯಪ್ ಬೇಕಿಲ್ಲ. ಇದರಲ್ಲಿರುವ 'ರೈಲ್ ಮದದ್' ಆಯ್ಕೆ ಮೂಲಕ ದೂರು ಸಲ್ಲಿಸಬಹುದು ಮತ್ತು ಅದರ ಸ್ಥಿತಿಗತಿಯನ್ನು ಟ್ರ್ಯಾಕ್ ಮಾಡಬಹುದು.
ಮಾರ್ಚ್ 1ರ ಡೆಡ್‌ಲೈನ್ ಮತ್ತು 3% ರಿಯಾಯಿತಿ
ಮಾರ್ಚ್ 1, 2026 ರಿಂದ ಹಳೆಯ ಯುಟಿಎಸ್ ಆ್ಯಪ್ ನಿಧಾನವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ. ಆದ್ದರಿಂದ, ಪ್ರಯಾಣಿಕರು ಇಂದೇ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ರೈಲ್ ಒನ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಉತ್ತಮ. ಅಲ್ಲದೆ, ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು, ರೈಲ್ ಒನ್ ಆ್ಯಪ್ ಮೂಲಕ ಆರ್-ವಾಲೆಟ್ ಬಳಸಿ ಜನರಲ್ ಟಿಕೆಟ್ ಬುಕ್ ಮಾಡುವವರಿಗೆ ಶೇಕಡಾ 3% ರಷ್ಟು ರಿಯಾಯಿತಿ (Bonus) ಮುಂದುವರಿಯಲಿದೆ.
"ಟಿಕೆಟ್ ಬುಕಿಂಗ್, ಟ್ರ್ಯಾಕಿಂಗ್ ಮತ್ತು ಕುಂದುಕೊರತೆ ನಿವಾರಣೆಯನ್ನು ಒಂದೇ ಸೂರಿನಡಿ ತರುವ ಮೂಲಕ, ರೈಲ್ ಒನ್ ಪ್ರಯಾಣಿಕರ ಶ್ರಮವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಪ್ರಯಾಣದ ಅನುಭವವನ್ನು ಹೆಚ್ಚಿಸುತ್ತದೆ" ಎಂದು ಇಲಾಖೆ ಸ್ಪಷ್ಟಪಡಿಸಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications