ಟ್ವಿಟ್ಟರ್ ಹಕ್ಕಿ ಹಿಂದೆ ಬಿದ್ದ ರಾಹುಲ್ ಗಾಂಧಿ
ನವದೆಹಲಿ, ಮೇ.7: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಂಡು ಜನರಿಗೆ ಹತ್ತಿರವಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಈಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಹಕ್ಕಿಯ ಹಿಂದೆ ಬಿದ್ದಿದ್ದಾರೆ.
ಬುಧವಾರ ರಾತ್ರಿಯೇ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕಚೇರಿ ಹೆಸರಿನಲ್ಲಿ ಟ್ವಿಟ್ಟರ್ ಐಡಿ ಆರಂಭಗೊಂಡಿತ್ತು. ಈಗ ಇದು ಅಧಿಕೃತ ಐಡಿ ಎಂದು ಮುದ್ರೆ ಬಿದ್ದಿದೆ. ರಾಹುಲ್ ಗಾಂಧಿ ಆಫೀಸ್ ಐಡಿ (@OfficeofRG) ಗುರುವಾರ ಅಪ್ಡೇಟ್ಸ್ ಶುರು ಮಾಡಿದೆ.

ನಂ,12, ತುಘಲಕ್ ಲೇನ್, ನವದೆಹಲಿ, ಅಡ್ರೆಸ್ ಹೊಂದಿರುವ ಈ ಖಾತೆ ಅಮೇಥಿ ಸಂಸದ ರಾಹುಲ್ ಗಾಂಧಿ ಅವರದ್ದೇ ಎಂದು ಸ್ಪಷ್ಟವಾಗಿದೆ. ಈ ಸಮಯದ ತನಕ ಮೂರು ಟ್ವೀಟ್ ಗಳು ಮೂರು ಜನರನ್ನು ಫಾಲೋ ಮಾಡುತ್ತಿರುವ ಈ ಐಡಿಗೆ 29.1K ಹಿಂಬಾಲಕರು ಸಿಕ್ಕಿದ್ದಾರೆ. ಬುಧವಾರ ರಾತ್ರಿ ಐಡಿ ಆರಂಭವಾದಾಗ 2,200 ಹಿಂಬಾಲಕರನ್ನು ಹೊಂದಿತ್ತು.
ಗುರುವಾರ ಸಂಸತ್ತಿನಲ್ಲಿ ಅಮೇಥಿಯ ಫುಡ್ ಪಾರ್ಕ್ ಬಗ್ಗೆ ರಾಹುಲ್ ಮಾಡಿದ ಭಾಷಣದ ವಿಡಿಯೋ ಟ್ವೀಟ್ ಮಾಡಲಾಗಿದೆ.
Rahul Gandhi raises the issue of Amethi Mega Food Park in Parliament.
Watch https://t.co/xnJ2igrm4h
— Office of RG (@OfficeOfRG) May 7, 2015 ಈ ಐಡಿ ಫಾಲೋ ಮಾಡಿ ರಾಹುಲ್ ಗಾಂಧಿ ಅವರ ಚಟುವಟಿಕೆಗಳ ಅಪ್ಡೇಟ್ಸ್ ಪಡೆಯಿರಿ ಎಂದು ಟ್ವೀಟ್ ಮಾಡಲಾಗಿದೆ.
Watch this space for information and updates on Rahul Gandhi's official programs and upcoming events
— Office of RG (@OfficeOfRG) May 7, 2015 ವಿಶ್ವದ ಜನಪ್ರಿಯ ಟ್ವೀಟ್ ಖಾತೆಗಳ ಪೈಕಿ ಬರಾಕ್ ಒಬಾಮಾ, ಪೋಪ್ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ(12.1 ಮಿಲಿಯನ್ ಹಿಂಬಾಲಕರು) ಇದ್ದಾರೆ. ಲೋಕಸಭೆ ಚುನಾವಣೆ 2014 ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣಗಳನ್ನು ಸೂಕ್ತವಾಗಿ ಬಳಕೆ ಮಾಡಿಕೊಂಡ ಮೋದಿ ಜನಮನ್ನಣೆ ಜೊತೆಗೆ ಬಿಜೆಪಿ ಗೆಲುವಿಗೂ ಕಾರಣರಾದರು.(ಒನ್ ಇಂಡಿಯಾ ಸುದ್ದಿ)












Click it and Unblock the Notifications