Pushpa 2: ಪುಷ್ಪ - 2 ಬಿಡುಗಡೆಯ ದಿನವೇ ಬಿಗ್‌ಶಾಕ್, ಆನ್‌ಲೈನ್‌ನಲ್ಲಿ ಲೀಕ್!
Pushpa 2: The Rule Faces Online Leak: ದೇಶದಾದ್ಯಂತ ಇಂದು ಪುಷ್ಪ - 2 ಸಿನಿಮಾ ಬಿಡುಗಡೆಯಾಗಿದೆ. ನಟ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ದೇಶದಾದ್ಯಂತ ಬಿಡುಗಡೆಯಾಗಿ ಭಾರೀ ಸದ್ದು ಮಾಡ್ತಿದೆ. ಆದರೆ, ಈ ಸಿನಿಮಾಗೆ ಮೊದಲ ದಿನವೇ ಭಾರೀ ಶಾಕ್‌ವೊಂದು ಎದುರಾಗಿದೆ. ತೆಲುಗಿನ ಬಹುನಿರೀಕ್ಷೆಯ ಹಾಗೂ ಪ್ಯಾನ್ ಇಂಡಿಯಾ ಪುಷ್ಪ-2 ಸಿನಿಮಾ ಗುರುವಾರ ಅಂದರೆ ಡಿಸೆಂಬರ್ 5ರಂದು ದೇಶಾದ್ಯಂತ ಬಿಡುಗಡೆ ಆಗಿದೆ ಭರ್ಜರಿ ಸದ್ದು ಮಾಡ್ತಿದೆ. ಆದರೆ, ಮೊದಲ ದಿನವೇ ಈ ಚಿತ್ರಕ್ಕೆ ಶಾಕ್ ಎದುರಾಗಿದ್ದು, ಈ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ!
ಪುಷ್ಪ - 2 ಸಿನಿಮಾವನ್ನು ತೆಲುಗಿನ ಫೇಮಸ್ ನಿರ್ದೇಶಕ ಸುಕುಮಾರ್ ನಿರ್ದೇಶಿಸಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡ್ತಿದೆ. ಬೆಂಗಳೂರಿ ನಲ್ಲೂ ಸಾವಿರಾರು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಜನ ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ. ಈ ರೀತಿ ಇರುವಾಗಲೇ ಈ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ ಎಂದು ಹೇಳಲಾಗಿದೆ.

ಆನ್‌ಲೈನ್‌ನಲ್ಲಿ ಸೋರಿಕೆಯಾದ ಪುಷ್ಪ 2
ಬಿಡುಗಡೆಯಾದ ಮೊದಲ ದಿನವೇ ಈ ಸಿನಿಮಾ ತಮಿಳುರಾ* ಹಾಗೂ ಫಿಲ್ಮಿಜಿ* ಎನ್ನುವುದು ಸೇರಿದಂತೆ ವಿವಿಧ ಕಡೆ ಲೀಕ್ ಆಗಿದ್ದು, ಚಿತ್ರತಂಡಕ್ಕೆ ಭಾರೀ ಆಘಾತವನ್ನು ಉಂಟು ಮಾಡಿದೆ ಎನ್ನಲಾಗಿದೆ. ಪುಷ್ಪ 2 ಸಿನಿಮಾವನ್ನು ಈ ಆನ್‌ಲೈನ್‌ಗಳ ಮೂಲಕ ಅಪ್‌ಲೋಡ್ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಸಿನಿಮಾದ HD ಪ್ರಿಂಟ್ ಸೇರಿದಂತೆ ಬಹು ರೆಸಲ್ಯೂಶನ್‌ಗಳೊಂದಿಗೆ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದ್ದು, ಇದು ಸಿನಿಮಾ ತಂಡಕ್ಕೆ ಆಘಾತವನ್ನು ಉಂಟು ಮಾಡಿದೆ.
ಪುಷ್ಪ 2 ದಿ ರೂಲ್ ಮೂವಿ ಆನ್‌ಲೈನ್‌ನಲ್ಲಿ ಲೀಕ್ ಆಗುತ್ತಿದ್ದಂತೆಯೇ ಈ ಸಿನಿಮಾದ ಆದಾಯದ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ದೇಶದಾದ್ಯಂತ ಈ ಸಿನಿಮಾ ಹೊಸ ದಾಖಲೆಯನ್ನು ಬರೆಯಲಿದೆ ಎಂದೇ ಹೇಳಲಾಗಿತ್ತು. ಈ ನಿಟ್ಟಿನಲ್ಲಿ ಈಗಾಗಲೇ ಅವಧಿ ಪೂರ್ವ ಬುಕ್ಕಿಂಗ್ ಸಹ ಜೋರಾಗಿತ್ತು. ಗುರುವಾರ ಈ ಸಿನಿಮಾವನ್ನು ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಉತ್ತರ ಭಾರತದಲ್ಲೂ ಲಕ್ಷಾಂತರ ಜನ ಸಿನಿಮಾ ಪ್ರಿಯರು ಮುಗಿಬಿದ್ದು ನೋಡಿದ್ದಾರೆ. ಚಿತ್ರದ ಟಿಕೆಟ್ ದರವು ಹೆಚ್ಚಾಗಿದೆ ಎನ್ನುವ ಟೀಕೆಗಳು ಕೆಲವು ಭಾಗದಲ್ಲಿ ಸಿನಿಮಾದ ವಿರುದ್ಧ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಆನ್‌ಲೈನ್‌ನಲ್ಲಿ ಈ ಸಿನಿಮಾ ಲೀಕ್ ಆಗಿದ್ದು, ಚಿತ್ರತಂಡಕ್ಕೆ ಶಾಕ್ ಆಗಿದೆ. ಈ ಕಾನೂನು ಬಾಹಿರ ಕೆಲಸಕ್ಕೆ ಕಾನೂನು ಸಮರ ಶುರು ಮಾಡಲು ಸಿನಿಮಾ ತಂಡ ಮುಂದಾಗಿದೆ ಎನ್ನಲಾಗಿದೆ.
ಸಿನಿಮಾದ ಟಿಕೆಟ್ ದರ ಹೆಚ್ಚಳ ಮಾಡುವುದಕ್ಕೆ ತೆಲುಗು ರಾಜ್ಯಗಳಲ್ಲಿ ಅನುಮತಿ ಸಿಕ್ಕಿತ್ತಾದರೂ ಜನ ಇದನ್ನು ಒಪ್ಪಿಕೊಂಡಿರಲಿಲ್ಲ. ಸಿನಿಮಾದ ಟಿಕೆಟ್ ದರ ಹೆಚ್ಚಳವಾಗಿರುವುದಕ್ಕೆ ತಮ್ಮ ಅಸಮಾಧಾನವನ್ನು ದಾಖಲಿಸಿದ್ದರು. ಇದರ ಬೆನ್ನಲ್ಲೇ ಆನ್‌ಲೈನ್‌ನಲ್ಲಿ ಸಿನಿಮಾ ರಿಲೀಸ್ ಆಗಿದೆ ಎಂದು ಕೇಳಿ ಸಿನಿಮಾ ತಂಡ, ನಿರ್ದೇಶಕರು ಹಾಗೂ ವಿತರಕರು ಕಂಗಾಲಾಗಿದ್ದಾರೆ. ಈ ಸಿನಿಮಾ ಹಲವು ವರ್ಷಗಳ ಪರಿಶ್ರಮ ಹಾಗೂ ಕೋಟ್ಯಾಂತರ ರೂಪಾಯಿ ಬಂಡವಾಳದ ನಂತರ ತೆರೆಕಂಡಿದೆ. ಕೆಜಿಎಫ್ ರೇಂಜ್‌ಗೆ ಈ ಸಿನಿಮಾವನ್ನು ತೆಗೆದುಕೊಂಡು ಹೋಗ್ತೀವಿ ಎಂದು ಈ ಸಿನಿಮಾದ ತಂಡ ಹೇಳಿಕೊಂಡಿತ್ತು. ಈ ರೀತಿ ಇರುವಾಗಲೇ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿರುವುದು ವರದಿಯಾಗಿದೆ.












Click it and Unblock the Notifications