ಇದ್ದಕ್ಕಿದ್ದಂತೆ ಬಿರುಕುಬಿಟ್ಟ ಭೂಮಿ : ನೆಲದಡಿಯಿಂದ ಹೊಮ್ಮಿತು ನೀರಿನ ಕಾರಂಜಿ, ದೃಶ್ಯ ನೋಡಿ ದಂಗಾದ ಜನ

ಮಳೆಗಾಲದಲ್ಲಿ ಗುಡ್ಡ ಕುಸಿತ, ರಸ್ತೆ ಕುಸಿತ, ಪೈಪ್‌ಲೈನ್ ಒಡೆಯುವುದು ಸಾಮಾನ್ಯವಾಗಿ ಕೇಳಿ ಬರುವ ಸುದ್ದಿ. ಆದರೆ ಪುಣೆಯ ತಲೆಗಾಂವ್ ದಭಾಡೆಯಲ್ಲಿ ನಡೆದ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ಇಲ್ಲಿ, ಸಾಮಾನ್ಯ ರಸ್ತೆ ಇದ್ದಕ್ಕಿದ್ದಂತೆ ಬಿರುಕು ಬಿಟ್ಟಿದೆ. ನೆಲದ ಕೆಳಗಿನಿಂದ ನೀರು ಚಿಮ್ಮಲು ಪ್ರಾರಂಭಿಸಿದೆ. ಕೆಲವೇ ಸೆಕೆಂಡುಗಳಲ್ಲಿ, ರಸ್ತೆಯ ಉದ್ದಕ್ಕೂ ನೀರು ತುಂಬಿ ಹರಿದಿದೆ. ಈ ಘಟನೆ ಸ್ಥಳೀಯರನ್ನು ಆತಂಕಕ್ಕೆ ಗುರಿ ಮಾಡಿದೆ.

ಬೆಚ್ಚಿ ಬೀಳಿಸಿದ ದೃಶ್ಯಾವಳಿ:

ಇಡೀ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಜನರನ್ನು ಬೆಚ್ಚಿಬೀಳಿಸಿದೆ. ರಸ್ತೆಯಲ್ಲಿ ಎಲ್ಲವೂ ಸಾಮಾನ್ಯವಾಗಿಯೇ ಇರುತ್ತದೆ. ಜನ ನಡೆದಾಡುತ್ತಿದ್ದಾರೆ, ವಾಹನಗಳು ಓಡಾಡುತ್ತಿವೆ. ಇದ್ದಕ್ಕಿದ್ದಂತೆ ರಸ್ತೆಯ ಮಧ್ಯದಿಂದ ನೀರು ಪ್ರವಹಿಸಿ ಭಾರೀ ಒತ್ತಡದಿಂದ ನೆಲ ಬಾಯಿ ಬಿಡುತ್ತದೆ. ಕೆಲವೇ ಕ್ಷಣಗಳಲ್ಲಿ ಎಲ್ಲಿ ನೋಡಿದರಲ್ಲಿ ನೀರು ತುಂಬಿ ಕೊಳ್ಳುತ್ತದೆ.

Pune Shocker

ಪೈಪ್‌ಲೈನ್ ಪರೀಕ್ಷೆಯ ಸಮಯದಲ್ಲಿ ನಡೆದ ಅಪಘಾತ:

ವರದಿಗಳ ಪ್ರಕಾರ, ನೀರು ಸರಬರಾಜು ಯೋಜನೆಯ ಭಾಗವಾಗಿ ಸುಮಾರು ಒಂದೂವರೆ ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಹೊಸ ಪೈಪ್‌ಲೈನ್ ಹಾಕಲಾಗಿತ್ತು. ಅಧಿಕಾರಿಗಳು ಇತ್ತೀಚೆಗೆ ಪೈಪ್‌ಲೈನ್ ಪರೀಕ್ಷೆಯನ್ನು ಪ್ರಾರಂಭಿಸಿದ್ದರು. ಈ ಸಮಯದಲ್ಲಿ, ಪೈಪ್‌ನಲ್ಲಿನ ಒಂದು ಜಾಯಿಂಟ್ ಇದ್ದಕ್ಕಿದ್ದಂತೆ ತೆರೆದು, ತೀವ್ರ ಒತ್ತಡದಲ್ಲಿ ನೀಉ ಹೊರಕ್ಕೆ ಬಿಡುಗಡೆಯಾಗಿದೆ. ನೀರಿನ ಒತ್ತಡ ಎಷ್ಟು ತೀವ್ರವಾಗಿತ್ತೆಂದರೆ ರಸ್ತೆ ಅದನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಭೂಮಿಯ ಮೇಲ್ಮೈ ಬಿರುಕು ಬಿಟ್ಟಿದೆ. ಕೆಲವೇ ಕ್ಷಣಗಳಲ್ಲಿ, ರಸ್ತೆಯ ಮಧ್ಯದಲ್ಲಿ ಒಂದು ದೊಡ್ಡ ಕುಳಿ ರೂಪುಗೊಂಡಿದೆ.

ವೈರಲ್ ವಿಡಿಯೋ ಎಫೆಕ್ಟ್: ದೆಹಲಿ-ಮುಂಬೈ ಹೆದ್ದಾರಿ ಕಳಪೆ ಕಾಮಗಾರಿ ಗುತ್ತಿಗೆದಾರ ಅಮಾನತು
ವೈರಲ್ ವಿಡಿಯೋ ಎಫೆಕ್ಟ್: ದೆಹಲಿ-ಮುಂಬೈ ಹೆದ್ದಾರಿ ಕಳಪೆ ಕಾಮಗಾರಿ ಗುತ್ತಿಗೆದಾರ ಅಮಾನತು

ತನಿಖೆಯಲ್ಲಿ ಬಹಿರಂಗವಾದ ಪ್ರಮುಖ ನಿರ್ಲಕ್ಷ್ಯ:

ಪ್ರಾಥಮಿಕ ತನಿಖೆಯಲ್ಲಿ ಪೈಪ್‌ಲೈನ್ ಅಳವಡಿಕೆಯ ಸಮಯದಲ್ಲಿ ತಾಂತ್ರಿಕ ನಿರ್ಲಕ್ಷ್ಯ ಕಂಡುಬಂದಿದೆ ಎಂದು ತಿಳಿದುಬಂದಿದೆ. ಪೈಪ್‌ಗಳನ್ನು ಸರಿಯಾಗಿ ಅಳವಡಿಸಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದಾಗಿ ಪರೀಕ್ಷೆಯ ಸಮಯದಲ್ಲಿ ಜಾಯಿಂಟ್ ತೆರೆದು ಇಡೀ ರಸ್ತೆಗೆ ಹಾನಿಯಾಗಿದೆ. ಜವಾಬ್ದಾರಿಯುತ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಲೆಗಾಂವ್ ಮುನ್ಸಿಪಲ್ ಕೌನ್ಸಿಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ದಪ್ಕೇಕರ್ ಹೇಳಿದ್ದಾರೆ. ಪೈಪ್‌ಲೈನ್ ದುರಸ್ತಿ ಮತ್ತು ರಸ್ತೆ ಪುನರ್ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಅವರಿಂದಲೇ ಭರಿಸಲಾಗುವುದು ಎಂದು ಹೇಳಿದ್ದಾರೆ.

ವಿಡಿಯೋ ನೋಡಿದ ಜನರಿಂದ ಹತ್ತು ಹಲವು ಪ್ರಶ್ನೆಗಳು:

ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಜನರು ಇದಕ್ಕೆ ನಿರಂತರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಪೈಪ್‌ಲೈನ್ ಸರಿಯಾಗಿ ಹಾಕಿದ್ದರೆ ಇಂಥಹ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಅನೇಕ ಬಳಕೆದಾರರು ಪ್ರಶ್ನಿಸಿದ್ದಾರೆ. ಸಾರ್ವಜನಿಕ ಯೋಜನೆಗಳಲ್ಲಿ ಮೊದಲಿನಿಂದಲೂ ಗುಣಮಟ್ಟಕ್ಕೆ ಆದ್ಯತೆ ನೀಡಿದರೆ, ಇಂಥಹ ಘಟನೆಗಳನ್ನು ತಪ್ಪಿಸಬಹುದು ಎಂದು ಕೆಲವರು ಹೇಳಿದ್ದಾರೆ. ಈ ಮಧ್ಯೆ, ಇತರರು ಇದನ್ನು ಸರ್ಕಾರಿ ಕೆಲಸದಲ್ಲಿನ ನಿರ್ಲಕ್ಷ್ಯ ಎಂದು ಉಲ್ಲೇಖಿಸಿದ್ದಾರೆ.

ಬೆಂಗಳೂರಲ್ಲಿ 1000 ಕಿಮೀ ಹೊಸ ರೂಪದ ಪಾದಚಾರಿ ಮಾರ್ಗ; ಮೊದಲ ಹಂತದಲ್ಲಿ 100 ಕಿಮೀ ಅಭಿವೃದ್ಧಿ
ಬೆಂಗಳೂರಲ್ಲಿ 1000 ಕಿಮೀ ಹೊಸ ರೂಪದ ಪಾದಚಾರಿ ಮಾರ್ಗ; ಮೊದಲ ಹಂತದಲ್ಲಿ 100 ಕಿಮೀ ಅಭಿವೃದ್ಧಿ

ಮಳೆಗೂ ಮುಂಚೆಯೇ ಹೆಚ್ಚಾದ ತೊಂದರೆ:

ಪುಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಿವಾಸಿಗಳಿಗೆ ಈಗಾಗಲೇ ಗಮನಾರ್ಹ ತೊಂದರೆ ಉಂಟಾಗಿದೆ. ಅನೇಕ ಪ್ರದೇಶಗಳು ಜಲಾವೃತವಾಗಿದ್ದು, ರಸ್ತೆಗಳು ಹಾಳಾಗಿವೆ. ಸಂಚಾರ ದಟ್ಟಣೆಯಿಂದ ಬಳಲುತ್ತಿವೆ. ಈ ಪೈಪ್‌ಲೈನ್ ಒಡೆದಿರುವುದು ಸ್ಥಳೀಯರ ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆ. ಜನದಟ್ಟಣೆಯ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದರೆ, ಎಷ್ಟು ದೊಡ್ಡ ಮಟ್ಟದ ಹಾನಿಯಾಗಿರುತ್ತಿತ್ತು ಎನ್ನುವುದನ್ನು ಊಹಿಸುವುದಕ್ಕೂ ಭಯವಾಗುತ್ತಿದೆ ಎಂದು ನಿವಾಸಿಗಳು ಹೇಳುತ್ತಾರೆ.

ಮಳೆಗಾಲದ ಸುರಕ್ಷತೆಯ ಬಗ್ಗೆ ಹೆಚ್ಚಿದ ಆತಂಕ:

ಪುಣೆಯಲ್ಲಿ ಮಳೆಯ ಸಮಯದಲ್ಲಿ ಸಂಭವಿಸುವ ಘಟನೆಗಳು, ಮಳೆಗಾಲ ಬರುವ ಮೊದಲು ಸಾರ್ವಜನಿಕ ನಿರ್ಮಾಣ ಯೋಜನೆಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಎಷ್ಟು ಗಂಭೀರವಾಗಿ ಪರಿಶೀಲಿಸಲಾಗುತ್ತದೆ ಎಂಬ ಪ್ರಶ್ನೆಗಳನ್ನು ಮತ್ತೊಮ್ಮೆ ಹುಟ್ಟುಹಾಕಿವೆ. ರಸ್ತೆಯ ಕೆಳಗೆ ಪೈಪ್‌ಲೈನ್ ಒಡೆದುಹೋಗುವುದು ಮತ್ತು ತೆರೆದ ಚರಂಡಿಯಲ್ಲಿ ಬಿದ್ದು ಮುಗ್ಧ ಮಗು ಮೃತಪಡುವಂಥಹ ಘಟನೆಗಳು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತಿವೆ.

ರಸ್ತೆ ಒಡೆದಿರುವ ಸಿಸಿಟಿವಿ ದೃಶ್ಯಾವಳಿಗಳು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಜವಾಬ್ದಾರಿಯುತ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಿದರೆ ಭವಿಷ್ಯದಲ್ಲಿ ಇಂಥಹ ನಿರ್ಲಕ್ಷ್ಯ ಪುನರಾವರ್ತನೆಯಾಗುವುದಿಲ್ಲ ಎನ್ನುವುದು ಜನರ ಅಭಿಮತ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+