ಆಯೋಧ್ಯೆ ರಾಮ ಮಂದಿರದಲ್ಲೀಗ ಚಿನ್ನ ಲೇಪಿತ ರಾಮಚರಿತ ಮಾನಸ ಕೃತಿ, ಬೆಳ್ಳಿ ಇಟ್ಟಿಗೆ ಮಾಯ, ಶಾ, ಮೋದಿ ಮೌನ
ಅಯೋಧ್ಯೆ: ರಾಮ ಜನ್ಮ ಭೂಮಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳು ಒಂದಾದ ನಂತರ ಮತ್ತೊಂದು ಬೆಳಕಿಗೆ ಬರುತ್ತಿದ್ದು, ಇದೀಗ ಸುಮಾರು 5 ಕೋಟಿ ಮೌಲ್ಯದ ಚಿನ್ನ ಲೇಪಿತ ರಾಮ ಚರಿತ ಮಾನಸ ಹಾಗೂ 200 ಕೆಜಿ ಬೆಳ್ಳಿ ಗಟ್ಟಿಯೂ ಕಣ್ಮರೆಯಾಗಿದೆ ಎಂದು ಹೇಳಲಾಗುತ್ತಿದೆ. ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಯ ಕೇಂದ್ರವಾದ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಬೇಕೆಂಬ ಕನಸು ಈಡೇರಿತು ಎನ್ನುವಾಗಲೇ ಒಂದಾದ ಮೇಲೆ ಮತ್ತೊಂದು ಅವ್ಯವಹಾರಗಳು ಬೆಳಕಿಗೆ ಬರುತ್ತಿದೆ ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ತರುತ್ತಿದೆ. ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಇದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಜವಾಬ್ದಾರಿಯುತವಾಗಿ ಈ ಲೋಪವನ್ನು ಎತ್ತಿ ಹಿಡಿದಿದ್ದೇನೋ ನಿಜ. ಆದರೆ, ರಾಮ ಮಂದಿರವನ್ನೇ ಮುಂದಿಟ್ಟು ಕೊಂಡು ದಶಕಗಳಿಂದ ಹಲವೆಡೆ ಗೆಲ್ಲುತ್ತಿರುವ ಬಿಜೆಪಿ ಅಗತ್ಯದಷ್ಟು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಅಲ್ಲದೇ ಇಷ್ಟು ದೊಡ್ಡ ಅವ್ಯವಹಾರ ಬೆಳಕಿಗೆ ಬಂದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಮೌನವಾಗಿರುವುದೇಕೆ ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ.
ಅಯೋಧ್ಯೆ ರಾಮ ಮಂದಿರ ಅಕ್ರಮ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ವ್ಯವಸ್ಥಿತವಾಗಿ ನಡೆಸಿರುವ ಪಿತೂರಿ ಎಂಬ ಆರೋಪಿ ಕೇಳುತ್ತಿದ್ದರೂ ಮೋದಿ-ಶಾ ದ್ವಯರು ಪ್ರತಿಕ್ರಿಯೆ ನೀಡುತ್ತಿಲ್ಲ. ಅಷ್ಟೇ ಅಲ್ಲದೇ ಜುಲೈ 6, 2026ರ ಸೋಮವಾರ ಇಂಥದ್ದೊಂದು ಹಗರಣ ಬೆಳಕಿಗೆ ಬಂದ ನಂತರ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮೊದಲ ಮಹತ್ವದ ಸಭೆ ನಡೆಯುತ್ತಿದೆ. ನಿರ್ಗಮಿತ ಕಾರ್ಯದರ್ಶಿ ಚಂಪತ್ ರಾಯ್, ಟ್ರಿಸ್ಟಿ ಅನಿಲ್ ಮಿಶ್ರಾ ಭವಿಷ್ಯವೂ ನಿರ್ಧಾರವಾಗಲಿದೆ. ದೇವಾಲಯವನ್ನು ನಿರ್ವಹಿಸಲು ಹೊಸ ಆಡಳಿತ ಮಂಡಳಿ ರಚಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಎಸ್ಐಟಿ ಈ ಬಗ್ಗೆ ಮಧ್ಯಂತರ ವರದಿಯನ್ನು ಈಗಾಗಲೇ ನೀಡಿದ್ದು, ಈ ಬಗ್ಗೆಯೂ ಸ್ಪಷ್ಟನೆ ನೀಡಲಾಗುವುದು. ಟ್ರಸ್ಟ್ ಆಡಳಿತ ನಿರ್ವಹಣೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸುವ ಬಗ್ಗೆ ಈ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.

ಠಾಕ್ರೆ ನೀಡಿದ ಬೆಳ್ಳಿ ಗಟ್ಟಿ:
ಶಿವಸೇನೆಯ ಉದ್ಧವ್ ಠಾಕ್ರೆ ಅಯೋಧ್ಯೆ ರಾಮ ಮಂದಿರಕ್ಕೆ 4 ಹಾಗೂ 200 ಕೆಜಿ ಬೆಳ್ಳಿ ಗಟ್ಟಿಯನ್ನು ದೇಣಿಗೆಯನ್ನಾಗಿ ನೀಡಿದ್ದರು. ಇದೀಗ ಅದೂ ಕಳವಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದಾವುದರಲ್ಲಿಯೂ ನಮ್ಮ ಪಾತ್ರವಿಲ್ಲವೆಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖಜಾಂಚಿ ಗೋವಿಂದ್ ದೇವ್ ಗಿರಿ ಸ್ಪಷ್ಟನೆ ನೀಡಿದ್ದಾರೆ. ಇದೇ ಮೊದಲ ಸಲ ಪ್ರತಿಕ್ರಿಯೆ ನೀಡಿರುವ ದೇವರಿಗೆ ನೀಡಿರುವ ಅವರು ದೇಣಿಗೆಯನ್ನು ದುರ್ಬಳಕೆ ಮಾಡಿಕೊಂಡು, ಕೋಟ್ಯಾಂತರ ರಾಮ ಭಕ್ತರ ಭಾವನೆಗೆ ಧಕ್ಕೆಯಾಗಿದೆ, ಎಂದಿದ್ದಾರೆ.
ಚಿನ್ನ ಲೇಪಿತ ರಾಮ ಚರಿತ ಮಾನಸವೂ ಇಲ್ಲ:
ಮಾಜಿ ಕೇಂದ್ರ ಗೃಹ ಕಾರ್ಯದರ್ಶಿಎಸ್. ಲಕ್ಷ್ಮಿನಾರಾಯಣ್ ನೀಡಿದ್ದ ಸುಮಾರು ₹5 ಕೋಟಿ ಮೌಲ್ಯದ ಚಿನ್ನ ಲೇಪಿತ ರಾಮಚರಿತಮಾನಸ ಪ್ರತಿಯನ್ನೂ ರಾಮ ಮಂದಿರದಿಂದ ಸ್ಥಳಾಂತರಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಲಕ್ಷ್ಮಿನಾರಾಯಣ್ ಅವರ ಕುಟುಂಬವು ಈ ಪ್ರತಿಯನ್ನು 2024ರ ಏಪ್ರಿಲ್ನಲ್ಲಿ ದೇವಸ್ಥಾನ ಟ್ರಸ್ಟ್ಗೆ ದಾನ ಮಾಡಿತ್ತು. ನಂತರ ಆ ಪ್ರತಿಯನ್ನು ದೇವಸ್ಥಾನದ ಆವರಣದಿಂದ ಬೇರೆಡೆಗೆ ಕೊಂಡೊಯ್ಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎಲ್ಲಾ ದೇಣಿಗೆ ವಸ್ತುಗಳನ್ನು ದೇವಸ್ಥಾನದಲ್ಲಿ ಪ್ರದರ್ಶಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಇದೇ ವೇಳೆ ದೇವಸ್ಥಾನಕ್ಕೆ ಬಂದ ದೇಣಿಗೆಗಳ ದುರುಪಯೋಗ ಮತ್ತು ಕಳವು ಆರೋಪಗಳ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ವಿಶೇಷ ತನಿಖಾ ತಂಡ (SIT) ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕರಗಿಸಿ ಅವುಗಳ ಗುರುತು ಅಳಿಸಲು ಪ್ರಯತ್ನ ಮಾಡಲಾಗಿದೆಯೇ ಎಂಬುದನ್ನೂ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಬಂಧಿಸಲಾಗಿದೆ.














Click it and Unblock the Notifications