2016ರಲ್ಲಿ ಗಮನ ಸೆಳೆದ 24 ಚಿತ್ರಗಳು

Posted By:
Subscribe to Oneindia Kannada

ಒಂದು ವರ್ಷ ಹಾಗೇ ಸರಿದು ಹೋಗುತ್ತಿದೆ. ಕಳೆದ ವರ್ಷ ಆಗದ, ಇಲ್ಲದ ಎಷ್ಟೋ ಸಂಗತಿಗಳು ಈ ಬಾರಿ ಅನುಭವಕ್ಕೆ ಬಂದಿವೆ. ಒಲಿಂಪಿಕ್ಸ್ ನಲ್ಲಿ ಭಾರತದ ಮರ್ಯಾದೆಯನ್ನು ಹೆಣ್ಣುಮಕ್ಕಳೆಲ್ಲ ಸೇರಿ ಉಳಿಸಿದ್ದಾರೆ. ಭಾರತ ಕ್ರಿಕೆಟ್ ನ ಉಚ್ಛ್ರಾಯ ಕಾಲವನ್ನು ನೋಡುತ್ತಿದ್ದೇವೆ. ಪಾಕಿಸ್ತಾನದ ಕ್ಯಾತೆ ಮುಂದುವರಿದಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ದಿಗ್ಭ್ರಮೆಯಿಂದ ಅಮೆರಿಕನ್ನರೇ ಇನ್ನೂ ಹೊರಬಂದಿಲ್ಲ. ಮದರ್ ತೆರೇಸಾ ಅವರಿಗೆ ವ್ಯಾಟಿಕನ್ ಸಿಟಿಯಿಂದ ಸಂತಪದವಿ ಖಾತ್ರಿಯಾಗಿದೆ. ಆ ತಾಯಿಯ ಆತ್ಮಕ್ಕೆ ಹೂಗುಚ್ಛ ಇಟ್ಟಂತಾಗಿದೆ. ಬೆಂಗಳೂರಿಗೆ ಬಂದಿದ್ದ ಬ್ರಿಟಿಷ್ ಪ್ರಧಾನಿ ತೆರೇಸಾ ಮೇ ಸೀರೆಯುಟ್ಟು ಸೋಮೇಶ್ವರ ದೇವಸ್ಥಾನಕ್ಕೆ ತೆರಳಿದ್ದರು.[ನೋಟು ನಿಷೇಧ 50 ದಿನ, ಸಮಸ್ಯೆ ಸರಿಹೋಗಿಲ್ಲ, ಸ್ಥಿತಿ ಸಹಜವಾಗಿಲ್ಲ]

ಹೀಗೆ ಅಪರೂಪದ, ಪದೇ ಪದೇ ನೋಡಬೇಕು ಅನ್ನಿಸುವಂಥ ಹಲವು ಪಿಟಿಐ ಚಿತ್ರಗಳನ್ನು ಪೋಣಿಸಿಟ್ಟ ಮುತ್ತಿನ ಹಾರದಂತೆ ನಿಮ್ಮ ಮುಂದೆ ಇಡಲಾಗಿದೆ. ಸಿನಿಮಾ ನೋಡಿದ ರೀತಿಯಲ್ಲಿ ನಿಮ್ಮ ಕಣ್ಣೆದುರು 2016ನೇ ಇಸವಿ ಫ್ಲ್ಯಾಷ್ ಬ್ಯಾಕ್ ನಂತೆ ಬಂದುಹೋದರೆ ಸಂತೋಷ. ಏನೇ ಆದರೂ ಈ ಫೋಟೋಗಳನ್ನು ನೋಡಿದಾಗ ನಿಮಗೆ ಏನನ್ನಿಸಿತು ಎಂದು ಒಂದು ಸಾಲು ಕಾಮೆಂಟ್ ಹಾಕಿ.

ಹಿಲರಿ ಕ್ಲಿಂಟನ್ ಗೆ ಬೆನ್ನು ತೋರಿದ ಗೆಲುವು

ಹಿಲರಿ ಕ್ಲಿಂಟನ್ ಗೆ ಬೆನ್ನು ತೋರಿದ ಗೆಲುವು

ಈ ವರ್ಷ ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಈವರೆಗಿನ ಎಲ್ಲ ಚುನಾವಣೆಗಿಂತ ಭಿನ್ನವಾಗಿತ್ತು. ರಾಜಕೀಯ ಪ್ರವೇಶಿಸಿ ಹದಿನೆಂಟೇ ತಿಂಗಳಾದ ಡೊನಾಲ್ಡ್ ಟ್ರಂಪ್ ಅನುಭವಿ ರಾಜಕಾರಣಿ ಹಿಲರಿ ಕ್ಲಿಂಟನ್ ರನ್ನು ಮಣಿಸಿಬಿಟ್ಟರು. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹಿಲರಿ ಕ್ಲಿಂಟನ್ ತಮ್ಮ ಬೆಂಬಲಿಗರ ಜತೆಗೆ ಹಬ್ ಕಾಫಿ ರೋಸ್ಟರ್ಸ್ ಹೊರಭಾಗದಲ್ಲಿ ಫೋಟೋಗೆ ಪೋಸ್ ಕೊಟ್ಟಾಗ ಸೆರೆ ಸಿಕ್ಕ ಚಿತ್ರ ಇದು.

ಸಂತ ಮದರ್ ತೆರೇಸಾ

ಸಂತ ಮದರ್ ತೆರೇಸಾ

ಮದರ್ ತೆರೇಸಾ ಆವರಿಗೆ ವ್ಯಾಟಿಕನ್ ಸಿಟಿಯಿಂದ ಸಂತ ಪದವಿ ಖಾತ್ರಿ ಆದ ದಿನ ಕೋಲ್ಕತ್ತಾದಲ್ಲಿರುವ ಮದರ್ ತೆರೇಸಾ ಅವರ ಮನೆ ಎದುರು ಪ್ರವಾಸಿಗರು ಫೋಟೋ ಕ್ಲಿಕ್ಕಿಸಿದ ಪರಿ ಇದು.

ಮೇರಾ ಪ್ಯಾರೇ ದೇಶ್ ವಾಸಿಯೋ

ಮೇರಾ ಪ್ಯಾರೇ ದೇಶ್ ವಾಸಿಯೋ

ನವದೆಹಲಿಯ ಕೆಂಪು ಕೋಟೆಯಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ (ಎಪ್ಪತ್ತನೇ ವರ್ಷ) ದಿನಾಚರಣೆ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರ ಕಡೆಗೆ ಕೈ ಬೀಸಿದರು.

ಹೋಳಿ ಸಂಭ್ರಮದಲ್ಲಿ ರಾಹುಲ್

ಹೋಳಿ ಸಂಭ್ರಮದಲ್ಲಿ ರಾಹುಲ್

ಈ ವರ್ಷವಿಡೀ ಸುದ್ದಿಯಲ್ಲಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನವದೆಹಲಿಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಹೋಳಿ ಹಬ್ಬದ ಆ‌ಚರಣೆ ಸಂಭ್ರಮಿಸಿದ್ದು ಹೀಗೆ.

ಬೈಕ್ ನಲ್ಲಿ ಸಂಸತ್ ಗೆ ಬಂದ ಮಹಿಳೆ

ಬೈಕ್ ನಲ್ಲಿ ಸಂಸತ್ ಗೆ ಬಂದ ಮಹಿಳೆ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ಹಾರ್ಲೆ ಡೇವಿಡ್ ಸನ್ ಬೈಕ್ ನಲ್ಲಿ ಸಂಸತ್ ಗೆ ಬಂದಿದ್ದರು.

ಹಮೀದ್ ಅನ್ಸಾರಿ ಪುಸ್ತಕ ಬಿಡುಗಡೆ

ಹಮೀದ್ ಅನ್ಸಾರಿ ಪುಸ್ತಕ ಬಿಡುಗಡೆ

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಪುಸ್ತಕ ಸಿಟಿಜನ್ ಅಂಡ್ ಸೊಸೈಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತಿತರರು ಭಾಗವಹಿಸಿದ್ದರು.

ವಿಜಯದ ಸಂಭ್ರಮ

ವಿಜಯದ ಸಂಭ್ರಮ

ಬಾಂಗ್ಲಾದೇಶದಲ್ಲಿ ನಡೆದ ಟ್ವೆಂಟಿ-20 ಏಷ್ಯಾಕಪ್ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಜಯಗಳಿಸಿದ ಸಂಭ್ರಮದಲ್ಲಿ ಭಾರತ ಕ್ರಿಕೆಟ್ ತಂಡ.

ನಾಲ್ಕು ವರ್ಷಕ್ಕೊಮ್ಮೆ ಬರುವ ಫೆಬ್ರವರಿ 29

ನಾಲ್ಕು ವರ್ಷಕ್ಕೊಮ್ಮೆ ಬರುವ ಫೆಬ್ರವರಿ 29

ಫೆಬ್ರವರಿ 29ರಂದು ಜನಿಸಿದ ಮಕ್ಕಳನ್ನು ಶಿಮ್ಲಾದ ಆಸ್ಪತ್ರೆಯ ವಾರ್ಡ್ ನಲ್ಲಿ ಸಾಲಾಗಿ ಮಲಗಿಸಿದ್ದಾಗ ಸೆರೆ ಸಿಕ್ಕ ಚಿತ್ರವಿದು.

ಗಣರಾಜ್ಯೋತ್ಸವ ತಯಾರಿ

ಗಣರಾಜ್ಯೋತ್ಸವ ತಯಾರಿ

ಭಾರತೀಯ ವಾಯುದಳ ಗಣರಾಜ್ಯೋತ್ಸವಕ್ಕೆ ಪೂರ್ವಭಾವಿಯಾಗಿ ತಯಾರಿ ನಡೆಸುತ್ತಿದ್ದಾಗ ಸಂಸತ್ ಭವನದ ಮೇಲೆ ಕಂಡು ಬಂದ ದೃಶ್ಯವಿದು.

ಜೈಲ್ ಭರೋ ಆಂದೋಲನ

ಜೈಲ್ ಭರೋ ಆಂದೋಲನ

ಹಾರ್ದಿಕ ಪಟೇಲ್ ಬಿಡುಗಡೆಗಾಗಿ ಒತ್ತಾಯಿಸಿ ಮಹೆಸಾನದಲ್ಲಿ ನಡೆದ ಜೈಲ್ ಭರೋ ಆಂದೋಲನದ ವೇಳೆ ಪ್ರತಿಭಟನಾನಿರತರ ಮೇಲೆ ಪೊಲೀಸ್ ಪ್ರಹಾರ.

ಸಚಿನ್ ಜನ್ಮದಿನಾಚರಣೆ

ಸಚಿನ್ ಜನ್ಮದಿನಾಚರಣೆ

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ 43ನೇ ಹುಟ್ಟುಹಬ್ಬವನ್ನು ಮುಂಬೈನಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡುವ ಮೂಲಕ ಆಚರಿಸಿಕೊಂಡರು.

ಶಕ್ತಿಮಾನ್ ಸಾವು

ಶಕ್ತಿಮಾನ್ ಸಾವು

ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಮೃತಪಟ್ಟ ಪೊಲೀಸ್ ಕುದುರೆ ಶಕ್ತಿಮಾನ್.

ರಜತ ತಾರೆ

ರಜತ ತಾರೆ

ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಗೆದ್ದ ಪಿ.ವಿ.ಸಿಂಧು ಹೈದರಾಬಾದ್ ನ ಗೋಪಿಚಂದ್ ಅಕಾಡೆಮಿಯಲ್ಲಿ ಪದಕಕ್ಕೆ ಮುತ್ತಿಟ್ಟ ಕ್ಷಣ

ಜಿಮ್ನಾಸ್ಟಿಕ್ ಮಿಂಚು

ಜಿಮ್ನಾಸ್ಟಿಕ್ ಮಿಂಚು

ರಿಯೋ ಡಿ ಜನೈರೋನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ ದೀಪಾ ಕರ್ಮಾಕರ್

ಶಸ್ತ್ರಾಸ್ತ್ರಕ್ಕೆ ಬೆಂಕಿ

ಶಸ್ತ್ರಾಸ್ತ್ರಕ್ಕೆ ಬೆಂಕಿ

ಕೀನ್ಯಾದ ನೈರೋಬಿ ಬಳಿ ಕಾನೂನುಬಾಹಿರವಾಗಿ ಇಟ್ಟುಕೊಂಡಿದ್ದ ಐದು ಸಾವಿರ ಶಸ್ತ್ರಾಸ್ತ್ರಗಳನ್ನು ಬೆಂಕಿಯಲಿ ಸುಡಲಾಯಿತು. ಈ ಪೈಕಿ ಕೆಲವು ವಶಪಡಿಸಿಕೊಂಡಿದ್ದಾಗಿದ್ದರೆ, ಕೆಲವು ತಾವಾಗಿಯೇ ಒಪ್ಪಿಸಿದ್ದಾಗಿತ್ತು.

ಚಿರತೆಗೆ ದೊಣ್ಣೆ ಪೆಟ್ಟು

ಚಿರತೆಗೆ ದೊಣ್ಣೆ ಪೆಟ್ಟು

ಜನರಲ್ಲಿ ಗಾಬರಿಗೆ ಕಾರಣವಾಗಿದ್ದ ಚಿರತೆಯನ್ನು ಮಂದಾವರ್ ಗ್ರಾಮದವರು ದೊಣ್ಣೆಗಳಿಂದ ಥಳಿಸಿದ್ದು ಹೀಗೆ.

ಕಂಗನಾ ರನೌತ್

ಕಂಗನಾ ರನೌತ್

ವಯಾಕಾಂ 18 ಮೋಷನ್ ಪಿಕ್ಚರ್ಸ್ ಐದು ವರ್ಷಗಳು ಸಂಪೂರ್ಣ ಮಾಡಿದ ಸಂದರ್ಭದಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಬಾಲಿವುಡ್ ತಾರೆ ಕಂಗನಾ ರನೌತ್ ಕ್ಯಾಮೆರಾಕ್ಕೆ ಪೋಸ್ ಕೊಟ್ಟರು.

ಸೀರೆಯುಟ್ಟ ಬ್ರಿಟಿಷ್ ಪ್ರಧಾನಿ

ಸೀರೆಯುಟ್ಟ ಬ್ರಿಟಿಷ್ ಪ್ರಧಾನಿ

ಬೆಂಗಳೂರಿಗೆ ಭೇಟಿನ ನೀಡಿದ್ದ ಬ್ರಿಟಿಷ್ ಪ್ರಧಾನಿ ತೆರೇಸಾ ಮೇ ಸೋಮೇಶ್ವರ ದೇವಸ್ಥಾನ ದರ್ಶನಕ್ಕೆ ತೆರಳಿದ್ದ ವೇಳೆ ಸೀರೆಯುಟ್ಟಿದ್ದರು.

ಆಸ್ಕರ್ ಅಂಗಳದಲ್ಲಿ ಪ್ರಿಯಾಂಕಾ ಚೆಲುವು

ಆಸ್ಕರ್ ಅಂಗಳದಲ್ಲಿ ಪ್ರಿಯಾಂಕಾ ಚೆಲುವು

ಲಾಸ್ ಏಂಜಲೀಸ್ ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ

ಅಧ್ಯಕ್ಷರ ಸ್ಪರ್ಧೆ

ಅಧ್ಯಕ್ಷರ ಸ್ಪರ್ಧೆ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (ಎಡಭಾಗ) ಅಲ್ಲಿನ ರಾಷ್ಟ್ರೀಯ ಜೂಡೋ ತಂಡದ ಸದಸ್ಯ ಮಿಖಾಯಿಲ್ ಪುಲ್ಯಾವ್ ಜತೆ ಸ್ಪರ್ಧಿಸಿದ ಪರಿ ಇದು.

ರಾಜ ಭೋಜನ

ರಾಜ ಭೋಜನ

ಪ್ರಿನ್ಸ್ ವಿಲಿಯಂ ಮತ್ತು ಪತ್ನಿ ಕೆಥರೀನ್ ಅಸ್ಸಾಂನ ಕಾಜಿರಂಗದ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಕೊಂಬಿನ ಮರಿ ಘೇಂಡಾಮೃಗಳಿಗೆ ಆಹಾರ ಉಣಿಸಿದ ಸಂದರ್ಭ.

ತುರ್ತು ಕಾರ್ಯಾಚರಣೆ

ತುರ್ತು ಕಾರ್ಯಾಚರಣೆ

ತೈವಾನ್ ನ ತೈನನ್ ನಲ್ಲಿ ಭೂಕಂಪದಿಂದ ಕುಸಿದ ಕಟ್ಟಡದ ಬಳಿ ತುರ್ತು ಕಾರ್ಯಾಚರಣೆಯಲ್ಲಿ ತೊಡಗಿದ್ದ ತಂಡ.

ನೋಟು ಬದಲಾವಣೆ

ನೋಟು ಬದಲಾವಣೆ

ಗುಜರಾತ್ ನ ಗಾಂಧಿನಗರದಲ್ಲಿ ಹೊಸ ನೋಟು ಬದಲಾವಣೆ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್.

ಸ್ವಚ್ಛತಾ ಅಭಿಯಾನ

ಸ್ವಚ್ಛತಾ ಅಭಿಯಾನ

ನಟ ಅಮಿತಾಭ್ ಬಚ್ಚನ್, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸ್ವಚ್ಛತಾ ಅಭಿಯಾನದ ಅಂಗವಾಗಿ ಮುಂಬೈನ ಜೆ.ಜೆ.ಆಸ್ಪತ್ರೆಯನ್ನು ಸ್ವಚ್ಛಗೊಳಿಸಿದ ಕ್ಷಣ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Various national and interantional events best pictures of 2016 by PTI.
Please Wait while comments are loading...