Property: ಬೆಂಗಳೂರು ಸೇರಿ ದೇಶ 7 ನಗರಗಳಲ್ಲಿ ಆಸ್ತಿಗೆ ಭರ್ಜರಿ ಬೆಲೆ!

Property: ಬೆಂಗಳೂರು ಸೇರಿದಂತೆ ದೇಶದ ಏಳು ಪ್ರಮುಖ ನಗರಗಳಲ್ಲಿ ಭೂಮಿ ಬೆಲೆ ಹಾಗೂ ಬಂಡವಾಳ ಮೌಲ್ಯ ಭರ್ಜರಿ ಹೆಚ್ಚಳವಾಗಿದೆ ಎನ್ನುವ ರಿಪೋರ್ಟ್ ಬಂದಿದೆ. ಇದರಿಂದ ಬೆಂಗಳೂರಿನಲ್ಲಿ ಆಸ್ತಿ ಖರೀದಿ ಮಾಡಬೇಕು ಎಂದು ಕಾಯುತ್ತಿದ್ದವರಿಗೆ ಕೆಲವೊಂದು ಕಾರಣಕ್ಕೆ ಭರ್ಜರಿ ಗುಡ್‌ನ್ಯೂಸ್‌ ಸಿಕ್ಕಂತೆ ಆಗಿದೆ. ಅಲ್ಲದೆ ಬೆಂಗಳೂರಿನಲ್ಲಿ ಆಸ್ತಿ ಮಾರಾಟ ಮಾಡುವವರಿಗೆ ಭರ್ಜರಿ ಲಾಭದ ನಿರೀಕ್ಷೆ ಬಂದಿದೆ. 2021 ಹಾಗೂ 2024ರ ಅಂತ್ಯದ ವೇಳೆಗೆ ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ 7 ಪ್ರಮುಖ ಮೆಟ್ರೋ ಪಾಲಿಟಿಕ್ಸ್‌ ನಗರಗಳಲ್ಲಿ ಭೂಮಿ ಹಾಗೂ ಕ್ಯಾಪಿಟಲ್‌ ವ್ಯಾಲ್ಯೂ ಭರ್ಜರಿ ಹೆಚ್ಚಳವಾಗಿದೆ.

ದೇಶದ ಪ್ರಮುಖ ಏಳು ನಗರಗಳಲ್ಲಿ ಬಂಡವಾಳ ಮೌಲ್ಯವು ಬರೋಬ್ಬರಿ 128ರಷ್ಟು ಏರಿಕೆ ಕಂಡಿದೆ. ಇದರಿಂದ ರಿಯಲ್‌ ಎಸ್ಟೇಟ್‌ಗೆ ಸಹಾಯವಾಗಿದೆ. ಮಾರುಕಟ್ಟೆಯಲ್ಲಿ ಬಾಡಿಗೆ ಮೌಲ್ಯವು ಒಟ್ಟಾರೆ ಬಂಡವಾಳ ಮೌಲ್ಯಕ್ಕಿಂತ ಕಡಿಮೆ ಆಗಿದೆ ಎಂದು ಅನರಾಕ್ ವರದಿ ಮಾಡಿದೆ. ಈ ವರದಿಯಲ್ಲಿ ಮೆಟ್ರೋ ಸಿಟಿಗಳಗಾಗಿರುವ ಬೆಂಗಳೂರು, ಮುಂಬೈ, ದೆಹಲಿ - ಎನ್‌ಸಿಆರ್‌ ಹಾಗೂ ಹೈದರಾಬಾದ್‌ನಂತಹ ಪ್ರಮುಖ ನಗರ ಪ್ರದೇಶಗಳು ಸೇರ್ಪಡೆ ಆಗಿವೆ. ಈ ನಗರಗಳಲ್ಲಿ ಬಾಡಿಗೆ ಮೌಲ್ಯಕ್ಕಿಂತಲೂ ಸರಾಸರಿ ಬಂಡವಾಳ ಮೌಲ್ಯ ಹೆಚ್ಚಾಗಿವೆ ಎನ್ನುವುದು ಬಹಿರಂಗವಾಗಿದೆ. ಬಂಡವಾಳ ಮೌಲ್ಯ ಎನ್ನುವುದು ಆಸ್ತಿಯ ಮೇಲೆ ಹೂಡಿಕೆ ಮಾಡುವ ಪ್ರಮಾಣ ಎಂದಾಗಿದೆ.

Property Prices Skyrocketing in 7 Cities Across Country including Bengaluru

ನಿರ್ಮಾಣ ಕಟ್ಟಡ ಅಥವಾ ಆಸ್ತಿ ವಿಚಾರದಲ್ಲಿ ಬಳಸುವ ಆಸ್ತಿ ಬಂಡವಾಳ ಮೌಲ್ಯವು ಆಸ್ತಿ ಅಥವಾ ಆಸ್ತಿಯ ಒಟ್ಟು ಮೌಲ್ಯವನ್ನು ಸೂಚಿಸುತ್ತದೆ. ಇದು ಅದರ ಸ್ವಾಧೀನ, ನಿರ್ಮಾಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಒಳಗೊಳ್ಳುತ್ತದೆ.

Take a Poll

ಇನ್ನು ಪುಣೆ, ಕೋಲ್ಕತ್ತಾ ಹಾಗೂ ಚೆನ್ನೈನಲ್ಲಿ ಆಸ್ತಿ ಬಂಡವಾಳ ಮೌಲ್ಯವು ಬಾಡಿಗೆ ಮೌಲ್ಯಕ್ಕಿಂತ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಬಂಡವಾಳ ಮೌಲ್ಯವು ಭರ್ಜರಿ ಹೆಚ್ಚಳವಾಗಿದೆ. ಈ ಭಾಗದಲ್ಲಿ ಶೇ 67ರಷ್ಟು ಬಂಡವಾಳ ಮೌಲ್ಯವಿದೆ. ಇನ್ನು ಸರ್ಜಾಪುರ ರಸ್ತೆಯಲ್ಲಿ ಮಾಸಿಕ ಬಾಡಿಗೆ ಮೌಲ್ಯವು ಬಂಡವಾಳ ಮೌಲ್ಯಕ್ಕಿಂತ ಹೆಚ್ಚಾಗಿದೆ.

ಹೂಡಿಕೆದಾರರಿಗೆ ಬೆಸ್ಟ್‌: ಬೆಂಗಳೂರಿನ ಈ ಎರಡು ಪ್ರಮುಖ ಪ್ರದೇಶಗಳಲ್ಲಿ ಜಾಗದ ಮೇಲಿನ ಹೂಡಿಕೆಗೆ ಬೆಸ್ಟ್‌ ಟೈಮ್‌ ಎಂದೇ ಹೇಳಲಾಗುತ್ತಿದೆ. ಈ ಭಾಗದಲ್ಲಿ ಹೂಡಿಕೆ ಹೆಚ್ಚಾಗಿದೆ. ಜನ ಇತ್ತೀಚಿನ ವರ್ಷಗಳಲ್ಲಿ ಭೂಮಿ ಖರೀದಿ ಮಾಡುವುದು ಹೆಚ್ಚಾಗಿದ್ದು. ಜಾಗ ಖರೀದಿಯ ಲಾಭ - ನಷ್ಟದ ಲೆಕ್ಕಾಚಾರವು ಜೋರಾಗಿ ಇದೆ.

ಬೆಂಗಳೂರಿನಲ್ಲಿ ಭೂಮಿ ಬೆಲೆ ಏರಿಳಿತ: ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಆದರೆ ಬೆಂಗಳೂರಿನ ಕೆಲವು ಭಾಗದಲ್ಲಿ ಭೂಮಿಯ ಬೆಲೆಯು ಏರಿಳಿತವಾಗುತ್ತಿದೆ. ಐಟಿ ವಲಯದಲ್ಲಿನ ಉದ್ಯೋಗ ನಷ್ಟವು ಬೆಂಗಳೂರಿನ ರಿಯಲ್‌ ಎಸ್ಟೇಟ್‌ನ ಮೇಲೆ ಪರಿಣಾಮ ಬೀರಿದೆ. ದೊಡ್ಡ ಮಟ್ಟದ ಆದಾಯ ಗಳಿಸುತ್ತಿರುವವರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಇರುವುದರಿಂದ ರಿಯಲ್‌ ಎಸ್ಟೇಟ್‌ನ ಮೇಲೆ ಪರಿಣಾಮ ಬೀರಿದೆ. ಬೆಂಗಳೂರಿನಲ್ಲಿ ಜಾಗವನ್ನು ಚಿನ್ನದ ಕೋಳಿ ಮೊಟ್ಟೆ ಅಂತಲೇ ಪರಿಗಣಿಸಲಾಗುತ್ತದೆ. ಆದರೆ ಈ ಏರಿಳಿತವು ಹೊಸ ಸಂಚಲನವನ್ನು ಸೃಷ್ಟಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+