ಖಾಸಗಿ ಬಸ್ ಟಿಕೆಟ್ ದರ ವಿಮಾನ ಪ್ರಯಾಣಕ್ಕಿಂತಲೂ ದುಬಾರಿ
ಬೆಂಗಳೂರು, ಮೇ 1: ಮೇ 4ರಂದು ಖಾಸಗಿ ಬಸ್‌ಗಳ ಟಿಕೆಟ್ ದರ ಎಂಟು ಪಟ್ಟು ಹೆಚ್ಚಳ ಮಾಡಿ ಜನರ ಸುಲಿಗೆಗೆ ಹೊಂಚು ಹಾಕಿವೆ.
ಮೇ 3ರ ನಂತರ ಬಸ್‌ಗಳ ಸಂಚಾರಕ್ಕೆ ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ಇನ್ನೇನು ಆರಂಭಗೊಳ್ಳಲಿದೆ. ಈ ಸಂದರ್ಭವನ್ನು ಬಳಸಿಕೊಳ್ಳಲು ಖಾಸಗಿ ಬಸ್‌ಗಳ ಮಾಲೀಕರು ಮುಂದಾಗಿದ್ದಾರೆ.
ಕೆಲವು ಬಸ್‌ಗಳು ಬೆಂಗಳೂರಿನಿಂದ ಹುಬ್ಬಳ್ಳಿ, ಬೆಳಗಾವಿ, ಮುಂಬೈ ಹೀಗೆ ಇತರೆ ಪ್ರದೇಶಗಳಿಗೆ ತೆರಳುವವರಿಗೆ ಪ್ರತಿ ಟಿಕೆಟ್‌ಗೆ 8500 ರೂ ದರ ನಿಗದಿಪಡಿಸಲಿದ್ದಾರೆ.
ಸಾಮಾನ್ಯ ಶುಲ್ಕಕ್ಕಿಂತ ಎಂಟು ಪಟ್ಟು ಹೆಚ್ಚಾದಂತಾಗಿದೆ.ಹಾಗೆಯೇ ವಿಮಾನ ಟಿಕೆಟ್ ದರಕ್ಕಿಂತಲೂ ಹೆಚ್ಚಳವಾದಂತಾಗಿದೆ.

ಹೈದರಾಬಾದ್‌ಗೆ 5400 ರೂ. ಒಟ್ಟಿನಲ್ಲಿ 3 ಸಾವಿರಕ್ಕಿಂತ ಹೆಚ್ಚಿನ ಹಣವನ್ನೇ ತೆರಬೇಕಾಗುತ್ತದೆ. ಇದೇ ಮೊದಲ ಬಾರಿಗೆ ಖಾಸಗಿ ಬಸ್‌ಗಳು ಟಿಕೆಟ್‌ಗೆ ಇಷ್ಟೊಂದು ದರ ನಿಗದಿ ಮಾಡಿದೆ.
ಏಪ್ರಿಲ್ 15ರ ಬಳಿಕ ಲಾಕ್‌ಡೌನ್ ತೆರವುಗೊಳಿಸುವ ವಿಶ್ವಾಸವಿತ್ತು. ಆದರೆ ಮೇ 3ರವರೆಗೆ ವಿಸ್ತರಣೆ ಮಾಡಿದ್ದರು. ಆದರೆ ವಿಮಾನ ಹಾಗೂ ರೈಲು ಸಂಚಾರ ಆರಂಭವಾಗುವ ಯಾವುದೇ ಲಕ್ಷಣಗಳಿಲ್ಲ, ಆದರೆ ಬಸ್ ಓಡಾಡಬಹುದೇನೋ ಎನ್ನುವ ವಿಶ್ವಾಸವನ್ನು ಹೊಂದಿದ್ದಾರೆ.
ಒಂದೊಮ್ಮೆ ಆನ್‌ಲೈನ್ ಬುಕಿಂಗ್ ಆರಂಭಿಸಿದರೆ ಜನರು ಲಾಕ್‌ಡೌನ್ ತೆರವುಗೊಳಿಸಲಾಗಿದೆ ಎಂದು ಭಾವಿಸುತ್ತಾರೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಸಾಕಷ್ಟು ಬಸ್‌ಗಳು ಕಳೆದ ಎರಡು ತಿಂಗಳಿನಿಂದ ಸಂಕಷ್ಟದಲ್ಲಿದೆ. ಲಾಕ್‌ಡೌನ್ ತೆರವುಗೊಳಿಸಿದ ಬಳಿಕವೂ ಬಸ್‌ನಲ್ಲಿ ಕೇವಲ ಶೇ.50ರಷ್ಟು ಮಂದಿ ಮಾತ್ರ ಪ್ರಯಾಣಿಸಬಹುದಾಗಿದೆ. ಹಾಗಿದ್ದಾಗ ಪ್ರಯಾಣಿಕರು ಸಂಚಾರ ನಡೆಸುತ್ತಾರೆ ಎನ್ನುವುದು ಖಾತ್ರಿ ಇಲ್ಲ.
ನಾವು ನಾಲ್ಕೈದು ಪಟ್ಟು ಹಣವನ್ನು ತೆತ್ತು ಬೆಂಗಳೂರಿಗೆ ಬರಲು ಸಾಧ್ಯವಿಲ್ಲ, ಕೆಎಸ್‌ಆರ್‌ಟಿಸಿ ತನ್ನ ಬುಕಿಂಗ್ ಆರಂಭಿಸುತ್ತದೆ ಎನ್ನುವ ನಂಬಿಕೆ ಇದೆ ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.
ಬಸ್‌ದರ ಪಟ್ಟಿ
ಹೈದರಾಬಾದ್ 5,400 ರೂ.
ಮುಂಬೈ 8,500 ರೂ.
ಪುಣೆ 4000 ದಿಂದ 8500
ಚೆನ್ನೈ 3000 ರೂ.
ಎರ್ನಾಕುಲಮ್ 2500 ರೂ.
ಗೋವಾ 2500 ರೂ.
ಮಂಗಳೂರು 1710 ರೂ.
ಬೆಳಗಾವಿ 8500 ರೂ.
ಹುಬ್ಬಳ್ಳಿ 8500 ರೂ.
ಶಿವಮೊಗ್ಗ 3000 ರೂ.












Click it and Unblock the Notifications