ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಜೊತೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯುದ್ಧದ ಬಗ್ಗೆ ಹೇಳಿದ್ದೇನು ?
ಇರಾನ್ ಹಾಗೂ ಇಸ್ರೇಲ್ ಸಂಘರ್ಷ ಹೊಸ ಸ್ವರೂಪವನ್ನು ಪಡೆದುಕೊಂಡಿದೆ. ಅಮೆರಿಕ ಈ ಯುದ್ಧದಲ್ಲಿ ನೇರವಾಗಿ ಭಾಗಿಯಾಗುವ ಮೂಲಕ ಹೊಸ ಸಂಚಲನವೇ ಸೃಷ್ಟಿಯಾಗಿದೆ. ಈ ರೀತಿ ಇರುವಾಗಲೇ ಭಾರತವು ಸಹ ಈ ಯುದ್ಧದ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್‌ನ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಭಾರತವು ಇಸ್ರೇಲ್ ಹಾಗೂ ಇರಾನ್‌ನೊಂದಿಗೆ ಸಮಾನವಾದ ರಾಜತಾಂತ್ರಿಕ ಸಂಬಂಧವನ್ನು ಹೊಂದಿದೆ. ಸಂಕಷ್ಟದ ಸಮಯದಲ್ಲಿ ಇಸ್ರೇಲ್ ಮೊದಲು ಭಾರತಕ್ಕೆ ಬೆಂಬಲ ಸೂಚಿಸುತ್ತಿದೆ. ಈ ರೀತಿ ಇರುವಾಗ ಇರಾನ್‌ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದೇನು. ಇಸ್ರೇಲ್ ಹಾಗೂ ಇರಾನ್ ಯುದ್ಧದ ಬಗ್ಗೆ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷರೊಂದಿಗೆ ಮಹತ್ವದ ಮಾತುಕತೆಯನ್ನು ನಡೆಸಿದ್ದಾರೆ. ಇಸ್ರೇಲ್ - ಇರಾನ್ ನಡುವಿನ ಯುದ್ಧ ಹಾಗೂ ಈ ಯುದ್ಧಕ್ಕೆ ಅಮೆರಿಕ ಸಹ ಎಂಟ್ರಿ ಕೊಟ್ಟಿರುವ ಸಂದರ್ಭದಲ್ಲಿ ಭಾರತದ ಮಾತುಕತೆಯು ಮಹತ್ವ ಪಡೆದುಕೊಂಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ಪೋನ್ ಮೂಲಕ ಮಾತನಾಡಿದ್ದಾರೆ. ಮೋದಿ ಅವರು ಇರಾನ್‌ನೊಂದಿಗೆ ಮಾತನಾಡಿದ್ದೇನು ಎನ್ನುವುದನ್ನು ನೋಡೋಣ.

ಇರಾನ್ ಅಧ್ಯಕ್ಷರಿಗೆ ಕಾಲ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಇಸ್ರೇಲ್‌ನೊಂದಿಗೆ ಎದುರಾಗಿರುವ ಸಂಘರ್ಷವನ್ನು ಕೂಡಲೇ ಪರಿಹರಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ. ಇರಾನ್‌ನ ಮೇಲೆ ಅಮೆರಿಕ ದೇಶವು ಸರಣಿ ಬಾಂಬ್ ದಾಳಿಗಳನ್ನು ಮಾಡಿದೆ. ಇದಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಮಾತನಾಡಿರುವುದು ಮಹತ್ವ ಪಡೆದುಕೊಂಡಿದೆ. ಇರಾನ್ ಅಧ್ಯಕ್ಷ ಮಸೂದ್ ಅವರೊಂದಿಗೆ ನಾನು ಮಾತನಾಡಿದ್ದೇನೆ.
ಸದ್ಯ ನಡೆದಿರುವ ಪರಿಸ್ಥಿತಿಯ ಬಗ್ಗೆ ಸುದೀರ್ಘವಾಗಿ ಮಾತನಾಡಲಾಗಿದೆ. ಈ ಸಂಘರ್ಷಕ್ಕೆ ಸಂಬಂಧಿಸಿದಂತೆ ನಾನು ಆಳವಾದ ಕಳವಳವನ್ನು ವ್ಯಕ್ತಪಡಿಸಿದ್ದೇನೆ. ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಈಗ ಎದುರಾಗಿರುವ ಸಂಘರ್ಷವನ್ನು ಮುಕ್ತಾಯಗೊಳಿಸಬೇಕು. ಸಾಧ್ಯವಾದಷ್ಟು ಬೇಗನೆ ಶಾಂತಿ, ಭದ್ರತೆ ಹಾಗೂ ಸ್ಥಿರತೆಯನ್ನು ಸ್ಥಾಪಿಸುವಂತೆ ಹೇಳಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಭಾರತ ನಿರ್ಣಯ ತೆಗೆದುಕೊಳ್ಳಲಿ: ಇನ್ನು ಇಸ್ರೇಲ್ ಹಾಗೂ ಇರಾನ್ ಯುದ್ಧ ವಿಚಾರವನ್ನು ಭಾರತ ಖಂಡಿಸಬೇಕು. ಒಂದು ನಿರ್ದಿಷ್ಟ ನಿರ್ಣಯವನ್ನು ತೆಗೆದುಕೊಳ್ಳಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ. ಇರಾನ್ ಪರವಾದ ನಿಲುವು ತೆಗೆದುಕೊಳ್ಳಬೇಕು ಎಂದೂ ಕೆಲವರು ಒತ್ತಾಯಿಸಿದ್ದಾರೆ. ಆದರೆ, ಈ ವಿಚಾರದಲ್ಲಿ ಭಾರತವು ತನ್ನ ತಟಸ್ಥ ನಿಲುವನ್ನು ಮುಂದುವರಿಸಿದೆ ಎಂದು ಹೇಳಲಾಗಿದೆ.












Click it and Unblock the Notifications