ವೈಟ್ ಹೌಸ್ ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿರುವ ವಿಶ್ವದ ಏಕೈಕ ನಾಯಕ

ವಾಷಿಂಗ್ಟನ್, ಏಪ್ರಿಲ್ 11: ಅಮೆರಿಕಾದ ಅಧ್ಯಕ್ಷರ ಅಧಿಕೃತ ಕಚೇರಿ ಮತ್ತು ನಿವಾಸ ದಿ ವೈಟ್ ಹೌಸ್, ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿದ್ದು, 21.5 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದೆ.

ಶ್ವೇತ ಭವನ, ಟ್ವಿಟ್ಟರ್ ನಲ್ಲಿ ಕೇವಲ ಹತ್ತೊಂಬತ್ತು ಜನರನ್ನು ಮಾತ್ರ ಫಾಲೋ ಮಾಡುತ್ತಿದ್ದು, ಇದರಲ್ಲಿ ಅಮೆರಿಕಾಗೆ ಸಂಬಂಧಪಟ್ಟವರ ಹೊರತಾಗಿ, ಫಾಲೋ ಮಾಡುತ್ತಿರುವುದು, ಭಾರತಕ್ಕೆ ಸಂಬಂಧಪಟ್ಟ ಅಕೌಂಟ್ ಗಳನ್ನು ಮಾತ್ರ.

ವೈಟ್ ಹೌಸ್, ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರ ಪತ್ನಿ ಮೆಲಾನಿಯಾ ಟ್ರಂಪ್, ಕ್ಯಾಟೆ ಮಿಲ್ಲರ್, ಅಲ್ಲಿನ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಅಕೌಂಟ್ ಅನ್ನು ಫಾಲೋ ಮಾಡುತ್ತಿದೆ.

PM Narendra Modi only world leader White House follows on Twitter

ಅಮೆರಿಕಾ ಹೊರತಾದ ಅಕೌಂಟ್ ಅನ್ನು ಶ್ವೇತ ಭವನ ಹಿಂಬಾಲಿಸುತ್ತಿರುವುದೆಂದರೆ, ಭಾರತದಲ್ಲಿನ ಅಮೆರಿಕಾ ದೂತಾವಾಸ, ಅಮೆರಿಕಾದಲ್ಲಿನ ಭಾರತ ದೂತಾವಾಸ ಕಚೇರಿ, ಭಾರತದ ರಾಷ್ಟ್ರಪತಿ ಕಚೇರಿ ಮತ್ತು ಭಾರತದ ಪ್ರಧಾನಮಂತ್ರಿ ಕಾರ್ಯಾಲಯ.

ಇದನ್ನು ಹೊರತಾಗಿ, ಈಗ ಶ್ವೇತ ಭವನ, ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಂಬಾಲಿಸುತ್ತಿದೆ. ಮೋದಿ, ಟ್ವಿಟ್ಟರ್ ನಲ್ಲಿ 55.3 ಹಿಂಬಾಲಕರನ್ನು ಹೊಂದಿದ್ದಾರೆ.

ಅಮೆರಿಕಾ ಹೊರತಾದ ವಿಶ್ವದ ಏಕೈಕ ಮುಖಂಡರನ್ನು ಶ್ವೇತ ಭವನ ಫಾಲೋ ಮಾಡುತ್ತಿರುವುದೆಂದರೆ, ಅದು ಮೋದಿಯ ಅಕೌಂಟ್ ಮಾತ್ರ. ಭಾರತ ಮಲೇರಿಯಾಕ್ಕೆ ನೀಡುವ ಹೈಡ್ರೋಕ್ಸಿಕ್ಲೋರೋಕ್ವಿನ್ ಲಸಿಕೆಯನ್ನು ಅಮೆರಿಕಾಗೆ ನೀಡಿದ ನಂತರ, ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+