ಸಮೀಕ್ಷೆ: ಉತ್ತರಪ್ರದೇಶ ಮತ್ತು ನಿರ್ಣಾಯಕ 4 ರಾಜ್ಯಗಳು

ನವದೆಹಲಿ, ಜ 24: ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯಾವುದೇ ಪಕ್ಷಗಳಿಗೆ ಉತ್ತರ ಪ್ರದೇಶ ನಿರ್ಣಾಯಕ ರಾಜ್ಯ. ಯಾಕೆಂದರೆ ಅಲ್ಲಿ ಒಟ್ಟು ಇರುವ ಲೋಕಸಭಾ ಕ್ಷೇತ್ರ 80. ಸದ್ಯ, ಉತ್ತರ ಪ್ರದೇಶದಲ್ಲಿ ಮೋದಿ ಪರ ಅಲೆ ಚೆನ್ನಾಗಿ ಬೀಸುತ್ತಿರುವುದು ಬಿಜೆಪಿ ಪಾಲಿಗೆ ಸಂತೋಷದ ವಿಚಾರ. (ಸಮೀಕ್ಷೆ: ಬಿಜೆಪಿ ಅಧಿಕಾರದ ರಾಜ್ಯಗಳಲ್ಲಿ ಯಾರು ಮುಂದೆ)

ಹದಿನೈದು ವರ್ಷಗಳ ಹಿಂದೆ ಕಲ್ಯಾಣ್ ಸಿಂಗ್ ಅವಧಿಯಲ್ಲಿ ಬಿಜೆಪಿಗೆ ಇದ್ದ ಪ್ರಾಭಲ್ಯತೆ ನಂತರದ ದಿನಗಳಲ್ಲಿ ಬಿಎಸ್ಪಿ ಮತ್ತು ಎಸ್ಪಿ ಪಕ್ಷದ ಮುಂದೆ ಮಂಕಾಗುತ್ತಾ ಸಾಗಿತು. ನೆಹರೂ, ಗಾಂಧಿ ಕುಟುಂಬಕ್ಕೆ ರಾಜಕೀಯ ಕರ್ಮಭೂಮಿಯಾಗಿರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ಅಷ್ಟಕಷ್ಟೇ.

ಈ ತಿಂಗಳಲ್ಲೇ ಲೋಕಸಭೆಗೆ ಚುನಾವಣೆ ನಡೆದರೆ ಜನರ ಒಲವು ಯಾವ ಪಕ್ಷದತ್ತ ಎನ್ನುವ ಸಮೀಕ್ಷೆಯನ್ನು ಐಬಿಎನ್ ನ್ಯಾಷನಲ್ ಪೋಲ್ ಟ್ರ್ಯಾಕರ್ ಮತ್ತು ರಾಜನೀತಿ ಜಂಟಿಯಾಗಿ ನಡೆಸುತ್ತಿದೆ. ಆ ಸಮೀಕ್ಷೆಯ ಅನ್ವಯ ಪಶ್ಚಿಮ, ಕೇಂದ್ರ ಮತ್ತು ಉತ್ತರ ಭಾರತದಲ್ಲಿ ಬಿಜೆಪಿಗೆ ಅನುಕೂಲಕರವಾದ ವಾತಾವರಣವಿದೆ. (ಚುನಾವಣಾಪೂರ್ವ ಸಮೀಕ್ಷೆ: ಕರ್ನಾಟಕದಲ್ಲಿ ಯಾರಿಗೆ ಹೆಚ್ಚು ಸ್ಥಾನ)

ದೆಹಲಿ ಹೊರತು ಪಡಿಸಿ ದೇಶದ ಇತರೆಡೆ ಬಹುತೇಕ ಮತದಾರ ನರೇಂದ್ರ ಮೋದಿಯೇ ಮುಂದಿನ ಪ್ರಧಾನಮಂತ್ರಿ ಪಟ್ಟಕ್ಕೆ ಅರ್ಹ ವ್ಯಕ್ತಿ ಎಂದು ಅಭಿಪ್ರಾಯ ಪಟ್ಟಿದ್ದಾನೆ. (ಚುನಾವಣಾಪೂರ್ವ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ಯಾರು)

ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ, ಪಂಜಾಬ್ ಮತ್ತು ಹರ್ಯಾಣದಲ್ಲಿ ಐಬಿಎನ್ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು ಸೀಟು? ಸ್ಲೈಡ್ ನೋಡಿ..

ದೆಹಲಿ: ಯಾರ ದರ್ಬಾರ್?

ದೆಹಲಿ: ಯಾರ ದರ್ಬಾರ್?

ಅಧಿಕಾರಕ್ಕೆ ಬಂದ ನಂತರ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಿದೆ. ಲೋಕಸಭಾ ಚುನಾವಣೆಯಲ್ಲೂ ಆಮ್ ಆದ್ಮಿ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಭಾರೀ ಹಿನ್ನಡೆ ಉಂಟು ಮಾಡಲಿದೆ. ಇಲ್ಲಿನ ಮತದಾರ ಪ್ರಧಾನಿ ಹುದ್ದೆಗೆ ಮೋದಿಗಿಂತ ಕೇಜ್ರಿವಾಲ್ ಉತ್ತಮ ಎನ್ನುತ್ತಿದ್ದಾನೆ. ಇಲ್ಲಿನ ಒಟ್ಟು ಏಳು ಕ್ಷೇತ್ರಗಳ ಪೈಕಿ ಆಮ್ ಆದ್ಮಿ 4 ರಿಂದ 6, ಬಿಜೆಪಿ 1 ರಿಂದ 3 ಸ್ಥಾನ ಮತ್ತು ಕಾಂಗ್ರೆಸ್ ಅಕೌಂಟ್ ಓಪನ್ ಮಾಡುವ ಸಾಧ್ಯತೆ ಕಮ್ಮಿ ಎನ್ನುತ್ತದೆ ಸಮೀಕ್ಷೆ.

ಹರ್ಯಾಣದಲ್ಲಿ ಯಾರು ಮುಂದೆ?

ಹರ್ಯಾಣದಲ್ಲಿ ಯಾರು ಮುಂದೆ?

ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಶೇ. 9ರಷ್ಟು ಮತಗಳ ಹಿನ್ನಡೆಯಾಗಲಿದೆ. ಆದರೂ, ಕಾಂಗ್ರೆಸ್ ಇತರ ಪಕ್ಷಗಳಿಗಿಂತ ಹೆಚ್ಚಿನ ಸೀಟ್ ಪಡೆಯಲಿದೆ. ಆಮ್ ಆದ್ಮಿ ಪಕ್ಷದ ಪ್ರಭಾವ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಸಮೀಕ್ಷೆಯಲ್ಲಿ ಪಕ್ಷಗಳಿಗೆ ಎಷ್ಟು ಸ್ಥಾನ ಸಿಗಬಹುದೆಂದು ಹೇಳಿಲ್ಲ. ಶೇಕಡಾವಾರು ಮತದ ಆಧಾರ ಮೇಲೆ ಹೇಳುವುದಾದರೆ (ಒಟ್ಟು ಸ್ಥಾನಗಳು 10) ಕಾಂಗ್ರೆಸ್ 3 ರಿಂದ 4, ಬಿಜೆಪಿ 2 ರಿಂದ 3, ಆಮ್ ಆದ್ಮಿ 1 ರಿಂದ 2, ಐಎನ್ಎಲ್ಡಿ 1 ರಿಂದ 2 ಮತ್ತು ಇತರರು 0 ರಿಂದ 1.

ರಾಜಸ್ಥಾನ : ವಸುಂಧರಾ ಮೇಡಂ ಜಾದೂ

ರಾಜಸ್ಥಾನ : ವಸುಂಧರಾ ಮೇಡಂ ಜಾದೂ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಿದ ಬಿಜೆಪಿಗೆ ಇಲ್ಲಿ ಲೋಕಸಭಾ ಚುನಾವಣೆಗೂ ಅನುಕೂಲಕರ ವಾತಾವರಣವಿದೆ. ಸಮೀಕ್ಷೆಯ ಪ್ರಕಾರ ಬಿಜೆಪಿ ಇಲ್ಲಿ ಅಸೆಂಬ್ಲಿ ಚುನಾವಣೆಯ ಫಲಿತಾಂಶವನ್ನೇ ಪುನರಾವರ್ತನೆ ಗೊಳಿಸಲಿದೆ.

ಒಟ್ಟು ಕ್ಷೇತ್ರಗಳು : 25
ಬಿಜೆಪಿ : 20 ರಿಂದ 24
ಕಾಂಗ್ರೆಸ್ : 0 ರಿಂದ 2
ಇತರರು: 1 ರಿಂದ 3

ಉತ್ತರ ಪ್ರದೇಶ: ನಾನಾ? ನೀನಾ?

ಉತ್ತರ ಪ್ರದೇಶ: ನಾನಾ? ನೀನಾ?

ಒಟ್ಟು ಸ್ಥಾನಗಳು : 80
ಬಿಜೆಪಿ : 41 ರಿಂದ 49
ಕಾಂಗ್ರೆಸ್ : 4 ರಿಂದ 10
ಬಿಎಸ್ಪಿ : 10 ರಿಂದ 16
ಎಸ್ಪಿ : 8 ರಿಂದ 14
ಇತರರು : 2 ರಿಂದ 6

ಪಂಜಾಬ್ ನಲ್ಲಿ ಯಾರು?

ಪಂಜಾಬ್ ನಲ್ಲಿ ಯಾರು?

ಪಂಜಾಬ್ ನಲ್ಲಿ ಮತಗಳಿಗೆಕ ಆಧಾರದ ಮೇಲೆ ಬಿಜೆಪಿ - ಶಿರೋಮಣಿ ಅಕಾಲಿದಳ ಐದರಿಂದ ಏಳು ಸ್ಥಾನವನ್ನು, ಕಾಂಗ್ರೆಸ್ ಮೂರರಿಂದ ನಾಲ್ಕು ಸ್ಥಾನವನ್ನು ಮತ್ತು ಆಮ್ ಆದ್ಮಿ ಪಕ್ಷ ಒಂದರಿಂದ ಎರಡು ಸ್ಥಾನವನ್ನು ಪಡೆಯ ಬಹುದೆಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ. ರಾಜ್ಯದಲ್ಲಿ ಒಟ್ಟು ಲೋಕಸಭಾ ಕ್ಷೇತ್ರಗಳು 13.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+