ಕೊರೊನಾ ಸೋಂಕಿನಿಂದ ಗುಣಮುಖರಾದವರು ಈ 7 ಅಂಶಗಳನ್ನು ಪಾಲಿಸಿ
ಕೊರೊನಾವೈರಸ್‌ನಿಂದ ಗುಣಮುಖರಾದ ಬಳಿಕ ತಪ್ಪದೇ ಈ ಅಂಶಗಳನ್ನು ಪಾಲಿಸಿ. ಕೊರೊನಾ ಸೋಂಕು ಕೇವಲ ದೇಹಕ್ಕಲ್ಲ, ಮಾನಸಿಕವಾಗಿಯೂ ನಿಮ್ಮನ್ನು ಘಾಸಿಗೊಳಿಸಿರುತ್ತದೆ ಹೀಗಾಗಿ ಕೇವಲ ಮಾತ್ರೆಯಿಂದ ಎಲ್ಲವೂ ಗುಣವಾಗುವುದಿಲ್ಲ.
Recommended Video
ವಿಶ್ವದಾದ್ಯಂತ 22,057,685 ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ, 7,77,535 ಮಂದಿ ಸಾವನ್ನಪ್ಪಿದ್ದಾರೆ. ದಿನದಿಂದ ದಿನಕ್ಕೆ ತಜ್ಞರು ಕೊರೊನಾ ಸೋಂಕಿನ ಕುರಿತು ಹೊಸ ಹೊಸ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಕೊರೊನಾ ಸೋಂಕಿನಿಂದಾಗು ದೀರ್ಘಕಾಲದ ದುಷ್ಪರಿಣಾಮ ಕುರಿತು ನಿಜವಾದ ಉತ್ತರ ಇನ್ನೂ ದೊರೆತಿಲ್ಲ.
ಕೊರೊನಾ ಸೋಂಕು ಕಾಣಿಸಿಕೊಂಡು 8 ತಿಂಗಳು ಕಳೆದಿವೆ, ಮೊಲು ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿತ್ತು. ಈ ಸೋಂಕು ಇಡೀ ದೇಹಕ್ಕೆ ತೊಂದರೆಯುಂಟು ಮಾಡುತ್ತದೆ.

ನಿಮಗಾಗಿ ಕೆಲ ಸಮಯವನ್ನು ಮೀಸಲಿಡಿ
ನೀಮಗೆ ಕೊರೊನಾ ನೆಗೆಟಿವ್ ಬಂದ ಬಳಿಕ ನೀವು ಮನೆಗೆ ತೆರಳಿದರೂ ಕೂಡ ನಿಮ್ಮ ನಾರ್ಮಲ್ ಜೀವನಕ್ಕೆ ಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ಹಳೇ ದಿನಚರಿಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ಬೇಕು ಹೀಗಾಗಿ, ನಿಮಗಾಗಿ ಕೆಲ ಸಮಯವನ್ನು ಮೀಸಲಿಡಿ.

ಮೆಮೊರಿ ಎಕ್ಸರ್ಸೈಸ್ಗಳನ್ನು ಮಾಡಿ
ಪಸಲ್ ಗೇಮ್‌ಗಳನ್ನು ಆಡಿ ಅಥವಾ ಮೆಮೊರಿ ಎಕ್ಸರ್ಸೈಸ್ಗಳನ್ನು ಮಾಡಿ, ಮೆದುಳಿಗೆ ಸಂಬಂಧಿಸಿದ ಆಟಗಳನ್ನು ಆಡಿ, ಪ್ರತಿನಿತ್ಯ ನಿಮ್ಮ ಮೆದುಳು, ಬುದ್ಧಿಯ ಜೊತೆ ಆಟವಾಡಿದರೆ ಆದಷ್ಟು ಬೇಗ ನೀವು ಸಹಜ ಜೀವನಕ್ಕೆ ಮರುಳುತ್ತೀರ.

ಆರೋಗ್ಯ ಲಕ್ಷಣಗಳ ಕುರಿತು ಗಮನವಿರಲಿ
ಕೊರೊನಾ ನೆಗೆಟಿವ್ ಬಂದ ಬಳಿಕ ಮತ್ತೆ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ ಎಂದೇನಿಲ್ಲ ಹಾಗಾಗಿ ನಿಮ್ಮ ಆರೋಗ್ಯದ ಲಕ್ಷಣಗಳ ಕುರಿತು ಗಮನವಿರಲಿ, ಉಸಿರಾಟದ ತೊಂದರೆ ಇರಬಹುದು, ತಲೆನೋವು ಇಂತಹ ಯಾವುದೇ ಲಕ್ಷಣಗಳು ಕಂಡು ಬಂದರೂ ವೈದ್ಯರನ್ನು ಸಂಪರ್ಕಿಸಿ.

ಔಷಧಿಗಳ ಪರಿಷ್ಕರಣೆ
ನಿಮಗೆ ಮೊದಲೇ ಆರೋಗ್ಯದಲ್ಲಿ ತೊಂದರೆಗಳಿದ್ದಲ್ಲಿ, ಆ ಮಾತ್ರೆಗಳನ್ನು ಸೇವಿಸಬೇಕೆ ಬೇಡವೇ ಎಂಬುದರ ಕುರಿತು ವೈದ್ಯರ ಬಳಿ ಸಲಹೆ ಕೇಳಿ, ನಿಮ್ಮ ಔಷಧಗಳನ್ನು ಪರಿಷ್ಕರಿಸಿಕೊಳ್ಳಿ..

ನೆನಪಿರಲಿ, ನೀವು ಕೊರೊನಾಗೆ ಪ್ರತಿರಕ್ಷಕರಲ್ಲ
ನಿಮಗೆ ಕೊರೊನಾ ಸೋಂಕು ಬಂದು ಹೋಗಿದೆ ಅಂದರೆ ನಿಮ್ಮ ದೇಹದಲ್ಲಿ ಕೊರೊನಾ ವಿರುದ್ಧ ಹೋರಾಡುವ ಪ್ರತಿರೋಧಕ ಶಕ್ತಿ ಉಂಟಾಗಿದೆ ಎಂದು ಅರ್ಥವಲ್ಲ, ಮತ್ತೆ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಾರ್ವಜನಿಕರ ಸ್ಥಳಗಳಿಗೆ ತೆರಳುವ ಮುನ್ನ ಮಾಸ್ಕ್, ಗ್ಲೌಸ್ ಬಳಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ.

ನಿಮ್ಮ ಶಕ್ತಿಯನ್ನು ಉಳಿಸಿಕೊಳ್ಳಿ
ನೀವು ಕೊವಿಡ್ 19 ರೋಗದಿಂದ ಚೇತರಿಕೆ ಪಡೆಯುತ್ತಿದ್ದೀರ, ಹೀಗಾಗಿ ನಿಮ್ಮ ಶಕ್ತಿಯನ್ನು ಉಳಿಸಿಕೊಳ್ಳುವುದು ನಿಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ನಿಮ್ಮ ಶಕ್ತಿಯನ್ನು ಕಳೆದುಕೊಳ್ಳುವ ಯಾವುದೇ ಕೆಲಸವನ್ನು ನೀವು ಮಾಡಬೇಡಿ.

ಸಹಾಯವನ್ನು ಕೇಳಿ
ನಿಮಗೆ ಬೇರೊಬ್ಬರ ಸಹಾಯಬೇಕು ಎಂದಾಗ ಅವರ ಸಹಾಯ ಕೇಳಿ, ಅಡುಗೆ ಮಾಡುವುದು, ಅಡುಗೆ ಸಾಮಾನುಗಳನ್ನು ತರುವುದು, ಸೇರಿದಂತೆ ಹಲವು ಕೆಲಸಗಳನ್ನು ಮನೆಯವರ ಬಳಿ ಮಾಡಿಸಿ, ನೀವು ಆಯಾಸ ಮಾಡಿಕೊಳ್ಳಬೇಡಿ.












Click it and Unblock the Notifications