ಬೃಂದಾವನದ ಕೃಷ್ಣಭಕ್ತೆಯರ ನಿರ್ಲಕ್ಷ್ಯವೇಕೆ?

Posted By:
Subscribe to Oneindia Kannada

ಲಕ್ನೋ, ಏ.21: ಅತ್ತ ಮಥುರಾ ನಗರಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಕೃಷ್ಣನ ಆರಾಧಕಿ ಹೇಮಮಾಲಿನಿ ಭರ್ಜರಿ ಪ್ರಚಾರ ನಡೆಸಿದ್ದರೆ ಇತ್ತ ಕೃಷ್ಣ ಪರಮಾತ್ಮ ಇದೇ ಊರಿನಲ್ಲಿ ಸಾವಿರಾರು ಜನ ಕೃಷ್ಣಭಕ್ತೆಯರು ಮತದಾನದಿಂದ ವಂಚಿತರಾಗಿರುವ ಸುದ್ದಿ ಬಂದಿದೆ.

ಗಂಡನನ್ನು ಕಳೆದುಕೊಂಡು, ಮಕ್ಕಳಿಂದಲೂ ಪರಿತ್ಯಕ್ತರಾದ ಈ ಅಬಲೆಯರಿಗೆ ಕೃಷ್ಣ ಪರಮಾತ್ಮನ ಆರಾಧನೆ ಮಾನಸಿಕ ನೆಮ್ಮದಿ, ಶಾಂತಿ ಸಿಗುತ್ತಿದೆ. ಮನೆಯಲ್ಲಿ ವಿಧವೆಯರನ್ನು ಇರಿಸಿಕೊಳ್ಳುವುದು ಅಶುಭ ಎಂಬ ಕೆಟ್ಟ ಸಂಪ್ರದಾಯ ಇಂದಿಗೂ ಭಾರತದ ಹಲವೆಡೆ ಜಾರಿಯಲ್ಲಿರುವುದು ದುರಂತ ಸತ್ಯ.

ಎಲ್ಲಾ ಕಟ್ಟುಪಾಡು, ನೀತಿ ನಿಯಮಗಳನ್ನು ಮೀರಿ ಗೊಲ್ಲನ ಕರೆಗೆ ಓಗೊಟ್ಟು ಬಂದಿರುವ ವಿಧವೆಯರಿಗೆ ಬೃಂದಾವನದ ಸುಲಭ ಇಂಟರ್ ನ್ಯಾಷನಲ್ ಸಂಸ್ಥೆ ಸಹಾಯ ಹಸ್ತ ಚಾಚಿದೆ. ಬಡವ, ನಿರ್ಗತಿಕ ವಿಧವೆಯ ಪಾಲಿಗೆ ಆಶಾಕಿರಣವಾಗಿರುವ ಸಂಸ್ಥೆ, ಆಹಾರ, ವೈದ್ಯಕೀಯ ನೆರವು ನೀಡುತ್ತಿದೆ. ಸರ್ಕಾರದ ನೆರವು ಸಿಕ್ಕಿರುವುದರಿಂದ ತಾತ್ಕಾಲಿಕ ಆಶ್ರಯ ತಾಣಗಳನ್ನು ನಿರ್ಮಿಸಿದೆ.

ಶ್ರೀಕೃಷ್ಣನ ಆವಾಸ ಸ್ಥಾನ ಮಥುರಾ ಜಿಲ್ಲೆಯ ಜನತೆ ತಮ್ಮ 'ಠಾಕೂರ್' ಕೃಷ್ಣ ಪರಮಾತ್ಮನ ಆರಾಧನೆಯನ್ನು ಹೋಳಿ ಹಬ್ಬದ ಸಂದರ್ಭದಲ್ಲಿ ವಿಶಿಷ್ಟವಾಗಿ ಆಚರಿಸಿಕೊಳ್ಳುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ವಿಧವೆಯರು ಬಣ್ಣದ ಹಬ್ಬದ ಆಚರಣೆಯಲ್ಲಿ ತೊಡಗಿಕೊಂಡು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುತ್ತಾರೆ..

Politicians turn blind eye to voteless Vrindavan widows

ಹೇಮಮಾಲಿನಿ ಎಷ್ಟು ಚೆಂದ: ಇಲ್ಲಿನ ರಾಧೇ ಶ್ಯಾಮ್ ಆಶ್ರಮ ನಿವಾಸಿ ಮಂಜು ರಾಯ್ ಅವರು ಬೆಳಗ್ಗಿನ ಉಪಹಾರವನ್ನು ಮರೆತು ಬಿಜೆಪಿ ಅಭ್ಯರ್ಥಿ ಬಾಲಿವುಡ್ ನಟಿ ಹೇಮಮಾಲಿನಿ ನೋಡಿ ಆನಂದ ಅನುಭವಿಸಿದ್ದಾರೆ. ಆದರೆ, ನಮ್ಮ ಆಶ್ರಮದ ಎಲ್ಲರನ್ನು ಆಕೆ ಬಂದು ನೋಡಿದರೆ ನಮಗೆ ಇನ್ನಷ್ಟು ಸೌಲಭ್ಯ, ಮತದಾನದ ಹಕ್ಕು ಸಿಗಬಹುದು. ನಮಗೂ ಮತದಾನ ಮಾಡುವ ಆಸೆ, ಅಧಿಕಾರವಿದೆ ಎಂದು ಮಂಜು ಹೇಳಿದ್ದಾರೆ,

ಇತ್ತೀಚೆಗೆ ಆಶ್ರಮವಾಸಿಗಳಲ್ಲಿ ಕೆಲವರು ಆಧಾರ್ ಕಾರ್ಡ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಮತದಾರರರ ಗುರುತಿನ ಚೀಟಿ ಸಿಕ್ಕಿಲ್ಲ. ಜತೆಗೆ ಮತದಾರರ ಪಟ್ಟಿಯಲ್ಲೂ ಆಶ್ರಮವಾಸಿಗಳ ಹೆಸರು ನಾಪತ್ತೆಯಾಗಿದೆ. ಹೀಗಾಗಿ ಮತದಾನ ಇಲ್ಲಿನವರಿಗೆ ಇಲ್ಲಿ ತನಕ ಕಷ್ಟಕರವಾಗಿದೆ ಎಂದು ಮೈತ್ರಿ ಆಶ್ರಮದ ಮ್ಯಾನೇಜರ್ ಸಂತೋಷ್ ಚತುರ್ವೇದಿ ಪಿಟಿಐಗೆ ಹೇಳಿದ್ದಾರೆ. ಏ.24ರಂದು ಆರನೇ ಹಂತದ ಮತದಾನ ಪ್ರಕ್ರಿಯೆ ಉತ್ತರಪ್ರದೇಶದಲ್ಲಿ ನಡೆಯಲಿದೆ.

ಬಹುತೇಕ ಪಶ್ಚಿಮ ಬಂಗಾಳದ ಮೂಲದವರಾದ ಇಲ್ಲಿನ ವಿಧವೆಯರಲ್ಲಿ ವಯೋವೃದ್ಧೆಯರೇ ಅಧಿಕ ಪ್ರಮಾಣದಲ್ಲಿದ್ದಾರೆ. ಭಜನೆ, ಕೀರ್ತನೆ ಹಾಡುವ ಮೂಲಕ 3 ರು ಹಾಗೂ 100 ಗ್ರಾಮ್ ಅಕ್ಕಿ ಸಂಪಾದಿಸಿಕೊಳ್ಳುತ್ತಿದ್ದಾರೆ. ಇಲ್ಲಿನ ಹಿರಿಯ ವಿಧವೆ 95 ವರ್ಷದ ಕಂಚನ್ ಅವರು ಹೇಳುವ ಪ್ರಕಾರ ಇಲ್ಲಿತನಕ ಯಾವುದೇ ರಾಜಕೀಯ ಪಕ್ಷ ಆಶ್ರಮದತ್ತ ಸುಳಿದಿಲ್ಲ. ವೋಟರ್ ಐಡಿ ಕಾರ್ಡ್ ಬಗ್ಗೆ ಗೊತ್ತಿಲ್ಲ ಎನ್ನುತ್ತಾರೆ. ಮನೆಯಿಂದ ಹೊರಗುಳಿದಿರುವ ನಾವು ಈಗ ದೇಶಕ್ಕೂ ಬೇಡವಾಗಿ ಬದುಕಬೇಕೇ? ಎಂದು ಕೃಷ್ಣಭಕ್ತೆಯರು ಪ್ರಶ್ನಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Most of them have been abandoned by their families but the over 10,000 widows in this city of Lord Krishna have also been abandoned by the country's electoral process as they do not have voting rights.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ