Live

PM Modi Speech Live:ಸಂವಿಧಾನ ದಿನ: ಮೋದಿ ಭಾಷಣದ ಪೂರ್ಣ ಮಾಹಿತಿ ಇಲ್ಲಿದೆ

ನವದೆಹಲಿ, ನವೆಂಬರ್ 26: ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ದೇಶ ಇಂದು 'ಸಂವಿಧಾನ ದಿನ'ವನ್ನು ಆಚರಿಸಲಿದೆ.

ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಂವಿಧಾನ ದಿನ ಹಾಗೂ ಮೂರು ಕೃಷಿ ಕಾನೂನು ವಿರೋಧಿಸಿ ರೈತರು ಪ್ರತಿಭಟನೆ ಶುರುಮಾಡಿ ಇಂದಿಗೆ ಒಂದು ವರ್ಷವಾಗುತ್ತಿದ್ದು, ಈ ವಿಚಾರವನ್ನು ಕೂಡ ಮೋದಿ ಪ್ರಸ್ತಾಪಿಸುವ ಸಾಧ್ಯತೆ ಇದೆ.

ಈ ಐತಿಹಾಸಿಕ ದಿನಾಂಕದ ಮಹತ್ವಕ್ಕೆ ಸೂಕ್ತ ಮಾನ್ಯತೆ ನೀಡುವ ಪ್ರಧಾನಮಂತ್ರಿಯವರ ದೂರದೃಷ್ಟಿ ಆಧರಿಸಿ, 2015ರಿಂದ 'ಸಂವಿಧಾನ ದಿನ' ಆಚರಣೆ ಸಂಪ್ರದಾಯ ಪ್ರಾರಂಭಿಸಲಾಯಿತು.

PM Narendra Modi address on 71st Constitution Day of India Live Updates and Highlights in Kannada

ಸಂವಿಧಾನ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತು ಮತ್ತು ವಿಜ್ಞಾನ ಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಮತ್ತು ಲೋಕಸಭಾ ಸ್ಪೀಕರ್ ಭಾಗವಹಿಸಿ ಮಾತನಾಡಲಿದ್ದಾರೆ. ರಾಷ್ಟ್ರಪತಿಗಳ ಭಾಷಣದ ನಂತರ, ಅವರು ಸಂವಿಧಾನದ ಪೀಠಿಕೆ ವಾಚನ ಮಾಡಲಿದ್ದು, ರಾಷ್ಟ್ರಾದ್ಯಂತ ಜನರು ಅವರೊಂದಿಗೆ ಲೈವ್ ಆಗಿ ಪಾಲ್ಗೊಳ್ಳಲಿದ್ದಾರೆ.

ಇದೇ ವೇಳೆ ಸಂವಿಧಾನ ರಚನಾ ಸಭೆಯ ಚರ್ಚೆಗಳ ಡಿಜಿಟಲ್ ಆವೃತ್ತಿ, ಭಾರತದ ಸಂವಿಧಾನದ ಕ್ಯಾಲಿಗ್ರಾಫ್ ಪ್ರತಿಯ ಡಿಜಿಟಲ್ ಆವೃತ್ತಿ ಮತ್ತು ಇಲ್ಲಿಯವರೆಗಿನ ಎಲ್ಲಾ ತಿದ್ದುಪಡಿಗಳನ್ನು ಒಳಗೊಂಡಿರುವ ಭಾರತದ ಸಂವಿಧಾನದ ನವೀಕರಿಸಿದ ಆವೃತ್ತಿಯನ್ನು ರಾಷ್ಟ್ರಪತಿಗಳು ಬಿಡುಗಡೆ ಮಾಡಲಿದ್ದಾರೆ. ಅಲ್ಲದೆ 'ಸಾಂವಿಧಾನಿಕ ಪ್ರಜಾಪ್ರಭುತ್ವ ಕುರಿತ ಆನ್ಲೈನ್ ರಸಪ್ರಶ್ನೆ'ಯನ್ನು ಉದ್ಘಾಟಿಸಲಿದ್ದಾರೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಸಂಜೆ ಸುಪ್ರೀಂಕೋರ್ಟ್ ಆಯೋಜಿಸಿರುವ ಎರಡು ದಿನಗಳ ಸಂವಿಧಾನ ದಿನಾಚರಣೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ.

Nov 26, 2021, 11:35 am IST

ನಾವು ಕರ್ತವ್ಯದ ಮಾಧ್ಯಮದಿಂದ ಅಧಿಕಾರದ ದಾರಿಯಲ್ಲಿ ನಡೆಯಬೇಕು, ಅಧಿಕಾರವು ಸಮ್ಮಾನದ ಜತೆಗೆ ಜನರಿಗೆ ತಮ್ಮ ಹಕ್ಕನ್ನು ನೀಡುತ್ತದೆ-ಮೋದಿ
Nov 26, 2021, 11:33 am IST

ಸ್ವಾತಂತ್ರ್ಯ ಪೂರ್ವದಲ್ಲಿ ಆಂಗ್ಲರ ಅಧಿಕಾರ ನಡೆಯುತ್ತಿತ್ತು, ಭಾರತೀಯರ ನಾಗರಿಕರಿಗೆ ಅಧಿಕಾರ ಒದಗಿಸಲು ಮಹಾತ್ಮಾ ಗಾಂಧಿ ಸೇರಿದಂತೆ ಹಲವು ಮಂದಿ ಹೋರಾಟ ನಡೆಸಿದರು. ಸ್ವಚ್ಛತೆ ಇರಲಿ, ನಾರಿ ಶಿಕ್ಷಣ, ಆತ್ಮನಿರ್ಭರ ಭಾರತದ ವಿಚಾರ, ಕರ್ತವ್ಯದ ಕುರಿತು ಗಾಂಧಿ ಹೇಳುತ್ತಾ ಹೋದರು. ಆದರೆ ಸ್ವಾತಂತ್ರ್ಯ ನಂತರ ಇದ್ಯಾವುದನ್ನೂ ಜನರು ಪಾಲಿಸಲಿಲ್ಲ ಕೇವಲ ಅಧಿಕಾರದ ಕಡೆಗೆ ಮಾತ್ರ ಗಮನ ನೀಡಿದರು-ಮೋದಿ
Nov 26, 2021, 11:30 am IST

ಲೋಕತಂತ್ರವನ್ನು ಸಮೃದ್ಧಿಯನ್ನಾಗಿಸಲು ದೇಶದ ಜನತೆಯನ್ನು ಜಾಗೃತಿಗೊಳಿಸಬೇಕು. ನಮ್ಮಲ್ಲಿ ಭ್ರಷ್ಟಾಚಾರ ತುಂಬಾ ಇದೆ, ಹಾಗಾದರೆ ನಮ್ಮ ಸಂವಿಧಾನ ಇದಕ್ಕೆ ಅವಕಾಶ ನೀಡುತ್ತದೆಯೇ. ಖಂಡಿತವಾಗಿಯೂ ಇಲ್ಲ- ಮೋದಿ
Nov 26, 2021, 11:28 am IST

ಪಾರಿವಾರಿಕ ಪಕ್ಷಗಳು ಲೋಕತಂತ್ರದ ಭಾವನೆಗಳ ವಿರುದ್ಧವಾದದ್ದಾಗಿದೆ, ಒಂದೇ ಪರಿವಾರದಿಂದ ಒಂದಕ್ಕಿಂತ ಹೆಚ್ಚು ಮಂದಿ ರಾಜಕೀಯಕ್ಕೆ ಬರಬೇಡಿ ಎಂದು ನಾನು ಹೇಳುತ್ತಿಲ್ಲ,ಅವರು ತಮ್ಮ ತಾಕತ್ತಿನ ಬಲದಿಂದ ಜನರ ಮೂಲಕ ಗೆದ್ದು ಬರಲಿ- ಮೋದಿ
Nov 26, 2021, 11:26 am IST

ಸಂವಿಧಾನದ ಭಾವನೆಗಳಿಗೆ ಧಕ್ಕೆಯಾಗಿದೆ, ಸಂವಿಧಾನದ ಒಂದೊಂದು ವಿಷಯಗಳಿಗೂ ಧಕ್ಕೆ ಉಂಟಾಗಿದೆ. ಲೋಕತಾಂತ್ರಿಕ ಕ್ಯಾರೆಕ್ಟರ್ ಕಳೆದುಕೊಂಡವರು ಲೋಕತಂತ್ರವನ್ನು ಕಾಪಾಡಲು ಹೇಗೆ ಸಾಧ್ಯ- ಮೋದಿ
Nov 26, 2021, 11:25 am IST

ವಿವಿಧತೆ ಹೊಂದಿರುವ ದೇಶದಲ್ಲಿ ಸಂವಿಧಾನ ತುಂಬಾ ಸಹಾಯಕವಾಗಿದೆ. ಅಂಬೇಡ್ಕರ್ ಜಯಂತಿ ಸಮಯದಲ್ಲಿ ಸಂವಿಧಾನ ದಿನಾಚರಣೆಯನ್ನು ನಡೆಸಲು ನಿರ್ಣಯ ಕೈಗೊಳ್ಳಲಾಯಿತು. ಆಗ ಸಾಕಷ್ಟು ವಿರೋಧಗಳು ಕೂಡ ಕೇಳಿಬಂದಿದ್ದವು- ಮೋದಿ
Nov 26, 2021, 11:22 am IST

ಜನಪ್ರತಿನಿಗಳ ರೂಪದಲ್ಲಿ ಗ್ರಾಮಪಂಚಾಯಿತಿಯಿಂದ ರಾಷ್ಟ್ರಪತಿವರೆಗೂ ನಾವು ಸಂವಿಧಾನದ ಪ್ರಕಾರವಾಗಿಯೇ ನಡೆದುಕೊಳ್ಳುತ್ತೇವೆ. ನಾವು ಏನು ಮಾಡುತ್ತಿದ್ದೇವೆ ಅದು ಸಂವಿಧಾನ ಪ್ರಕಾರ ಸರಿ ಇದೆಯಾ ಅಥವಾ ತಪ್ಪಿದೆಯೇ ಎಂಬ ಅವಲೋಕನ ಮಾಡುವ ಅಗತ್ಯವಿದೆ-ಮೋದಿ
Nov 26, 2021, 11:21 am IST

ನಮ್ಮ ಸಂವಿಧಾನ ಕೇವಲ ಅನೇಕ ವಿಚಾರಗಳ ಸಂಗ್ರಹವಲ್ಲ, ನಮ್ಮ ಸಂವಿಧಾನ ಸಹಸ್ರ ವರ್ಷಗಳ ಭಾರತದ ಮಹಾನ್ ಪರಂಪರೆಯ ಅಖಂಡಧಾರೆಯ ಆಧುನಿಕ ಅಭಿವ್ಯಕ್ತಿಯಾಗಿದೆ.- ಮೋದಿ
Nov 26, 2021, 11:19 am IST

ಇಂದು ನಮಗೆ ಸಂವಿಧಾನ ರಚನೆ ಮಾಡುವುದಾಗಿದ್ದರೆ ಹೇಗಿರುತ್ತಿತ್ತು ಎಂದು ಎಲ್ಲರೂ ಆಲೋಚಿಸಬೇಕಿದೆ. ಎಲ್ಲರ ಹೃದಯದಲ್ಲಿ ಒಂದೇ ಮಂತ್ರವಾಗಿತ್ತು. ವಿವಿಧತೆಯಿಂದ ತುಂಬಿದ ದೇಶ ಇದಾಗಿತ್ತು, ಇದರ ನಡುವೆಯೇ ಸಂವಿಧಾನವೆಂಬ ಮಾಧ್ಯಮದಿಂದ ಎಲ್ಲರನ್ನೂ ಒಂದು ಬಂಧನದಲ್ಲಿ ಇಟ್ಟು ಸಾಗುವುದು ಸುಲಭದ ಮಾತಾಗಿರಲಿಲ್ಲ- ಮೋದಿ
Nov 26, 2021, 11:18 am IST

ಆತಂಕವಾದಿಗಳೊಂದಿಗೆ ಹೋರಾಡುತ್ತಾ ಹಲವು ಮಂದಿ ಸೈನಿಕರು ಮೃತಪಟ್ಟಿದ್ದಾರೆ ಅವರಿಗೂ ನಮನ ಸಲ್ಲಿಸುವ ಸಮಯವಿದು- ಮೋದಿ
Nov 26, 2021, 11:17 am IST

ಈ ದಿವಸ ಈ ಸದನಕ್ಕೆ ಅಭಿನಂದನೆ ಸಲ್ಲಿಸುವ ದಿನ, ಹಲವು ವರ್ಷಗಳ ಕಾಲ ಕಾರ್ಯಕರ್ತರು, ಹೋರಾಟಗಾರರು ನಡೆಸಿರುವ ಮಂಥನದ ಫಲವಾಗಿ ನಮಗೆ ಸಂವಿಧಾನ ದೊರೆತಿದೆ. ಇಂದು ಗಾಂಧೀಜಿಯವರನ್ನು ಕೂಡ ನೆನೆಯಲೇ ಬೇಕು-ನರೇಂದ್ರ ಮೋದಿ
Nov 26, 2021, 11:12 am IST

ನಮ್ಮ ಸಂವಿಧಾನ ಆಧುನಿಕ ಗೀತವಿದ್ದಂತೆ, ರಾಷ್ಟ್ರದ ಬಗ್ಗೆ ನಮ್ಮ ಕರ್ತವ್ಯವನ್ನು ಎಚ್ಚರಿಸುತ್ತದೆ. ಒಂದೇ ಭಾರತ ಶ್ರೇಷ್ಠ ಭಾರತವನ್ನು ನಿರ್ಮಾಣ ಮಾಡಲು ಸಂವಿಧಾನ ಸಹಾಯ ಮಾಡುತ್ತದೆ- ಓಂ ಬಿರ್ಲಾ
Nov 26, 2021, 11:10 am IST

ಇಂದು ಸಂವಿಧಾನದ ಅಂಗೀಕಾರವಾಗಿತ್ತು, ನಮ್ಮ ದೇಶದಲ್ಲಿ ಶಾಂತಿ, ಪ್ರಗತಿ ಜತೆಗೆ ವಿಕಾಸ ಯಾತ್ರೆ ಆರಂಭ ಮಾಡಲಾಗಿತ್ತು. ಇದು ತತ್ವ ಆದರ್ಶದ ಪವಿತ್ರ ಗ್ರಂಥ, ಸಂವಿಧಾನ ಜನರ ಮನಸ್ಸುಗಳನ್ನು ಒಗ್ಗೂಡಿಸುವ ಒಂದು ಭಾವನೆ- ಓಂ ಬಿರ್ಲಾ
Nov 26, 2021, 11:09 am IST

ಸಚಿವ ಪ್ರಲ್ಹಾದ್ ಜೋಶಿಯವರಿಂದ ಆರಂಭಿಕ ಭಾಷಣ
Nov 26, 2021, 11:02 am IST

ಸಂವಿಧಾನ ದಿನದ ಅಂಗವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸಂಸತ್‌ಗೆ ಆಗಮನ
Nov 26, 2021, 10:59 am IST

ಸಂಸತ್‌ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮನ
Nov 26, 2021, 10:59 am IST

ಸಂವಿಧಾನ ಅಂಗೀಕಾರಕ್ಕೆ ತಂದ ನಂತರದಲ್ಲಿ ಗಣರಾಜ್ಯ ದೇಶದ ಮೊದಲ ರಾಷ್ಟ್ರಪತಿಯಾಗಿ ಡಾ.ಬಾಬು ರಾಜೇಂದ್ರ ಪ್ರಸಾದ್ ರವರನ್ನು ಆಯ್ಕೆ ಮಾಡಲಾಗಿತ್ತು
Nov 26, 2021, 10:59 am IST

ಕೈಬರವಣಿಗೆಯಲ್ಲಿ ಬರೆದ ಮೂಲ ಸಂವಿಧಾನ ಪುಸ್ತಕವನ್ನು ಸಂಸತ್ತಿನ ಗ್ರಂಥಾಲಯದಲ್ಲಿ ಹೀಲಿಯಂ ನಿಂದ ಕೂಡಿದ ಕೇಸ್‌ನಲ್ಲಿ ಸುರಕ್ಷಿತವಾಗಿ ಇಡಲಾಗಿದೆ.
Nov 26, 2021, 10:58 am IST

ಕೆಲವೇ ನಿಮಿಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
Nov 26, 2021, 9:40 am IST

-ಭಾರತ ಸಂವಿಧಾನವು ಹಲವು ದೇಶದ ಸಂವಿಧಾನದ ಪ್ರಮುಖ ಅಂಶಗಳನ್ನು ಎರವಲು ಪಡೆದಿದೆ. ಬ್ರಿಟನ್‌, ಐರ್‌ಲ್ಯಾಂಡ್, ಜಪಾನ್‌, ಯುಎಸ್‌ಎ, ಸೌಥ್‌ ಆಫ್ರಿಕಾ, ಜರ್ಮನಿ, ಆಸ್ಟ್ರೇಲಿಯಾ, ಮತ್ತು ಕೆನಡಾ ದೇಶಗಳ ಸಂವಿಧಾನ ಲಕ್ಷಣಗಳನ್ನು ಅಳವಡಿಸಿದೆ.
Nov 26, 2021, 9:40 am IST

-ನಮ್ಮ ದೇಶದಲ್ಲಿ ಹೊಸ ಶಕೆ ಆರಂಭವಾಗಿದ್ದು ಸಂವಿಧಾನ ಜಾರಿಗೆ ಬಂದಾಗಿನಿಂದಲೇ. ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು, ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಜತೆಗೆ ಅವರ ಸಾಧನೆಯ ಜಾಗೃತಿ ಮೂಡಿಸುವುದು ಈ ದಿನದ ವಿಶೇಷತೆ
Nov 26, 2021, 9:40 am IST

-ನಮ್ಮ ದೇಶದಲ್ಲಿ ಹೊಸ ಶಕೆ ಆರಂಭವಾಗಿದ್ದು ಸಂವಿಧಾನ ಜಾರಿಗೆ ಬಂದಾಗಿನಿಂದಲೇ. ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು, ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಜತೆಗೆ ಅವರ ಸಾಧನೆಯ ಜಾಗೃತಿ ಮೂಡಿಸುವುದು ಈ ದಿನದ ವಿಶೇಷತೆ
Nov 26, 2021, 9:36 am IST

-ಭಾರತ ಸಂವಿಧಾನ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆ ಒದಗಿಸಿದೆ. ಮೂಲಭೂತ ಹಕ್ಕುಗಳನ್ನು ನೀಡಿದೆ. ಕರ್ತವ್ಯಗಳನ್ನು ನೀಡಿದೆ. ಭಾರತಕ್ಕೆ ಸಂವಿಧಾನವೇ ಬಹುದೊಡ್ಡ ಬಲ. ನಮ್ಮ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು.
Nov 26, 2021, 9:35 am IST

-ಭಾರತದಲ್ಲಿ ಸಂವಿಧಾನ ಅಂಗೀಕಾರವಾಗಿದ್ದು 1949 ರ ನವೆಂಬರ್ 26 ರಂದೇ ಆದರೂ ಅನುಷ್ಠಾನಕ್ಕೆ ತಂದಿದ್ದು 1950 ರ ಜನವರಿ 26 ರಂದು. ಈ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+