Metro Line-3: ₹14,120 ಕೋಟಿ ವೆಚ್ಚದ ಮೆಟ್ರೋ ಲೈನ್-3 ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ

Metro Line-3: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಅಕ್ಟೋಬರ್ 5ರಂದು) ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ರಾಜ್ಯದಲ್ಲಿ ಒಟ್ಟು 50,000 ಕೋಟಿ ಮೌಲ್ಯದ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಅದರಲ್ಲೂ ಮುಂಬೈ ಹೊಸ ಮೆಟ್ರೋ ಲೈನ್-3 ಅನ್ನು ಉದ್ಘಾಟಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆ ಮತದಾರರನ್ನು ಸೆಳೆಯಲು ಎಲ್ಲಾ ಪಕ್ಷಗಳು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿವೆ. ಹಾಗೆಯೇ ಇದೀಗ ರಾಜ್ಯದಲ್ಲಿ ಇಂದು ಪ್ರಧಾನಿ ಮೋದಿಯವರು ಹಲವು ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ಮತದಾರರನ್ನು ಸೆಳೆಯುವ ಕೆಲಸಕ್ಕೆ ಮುಂದಾಗಿದ್ದಾರೆ.

PM Modi to Inaugurate Metro Line-3 with Cost of 14 120 crore today

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದಲ್ಲಿ 50,000 ರೂಪಾಯಿಗೂ ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇನ್ನು ಸುಮಾರು 14,120 ಕೋಟಿ ರೂಪಾಯಿ ವೆಚ್ಚದ ಮುಂಬೈ ಮೆಟ್ರೋ ಲೈನ್-3 ಅನ್ನು ಉದ್ಘಾನೆ ಮಾಡಲಿದ್ದಾರೆ. ಇದು ಬಿಕೆಸಿಯಿಂದ ಆರೆ ಜೆವಿಎಲ್‌ಆರ್‌ವರೆಗೆ ಮೊದಲ ಹಂತದ ಯೋಜನೆಯಾಗಿದೆ. ಈ ಮೆಟ್ರೋ ರೈಲು ಕೊಲಾಬಾ-ಬಾಂದ್ರಾ-ಸೀಪ್ಜ್‌ ನಡುವೆ ಸಂಚಾರ ಮಾಡಲಿದೆ.

ಎಷ್ಟು ನಿಲ್ದಾಣಗಳನ್ನು ಒಳಗೊಂಡಿದೆ?: ಈ ಮೆಟ್ರೋ ಲೈನ್‌ ಮಾರ್ಗವು 10 ನಿಲ್ದಾಣಗಳನ್ನು ಹೊಂದಿದ್ದು, ಇದರಲ್ಲಿ 9 ಸುರಂಗದ ರೀತಿಯಲ್ಲಿ ನೆಲಮಹಡಿಯಲ್ಲಿವೆ. ಇನ್ನು ಈ ಮಾರ್ಗದಲ್ಲಿನ ಮೆಟ್ರೋ ರೈಲುಗಳು ಪ್ರತಿದಿನ ಸುಮಾರು 12 ಲಕ್ಷ ಪ್ರಯಾಣಿಕರನ್ನು ಒಂದು ಕಡೆಯಿಂದ ಮತ್ತೊಂದೆಡೆ ಸಾಗಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

ಮಹಾರಾಷ್ಟ್ರದಾದ್ಯಂತ ಒಟ್ಟು 19 ಮೆಗಾವ್ಯಾಟ್ ಸಾಮರ್ಥ್ಯದ 5 ಸೌರ ಪಾರ್ಕ್‌ಗಳನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ, ಸುಮಾರು 9.4 ಕೋಟಿ ರೈತರಿಗೆ ಸುಮಾರು ₹20,000 ಕೋಟಿ ಮೌಲ್ಯದ ಪಿಎಂ-ಕಿಸಾನ್ ಸಮ್ಮಾನ್ ನಿಧಿಯ 18​​ನೇ ಕಂತನ್ನು ವಿತರಣೆ ಮಾಡಲಿದ್ದಾರೆ. ಜೊತೆಗೆ, ನಮೋ ಶೆಟ್ಕರಿ ಮಹಾಸನ್ಮಾನ್ ನಿಧಿ ಯೋಜನೆಯ 5ನೇ ಕಂತನ್ನು ಆರಂಭಿಸಲಿದ್ದು, 2,000 ಕೋಟಿ ರೂಪಾಯಿಗಳನ್ನು ವಿತರಣೆ ಮಾಡಲಿದ್ದಾರೆ. ಕೃಷಿ ಮೂಲಸೌಕರ್ಯ ನಿಧಿಯಡಿ ಒಟ್ಟು 1,920 ಕೋಟಿ ರೂಪಾಯಿ ಮೌಲ್ಯದ 7,500ಕ್ಕೂ ಹೆಚ್ಚು ಯೋಜನೆಗಳನ್ನು ದೇಶಕ್ಕೆ ಅರ್ಪಿಸಲಿದ್ದಾರೆ.

ಇಂಟಿಗ್ರಲ್ ರಿಂಗ್ ಮೆಟ್ರೋ ರೈಲು ಯೋಜನೆ ಯೋಜನೆಗೆ ಶಂಕುಸ್ಥಾಪನೆ: ಥಾಣೆಯಲ್ಲಿ ಸುಮಾರು ₹12,200 ಕೋಟಿ ವೆಚ್ಚದಲ್ಲಿ ಥಾಣೆ ಇಂಟಿಗ್ರಲ್ ರಿಂಗ್ ಮೆಟ್ರೋ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+