ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜ್ಞಾನ, ತಂತ್ರಜ್ಞಾನ ಬಡತನ ತೊಲಗಿಸಬೇಕು: ಮೋದಿ

|
Google Oneindia Kannada News

ಮೈಸೂರು, ಜನವರಿ, 03: ಸಾಂಸ್ಕೃತಿಕ ನಗರಿ ಮೈಸೂರಿನ ವಿಜ್ಞಾನ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಳಗ್ಗೆ ಚಾಲನೆ ನೀಡಿದ್ದಾರೆ. 'ದಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ 'ನ 103 ನೇ ಸಮಾವೇಶ ಮೈಸೂರು ವಿಶ್ವವಿದ್ಯಾನಿಲಯದ ಆತಿಥ್ಯದಲ್ಲಿ ಜನವರಿ 7ರವೆಗೆ ನಡೆಯಲಿದೆ.

ಭಾನುವಾರ ಬೆಳಗ್ಗೆ ಆರಂಭವಾದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹರ್ಷವರ್ಧನ್, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಜ್ಞಾನಿ ಸಿ ಎನ್ ಆರ್ ರಾವ್ , ರಾಜ್ಯಪಾಲ ವಜೂಭಾಯಿ ವಾಲಾ, ಮೈಸೂರು ವಿವಿ ವೈಸ್ ಛಾನ್ಸೆಲರ್ ರಂಗಪ್ಪ ಪಾಲ್ಗೊಂಡಿದ್ದಾರೆ.[ದೇಶದ ಅತಿದೊಡ್ಡ ವಿಜ್ಞಾನ ಹಬ್ಬಕ್ಕೆ ಮೈಸೂರು ಸಿದ್ಧ]

modi

ನೊಬೆಲ್ ಪ್ರಶಸ್ತಿ ಪುರಸ್ಕೃತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಮಾರಕ ರೋಗಗಳ ಪರಿಹಾರೋಪಾಯದ ಬಗ್ಗೆಯೂ ಚರ್ಚೆ ನಡೆಯಲಿದೆ. 34 ವರ್ಷದ ನಂತರ ಮೈಸೂರು ಇಂಥದ್ದೊಂದು ಐತಿಹಾಸಿಕ ಸಮಾವೇಶಕ್ಕೆ ಸಾಕ್ಷಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಭಾಷಣದ ಹೈಲೈಟ್ಸ್...

* ಈ ಸಂದರ್ಭದಲ್ಲಿ ಡಾ ರಾಧಾಕೃಷ್ಣನ್, ವಿಜ್ಞಾನಿ ಸಿಎನ್ ಆರ್ ರಾವ್ ಅವರನ್ನು ನೆನಪಿಸಿಕೊಳ್ಳಬೇಕು.
* ಅಬ್ದುಲ್ ಕಲಾಂ ರಂಥ ನಾಯಕರಿಂದ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ.
* ಭಾರತದ ಆರ್ಥಿಕ ಅಭಿವೃದ್ಧಿಗೆ ವಿಜ್ಞಾನದ ಕೊಡುಗೆ ಅತಿ ಹೆಚ್ಚು
* ಹೊಸ ಆವಿಷ್ಕಾರಗಳಿಂದ ಸಮಸ್ಯೆಗಳಿಗೆ ಮುಕ್ತಿ ಕಂಡುಕೊಳ್ಳಲು ಸಾಧ್ಯವಿದೆ.
* 2030ರ ವೇಳೆಗೆ ಬಡತನವನ್ನು ದೇಶದಿಂದ ಕಿತ್ತು ಹಾಕಬೇಕಿದೆ.
* ನಮ್ಮ ಇತಿಹಾಸವನ್ನು ನಾವೇ ಬದಲಾವಣೆ ಮಾಡಿಕೊಳ್ಳಬೇಕಿದೆ.
* ಶಿಕ್ಷಣದಲ್ಲಿ ಇನ್ನಷ್ಟು ಸರಳೀಕರಣ ಆಗಬೇಕಿದೆ. ಪ್ರತಿಯೊಬ್ಬರಿಗೂ ಶಿಕ್ಷಣ ಸರ್ಕಾರಗಳ ಗುರಿಯಾಗಬೇಕು.
* ಮುಂದಿನ ಹತ್ತು ವರ್ಷದಲ್ಲಿ ಇಂಧನ ಉತ್ಪನ್ನಗಳ ಮೇಲೆ ಸ್ವಾಯತ್ತತೆ ಸಾಧಿಸಬೇಕಿದೆ..
* ಬಡವರ ಅಭಿವೃದ್ಧಿಗೆ ವಿಜ್ಞಾನ ನೆರವಾಗವಬೇಕು.

ಸಂಪೂರ್ಣ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಣೆ ಮಾಡಬಹುದು

English summary
Mysuru: Prime Minister Narendra Modi inaugurates the five-day 103rd Indian Science Congress (ISC) in Mysuru, on Sunday. The theme of the ISC this year is "Science and Technology for Indigenous Development in India". Modi will also present 28 awards, including six gold medals to Nobel Laureates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X