ಮಗಳಿಗೆ ಮರುಜೀವ ನೀಡಿದ್ರು ಮೋದಿ.. ನಿಂದಿಸಿದ ಬಾಲಕಿಯನ್ನು ಕ್ಷಮಿಸಿದ ಪ್ರಧಾನಿಗೆ ಧನ್ಯವಾದ ತಿಳಿಸಿದ ಅಮ್ಮ

ನವದೆಹಲಿ, ಆಗಸ್ಟ್‌ 2: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ತಮ್ಮ ವಿರುದ್ಧ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿ ಪ್ರಕರಣ ಎದುರಿಸುತ್ತಿದ್ದ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರಧಾನಿ ಮೋದಿ ಕ್ಷಮಿಸಿದ್ದಾರೆ. ಅವರ ಈ ದೊಡ್ಡತನಕ್ಕೆ ಬಾಲಕಿಯ ತಾಯಿ ಹೃತ್ಪೂರ್ವಕ ಧನ್ಯವಾದ ಅರ್ಪಿಸಿದ್ದು, 'ನನ್ನ ಮಗಳಿಗೆ ಪ್ರಧಾನಿಯವರು ಮರುಜೀವ ನೀಡಿದ್ದಾರೆ,' ಎಂದು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನೀಟ್‌ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ನಡೆದಿತ್ತು. ಈ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 15 ವರ್ಷದ ಬಾಲಕಿಯೊಬ್ಬಳು ಪ್ರಧಾನಿ ಮೋದಿ ವಿರುದ್ಧ ಅಸಭ್ಯ ಮತ್ತು ನಿಂದನಾತ್ಮಕ ಘೋಷಣೆಗಳನ್ನು ಕೂಗಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.

PM Modi Forgives Minor Girl Over Protest Slogans Mother Says He Gave My Daughter a New Life

ಈ ಸಂಬಂಧ ಪ್ರಧಾನಿಯವರ ಹುದ್ದೆಯ ಘನತೆಗೆ ಧಕ್ಕೆ ತರಲಾಗಿದೆ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರಲಾಗಿದೆ ಎಂದು ಆರೋಪಿಸಿ ನೋಯ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಈ ಜೀರೋ ಎಫ್‌ಐಆರ್ ಅನ್ನು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.

ದೊಡ್ಡತನ ಮೆರೆದ ಪ್ರಧಾನಿ ಮೋದಿ

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 'ಪ್ರತಿಭಟನೆಯಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ ಮಕ್ಕಳನ್ನು ನಾನು ಕ್ಷಮಿಸುತ್ತೇನೆ. ದಾರಿ ತಪ್ಪಿದ ಮಕ್ಕಳ ವಿರುದ್ಧ ಕೋಪ ಅಥವಾ ಸೇಡಿನ ಕ್ರಮ ಉತ್ತರವಲ್ಲ,' ಎಂದು ಹೇಳುವ ಮೂಲಕ ದೊಡ್ಡತನ ಮೆರೆದರು.

ಮುಂದುವರಿದು ಮಾತನಾಡಿದ ಅವರು, 'ಸಾಮಾನ್ಯವಾಗಿ ಮಾತನಾಡುವಾಗ ನಮ್ಮ ನಾಲಿಗೆ ಹಲ್ಲಿನ ನಡುವೆ ಸಿಲುಕಿ ರಕ್ತ ಬರಬಹುದು. ಆದರೆ ಅದಕ್ಕಾಗಿ ನಾವು ಹಲ್ಲನ್ನು ಮುರಿದುಕೊಳ್ಳುವುದಿಲ್ಲ. ಏಕೆಂದರೆ ಹಲ್ಲು ಮತ್ತು ನಾಲಿಗೆ ಎರಡೂ ನಮ್ಮದೇ. ಅದೇ ರೀತಿ ಈ ಮಕ್ಕಳೂ ನಮ್ಮವರೇ. ಮಕ್ಕಳೇ ಬನ್ನಿ, ದೇಶಕ್ಕಾಗಿ ಒಟ್ಟಾಗಿ ಮುನ್ನಡೆಯೋಣ. ತಪ್ಪುಗಳಿಂದಲೂ ಕಲಿಯೋಣ. ನಾನು ನಿಮಗಾಗಿ ಮತ್ತು ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದೇನೆ,' ಎಂದು ಕರೆ ನೀಡಿದ್ದರು.

ಕ್ಷಮೆಯಾಚಿಸಿದ ಬಾಲಕಿ

ಪ್ರಧಾನಿ ನರೇಂದ್ರ ಮೋದಿ ಅವರ ಈ ವಿಡಿಯೋ ಹೊರಬಿದ್ದ ನಂತರ ಬಾಲಕಿ ಕೂಡ ವಿಡಿಯೋ ಬಿಡುಗಡೆ ಮಾಡಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾಳೆ. 'ನಾವು ಕನ್ನಾಟ್‌ಗೆ ತೆರಳಿದ್ದಾಗ ಗೆಳೆಯರೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದೆ. ಅಲ್ಲಿನ ಪರಿಸ್ಥಿತಿಗೆ ಮರುಳಾಗಿ ಈ ರೀತಿ ಅಸಭ್ಯ ರೀತಿಯಲ್ಲಿ ಘೋಷಣೆಯನ್ನು ಕೂಗಿದೆ. ಇದು ನನ್ನ ಜೀವನದ ಮೊದಲ ಮತ್ತು ಕೊನೆಯ ತಪ್ಪು. ಇಡೀ ದೇಶದ ಬಳಿ ಕ್ಷಮೆ ಕೇಳುತ್ತೇನೆ,' ಎಂದು ಹೇಳಿದ್ದಳು.

ಬಾಲಕಿ ತಾಯಿ ಹೇಳಿದ್ದೇನು?

ಬಾಲಕಿಯ ತಾಯಿ ಮಾಧ್ಯಮಗಳೊಂದಿಗೆ ಮಾತನಾಡಿ, 'ಪ್ರಧಾನಿಯವರು ಅತ್ಯಂತ ಉದಾರ ಮನಸ್ಸಿನಿಂದ ನನ್ನ ಮಗಳನ್ನು ಕ್ಷಮಿಸಿದ್ದಾರೆ. ಇಂದು ನನ್ನ ಮಗಳ ಹುಟ್ಟುಹಬ್ಬವಾಗಿದ್ದು, ಪ್ರಧಾನಿಯವರು ನೀಡಿದ ಈ ಕ್ಷಮೆ ಆಕೆಗೆ ಸಿಕ್ಕ ಅತಿದೊಡ್ಡ ಕೊಡುಗೆಯಾಗಿದೆ. ಎಫ್‌ಐಆರ್‌ನಲ್ಲಿ ನನ್ನ ಮಗಳ ವಯಸ್ಸನ್ನು 25 ವರ್ಷ ಎಂದು ತಪ್ಪಾಗಿ ನಮೂದಿಸಲಾಗಿತ್ತು. ಪ್ರಕರಣವನ್ನು ಶೀಘ್ರವೇ ಹಿಂಪಡೆಯಬೇಕು,' ಎಂದು ಮನವಿ ಮಾಡಿದ್ದಾರೆ.

ಮತ್ತೊಂದೆಡೆ ಸಿಜೆಪಿ ಸಂಸ್ಥಾಪಕ ಅಭೀಜಿತ್ ದಿಪ್ಕೆ ಪ್ರಧಾನಿಯವರ ವಿಡಿಯೋಗೆ ಕಮೆಂಟ್ ಮಾಡಿ, 'ಕೇವಲ ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಮಾತ್ರ ಕ್ಷಮಿಸುತ್ತೀರಾ ಅಥವಾ ವಿದ್ಯಾರ್ಥಿಗಳ ಮೇಲಿರುವ ಪೊಲೀಸ್ ಪ್ರಕರಣಗಳನ್ನೂ ವಾಪಸ್ ಪಡೆಯುತ್ತೀರಾ?,' ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಪ್ರಧಾನಿ ಅವರಿಂದ ಏನು ಉತ್ತರ ಬರಲಿದೆ ಎಂದು ಕಾದುನೋಡಬೇಕಿದೆ. ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಾಲಕಿಯನ್ನು ಕ್ಷಮಿಸಿರುವುದಾಗಿ ಹೇಳಿಕೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+