ಪೆಟ್ರೋಲ್ ದರ ಗಗನಕ್ಕೆ, ಮುಂಬೈಯಲ್ಲಿ ಅತಿ ಹೆಚ್ಚು ಬೆಲೆ
ನವದೆಹಲಿ, ಸೆಪ್ಟೆಂಬರ್ 09: ಸತತವಾಗಿ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ, ರಜೆ ದಿನ ಭಾನುವಾರ ಕೂಡಾ ತಗ್ಗಿಲ್ಲ. ದೇಶದ ಪ್ರಮುಖ ನಾಲ್ಕು ನಗರಗಳಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದ ಮತ್ತೊಮ್ಮೆ ಬೆಲೆ ಏರಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿದೆ. ಡಾಲರ್ ಎದುರು ರುಪಾಯಿ ಅಪಮೌಲ್ಯ ಮುಂದುವರೆದಿರುವುದರಿಂದ ಇಂಧನ ಆಮದು ದರ ಏರಿಕೆಯಾಗಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕಾರಣವಾಗಿದೆ.
ಸೆ.10 ರಂದು ಭಾರತ ಬಂದ್, ಏನಿರುತ್ತೆ? ಏನಿರೋಲ್ಲ?
ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 80.50 ರು ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 72.61ರು ನಷ್ಟಿದೆ.ಮುಂಬೈನಲ್ಲಿ ಪೆಟ್ರೋಲ್ ದರ 87.89 ರು ನಷ್ಟಿದ್ದರೆ, ಡೀಸೆಲ್ ದರ 77.09ರು ನಷ್ಟಿದೆ.
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಗ್ಗೆ ಸಾಮಾನ್ಯ ಜನ ಏನಂತಾರೆ?
ಬೆಂಗಳೂರಿನಲ್ಲಿ ಈ ದಿನ ಪೆಟ್ರೋಲ್ ದರ 83.12 ರು ಪ್ರತಿ ಲೀಟರ್ ಹಾಗೂ ಡೀಸೆಲ್ ದರ 74.95 ರು ನಷ್ಟಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 83.66 ರು ಹಾಗೂ ಡೀಸೆಲ್ ದರ 76.75ರು ಆಗಿದೆ.