Patna railway station: ಟಿವಿ ಸ್ಕ್ರೀನ್‌ನಲ್ಲಿ ಅಶ್ಲೀಲ ದೃಶ್ಯ ಪ್ಲೇ- ಪ್ರಯಾಣಿಕರು ಶಾಕ್!
ಪಾಟ್ನಾ ರೈಲು ನಿಲ್ದಾಣದ ಟಿವಿ ಪರದೆಯಲ್ಲಿ 3 ನಿಮಿಷಗಳ ಕಾಲ ಅಶ್ಲೀಲ ದೃಶ್ಯ ಪ್ರದರ್ಶಿಸಲಾಗಿದ್ದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಟ್ನಾ ಮಾರ್ಚ್ 20: ಪಾಟ್ನಾ ರೈಲು ನಿಲ್ದಾಣದಲ್ಲಿದ್ದ ಜನ ಸಾಮಾನ್ಯರು ತಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದೆ. ರೈಲ್ವೆ ನಿಲ್ದಾಣದ ಟಿವಿ ಪರದೆಗಳಲ್ಲಿ 3 ನಿಮಿಷಗಳ ಕಾಲ ಅಶ್ಲೀಲ್ ವಿಡಿಯೋ ಪ್ಲೇ ಆಗಿದ್ದು ಆಕ್ರೋಶಕ್ಕೆ ಗುರಿಯಾಗಿದೆ.
ಭಾನುವಾರ ಬೆಳಿಗ್ಗೆ 9:30 ರ ಸುಮಾರಿಗೆ ಬಿಹಾರದ ಪಾಟ್ನಾ ರೈಲು ನಿಲ್ದಾಣದಲ್ಲಿ ಸ್ಥಾಪಿಸಲಾದ ಟಿವಿ ಸ್ಕ್ರೀನ್‌ನಲ್ಲಿ ಮೂರು ನಿಮಿಷಗಳ ಕಾಲ ಜನರು ನಾಚಿಕೆಪಡುವಂತಹ ಆಶ್ಲೀಲ್ ದೃಶ್ಯದ ಜಾಹೀರಾತು ಪ್ರದರ್ಶಿಸಲಾಗಿದೆ. ಜಾಹೀರಾತು ಪ್ರದರ್ಶಿಸುತ್ತಿದ್ದಂತೆ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ. ತಕ್ಷಣ ಸಮಯ ವ್ಯರ್ಥ ಮಾಡದೆ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಮತ್ತು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಗೆ ದೂರು ಸಲ್ಲಿಸಿದ್ದಾರೆ.

GRP ಕ್ರಮ ಕೈಗೊಳ್ಳಲು ವಿಳಂಬ ಮಾಡಿದ ನಂತರ, RPF ದತ್ತಾ ಕಮ್ಯುನಿಕೇಷನ್ ಸಂಸ್ಥೆಯನ್ನು ಸಂಪರ್ಕಿಸಿದೆ. ಆರ್‌ಪಿಎಫ್ ಪರದೆಯ ಮೇಲೆ ಜಾಹೀರಾತುಗಳನ್ನು ಪ್ರದರ್ಶಿಸುವ ಜವಾಬ್ದಾರಿಯುತ ಸಂಸ್ಥೆಯಾಗಿದೆ. ಪ್ರಯಾಣಿಕರು ದೂರಿನ ಬಳಿಕ ಇದು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಜನರ ಮುಂದೆ ಅಶ್ಲೀಲ್ ವಿಡಿಯೋ ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ಏಜೆನ್ಸಿ ನಿರ್ವಾಹಕರನ್ನು ಕೇಳಿದೆ.
ರೈಲ್ವೇ ಅಧಿಕಾರಿಗಳು ಕೂಡ ಕ್ರಮ ಕೈಗೊಂಡಿದ್ದಾರೆ ಎಮದು ತಿಳಿದು ಬಂದಿದೆ. ವಿಡಿಯೋ ಕ್ಲಿಪ್ ಪ್ರದರ್ಶಿಸಿದ ದತ್ತಾ ಕಮ್ಯುನಿಕೇಷನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಸಂಸ್ಥೆಯನ್ನು ರೈಲ್ವೇ ಕಪ್ಪು ಪಟ್ಟಿಗೆ ಸೇರಿಸಿದ್ದು, ದಂಡವನ್ನೂ ವಿಧಿಸಿದೆ.

ಮೂಲಗಳ ಪ್ರಕಾರ, ರೈಲ್ವೇ ನಿಲ್ದಾಣದಲ್ಲಿ ದೂರದರ್ಶನ ಪರದೆಯ ಮೇಲೆ ಜಾಹೀರಾತುಗಳನ್ನು ಪ್ರಸಾರ ಮಾಡಲು ಏಜೆನ್ಸಿಗೆ ನೀಡಲಾಗಿದ್ದ ಗುತ್ತಿಗೆಯನ್ನು ರೈಲ್ವೆ ಅಧಿಕಾರಿಗಳು ರದ್ದುಗೊಳಿಸಿದ್ದಾರೆ. ಈ ಬಗ್ಗೆ ರೈಲ್ವೆ ಇಲಾಖೆ ಪ್ರತ್ಯೇಕ ವಿಚಾರಣೆ ನಡೆಸುತ್ತಿದೆ. ಜೊತೆಗೆ ಪ್ಲಾಟ್‌ಫಾರ್ಮ್ ಸಂಖ್ಯೆ 10 ರಲ್ಲಿ ವಿಡಿಯೊವನ್ನು ನಿರ್ದಿಷ್ಟವಾಗಿ ಪ್ಲೇ ಮಾಡಲಾಗಿದೆ ಎಂಬ ಅಂಶವನ್ನು ಕೆಲವು ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಪಾಟ್ನಾದಲ್ಲಿ ನಾಯಿ ಮೇಲೆ ಅತ್ಯಾಚಾರ
ಭಾರತದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಕೆಲವು ವರ್ಷಗಳಿಂದ ಆತಂಕಕಾರಿ ವಿಷಯವಾಗಿದೆ. ಅಂಕಿಅಂಶಗಳ ಪ್ರಕಾರ, 2022 ರಲ್ಲಿ, ಭಾರತದಲ್ಲಿ ಪ್ರತಿದಿನ 6 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದು ಆಡಳಿತ ಮತ್ತು ದೇಶವಾಸಿಗಳಿಗೆ ನಾಚಿಕೆಗೇಡಿನ ಸಂಗತಿ. ಆದರೆ ಈಗ ಕಾಮದ ಬೆಂಕಿಯಲ್ಲಿ ಕುರುಡರು ಮೂಕ ಪ್ರಾಣಿಗಳನ್ನು ಬಲಿಪಶುಗಳನ್ನಾಗಿಸಲು ಆರಂಭಿಸಿದ್ದಾರೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಹಾಡಹಗಲೇ ಹೆಣ್ಣು ಮಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಶೇರ್ ಆಗುತ್ತಿದೆ. ಆಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದೆ.
ನಾಯಿ ಮೇಲೆ ಅತ್ಯಾಚಾರ
ಈ ಘಟನೆಯು 8 ಮಾರ್ಚ್ 2023 ರಂದು ಪಾಟ್ನಾದ ಫುಲ್ವಾರಿ ಷರೀಫ್‌ನ ಫೈಸಲ್ ಕಾಲೋನಿಯಲ್ಲಿ ನಡೆದಿದೆ. ಪಾಟ್ನಾದ ಫುಲ್ವಾರಿ ಶರೀಫ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿದ್ದಾರೆ.

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ವ್ಯಕ್ತಿಯೊಬ್ಬ ಬೀದಿನಾಯಿಯ ಮೇಲೆ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಾರ್ಚ್ 8 ರಂದು ಹೋಳಿ ದಿನದಂದು ಈ ಘಟನೆ ಸಂಭವಿಸಿದೆ. ಈ ಭೀಕರ ಕೃತ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ಪಾಟ್ನಾದ ಫುಲ್ವಾರಿ ಷರೀಫ್‌ನ ಫೈಸಲ್ ಕಾಲೋನಿಯಲ್ಲಿ ನಡೆದಿದೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ವ್ಯಕ್ತಿಯೊಬ್ಬನು ಕಾಲೋನಿಯಲ್ಲಿ ನಾಯಿಯೊಂದಿಗೆ ಅಸಹಜ ಕೃತ್ಯವನ್ನು ಬಹಿರಂಗವಾಗಿ ಮಾಡುತ್ತಿರುವುದು ಕಂಡುಬಂದಿದೆ. ವಿಡಿಯೋ ವೈರಲ್ ಬಳಿಕ ಪಾಟ್ನಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ಫುಲ್ವಾರಿ ಷರೀಫ್ ಮನೀಶ್ ಕುಮಾರ್, "ದೂರು ಬಂದಿದೆ. ಐಪಿಸಿ ಮತ್ತು ಪ್ರಾಣಿಗಳ ಕಾಯಿದೆಯಡಿ ಕ್ರಮ ಕೈಗೊಳ್ಳಲಾಗುವುದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ" ಎಂದು ಹೇಳಿದರು.












Click it and Unblock the Notifications