ಪಠಾಣ್ ಕೋಟ್ ಸೇನಾ ನೆಲೆ ಬಳಿ ಚೀಲ ಪತ್ತೆ; ಹೈ ಅಲರ್ಟ್ ಘೋಷಣೆ
ಪಠಾಣ್ ಕೋಟ್, ಮೇ 29 : ಪಂಜಾಬ್ ನ ಮಮೂನ್ ಸೇನಾ ನೆಲೆ ಬಳಿ ಸೋಮವಾರ ಅನುಮಾನಸ್ಪದ ಚೀಲಗಳು ಪತ್ತೆಯಾಗಿ ಆತಂಕ ಸೃಷ್ಠಿಸಿದ ಹಿನ್ನಲೆಯಲ್ಲಿ ಪಠಾಣ್ ಕೋಟ್ ಹಾಗೂ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ.
ಸ್ಥಳೀಯ ವ್ಯಕ್ತಿಯೊಬ್ಬರು ಚೀಲದ ಬಗ್ಗೆ ಮಾಹಿತಿ ನೀಡಿದಾಗ ಪಠಾಣ್ ಕೋಟ್ ಹಾಗೂ ಮಮೂನ್ ಸುತ್ತಮುತ್ತ ಭಾರತೀಯ ಸೇನೆ ಶೋಧ ಕಾರ್ಯಚರಣೆ ಕೈಗೊಂಡಿದ್ದ ವೇಳೆ ಚೀಲ ಪತ್ತೆಯಾಗಿದೆ. ಚೀಲವನ್ನು ಪರಿಶೀಲಿಸಿದಾಗ ಚೀಲದಲ್ಲಿ ಮೂರು ಸೇನಾ ಸಮವಸ್ತ್ರಗಳು ದೊರಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.[ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?]

2015ರಲ್ಲಿ ಭಾರತೀಯ ಸೇನೆಯ ಸಮವಸ್ತ್ರ ಧರಿಸಿದ್ದ ಮೂವರು ಶಸ್ತ್ರಧಾರಿಗಳು ಒಬ್ಬ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 7 ಮಂದಿಯನ್ನು ಹತ್ಯೆಗೈದಿದ್ದರು.












Click it and Unblock the Notifications