ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜನವರಿ 05 : ಪಂಜಾಬ್‌ನ ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ಮಾಡಿದ ಉಗ್ರರನ್ನು ಯೋಧರು ಹತ್ಯೆ ಮಾಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಗಡಿಭಾಗದಿಂದ ಕೇವಲ 40 ಕಿ.ಮೀ.ದೂರದಲ್ಲಿರುವ ಇದು ದೇಶದ ಮಹತ್ವದ ಸೇನಾ ನೆಲೆಯಾಗಿದೆ.

ಭಾರತೀಯ ವಾಯುಪಡೆಯ ಅತ್ಯುನ್ನತ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಈ ವಾಯುನೆಲೆಯಲ್ಲಿವೆ. ವಾಯುನೆಲೆಯಲ್ಲಿ ಸುಸಜ್ಜಿತವಾದ ಒಂದು ಪಟ್ಟಣವಿದೆ. ವಸತಿ ಪ್ರದೇಶ, ವಾಣಿಜ್ಯ ಸಂಕೀರ್ಣ, ಶಾಲೆ, ಹೋಟೆಲ್ ಆಟದ ಮೈದಾನ ಸೇರಿದಂತೆ ಹಲವು ವ್ಯವಸ್ಥೆಗಳು ವಾಯುನೆಲೆಯಲ್ಲಿವೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

75 ಎಕರೆ ಪ್ರದೇಶದಲ್ಲಿರುವ ಪಠಾಣ್ ಕೋಟ್ ವಾಯುನೆಲೆ ಮೇಲೆ ಪಾಕಿಸ್ತಾನದ ಕಣ್ಣು ಬಿದ್ದಿರುವುದು ಇದೇ ಮೊದಲಲ್ಲ. 1965, 1971ರ ಭಾರತ-ಪಾಕ್ ನಡುವಿನ ಯುದ್ಧದ ಸಮಯದಲ್ಲಿಯೂ ಪಾಕಿಸ್ತಾನ ಈ ವಾಯುನೆಲೆ ಮೇಲೆ ದಾಳಿ ಮಾಡಿತ್ತು. [ಎಷ್ಟು ಉಗ್ರರು ವಾಯುನೆಲೆಗೆ ನುಗ್ಗಿದ್ದರು?]

1971ರಲ್ಲಿ ಪಾಕ್ ವೈಮಾನಿಕ ದಾಳಿಯಿಂದಾಗಿ ವಾಯುನೆಲೆಯ ರನ್‌ವೇಗೆ ಹಾನಿ ಉಂಟಾಗಿತ್ತು. ಜನವರಿ 2ರ ಮುಂಜಾನೆ ಸಹ ಉಗ್ರರು ಗಡಿಯಿಂದ ಸುಸುಳಿ ಬಂದು ವಾಯುನೆಲೆ ಮೇಲೆ ದಾಳಿ ಮಾಡಿದ್ದರು. ಸುಮಾರು 60 ಗಂಟೆಗಳ ಕಾರ್ಯಾಚರಣೆ ಬಳಿಕ ಉಗ್ರರನ್ನು ಹೊಡೆದುರುಳಿಸಲಾಗಿದೆ. ಚಿತ್ರಗಳಲ್ಲಿ ನೋಡಿ ವಾಯುನೆಲೆ ವಿಶೇಷತೆಗಳು..... [ಪಿಟಿಐ ಚಿತ್ರಗಳು]

ಭಾರತದ ಪಾಲಿಗೆ ಮಹತ್ವದ ವಾಯುನೆಲೆ

ಭಾರತದ ಪಾಲಿಗೆ ಮಹತ್ವದ ವಾಯುನೆಲೆ

ಪಂಜಾಬಿನ ಪಠಾಣ್ ಕೋಟ್‌ನಲ್ಲಿರುವ ವಾಯುನಲೆ ಭಾರತದ ಪಾಲಿಗೆ ಅತೀ ಮಹತ್ವದದ್ದು. ಭಾರತ-ಪಾಕಿಸ್ತಾನ ಗಡಿಯಿಂದ 40 ಕಿ.ಮೀ.ದೂರದಲ್ಲಿರುವ ಈ ವಾಯುನೆಲೆ ಮೇಲೆ ಜನವರಿ 2ರ ಮಂಜಾನೆ ಉಗ್ರರು ದಾಳಿ ಮಾಡಿದ್ದರು. ಸುಮಾರು 60 ಗಂಟೆಗಳ ಕಾರ್ಯಾಚರಣೆ ಬಳಿಕ ಉಗ್ರರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.

70 ಎಕರೆ ಪ್ರದೇಶದಲ್ಲಿದೆ ವಾಯುನೆಲೆ

70 ಎಕರೆ ಪ್ರದೇಶದಲ್ಲಿದೆ ವಾಯುನೆಲೆ

ಪಠಾಣ್ ಕೋಟ್ ವಾಯುನೆಲೆ ಸುಮಾರು 70 ಎಕರೆ ಪ್ರದೇಶದಲ್ಲಿದೆ. ಭಾರತದಕ್ಕೆ ಮಹತ್ವವಾದ ಈ ನೆಲೆ ಮೇಲೆ ಪಾಕಿಸ್ತಾನ ಹಿಂದಿನಿಂದಲೂ ಕಣ್ಣಿಟ್ಟಿದೆ. 1965, 1971ರ ಭಾರತ-ಪಾಕ್ ನಡುವಿನ ಯುದ್ಧದ ಸಮಯದಲ್ಲಿಯೂ ಪಾಕಿಸ್ತಾನ ಈ ವಾಯುನೆಲೆ ಮೇಲೆ ದಾಳಿ ಮಾಡಿತ್ತು.

ವಾಯುನೆಲೆಯೊಳಗಿದೆ ಪಟ್ಟಣ

ವಾಯುನೆಲೆಯೊಳಗಿದೆ ಪಟ್ಟಣ

ಪಠಾಣ್ ಕೋಟ್ ವಾಯುನೆಲೆಯೊಳಗೆ ಸುಸಜ್ಜಿತವಾದ ಪಟ್ಟಣವನ್ನು ನಿರ್ಮಾಣ ಮಾಡಲಾಗಿದೆ. ವಸತಿ ಗೃಹ, ಹೋಟೆಲ್, ಶಾಲೆ, ಆಟದ ಮೈದಾನ, ವಾಣಿಜ್ಯ ಸಂಕೀರ್ಣ ಸೇರಿದಂತೆ ಅಗತ್ಯ ವ್ಯವಸ್ಥೆಗಳಿವೆ. ಇಷ್ಟು ದೊಡ್ಡ ವಾಯುನೆಲೆಗೆ ನುಗ್ಗಿದ ಉಗ್ರರನ್ನು ಕೊಲ್ಲುವ ಕಾರ್ಯಾಚರಣೆ ವಿಳಂಬವಾಗಿದ್ದು ಇದೇ ಕಾರಣಕ್ಕೆ. ಉಗ್ರರನ್ನು ಹುಡುಕುವುದು ಯೋಧರಿಗೂ ದೊಡ್ಡ ಸವಾಲಾಗಿತ್ತು.

ವಾಯುನೆಲೆಯಲ್ಲೇನಿದೆ?

ವಾಯುನೆಲೆಯಲ್ಲೇನಿದೆ?

ಮಿಗ್ 21 ವಿಮಾನಗಳು, ಹಲವು ಹೆಲಿಕಾಪ್ಟರ್‌ಗಳು, ಎಂಐ ಯುದ್ಧ ಹೆಲಿಕಾಪ್ಟರ್, ಕಣ್ಗಾವಲು ರೆಡಾರ್‌ಗಳು, ಮಾನವ ರಹಿತ ಲಘು ಯುದ್ಧ ವಿಮಾನ ಸೇರಿದಂತೆ ವಾಯುಪಡೆಯ ಶಕ್ತಿಯೇ ಈ ವಾಯುನೆಲೆಯಲ್ಲಿ ಕೇಂದ್ರಿಕೃತವಾಗಿದೆ. ಆದ್ದರಿಂದ, ಯುದ್ಧದ ಸಮಯದಲ್ಲಿ ಪಾಕಿಸ್ತಾನ ಈ ವಾಯುನೆಲೆಯ ಮೇಲೆ ಮೊದಲು ದಾಳಿ ನಡೆಸಲು ಯೋಜನೆ ರೂಪಿಸುತ್ತದೆ.

ರನ್‌ವೇಗೆ ಹಾನಿ ಉಂಟಾಗಿತ್ತು

ರನ್‌ವೇಗೆ ಹಾನಿ ಉಂಟಾಗಿತ್ತು

ವಾಯುನೆಲೆ ಮೇಲೆ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ. 1965, 1971ರ ಭಾರತ-ಪಾಕ್ ನಡುವಿನ ಯುದ್ಧದ ಸಮಯದಲ್ಲಿಯೂ ಪಾಕಿಸ್ತಾನ ಈ ವಾಯುನೆಲೆ ಮೇಲೆ ದಾಳಿ ಮಾಡಿತ್ತು. 1971ರಲ್ಲಿ ಪಾಕ್ ವೈಮಾನಿಕ ದಾಳಿಯಿಂದಾಗಿ ವಾಯುನೆಲೆಯ ರನ್‌ವೇಗೆ ಹಾನಿ ಉಂಟಾಗಿತ್ತು.

ಉಗ್ರರ ಕಣ್ಣು ಏಕೆ ಬಿತ್ತು?

ಉಗ್ರರ ಕಣ್ಣು ಏಕೆ ಬಿತ್ತು?

ವಾಯುನೆಲೆ ಮೇಲೆ ದಾಳಿ ಮಾಡಿ ಅದನ್ನು ದ್ವಂಸಗೊಳಿಸುವುದು ಮತ್ತು ಅತೀ ಭದ್ರತೆಯ ವಾಯುನೆಲೆ ದಾಳಿ ಮಾಡಿದೆವು ಎಂದು ಹೇಳಿಕೊಂಡು ದೇಶಕ್ಕೆ ಮುಜುಗರ ಉಂಟುಮಾಡುವುದು ಉಗ್ರರ ಉದ್ದೇವಾಗಿತ್ತು. ಆದ್ದರಿಂದ, ಜನವರಿ 2ರಂದು ಉಗ್ರರು ವಾಯುನೆಲೆ ಮೇಲೆ ದಾಳಿ ಮಾಡಿದರು.

English summary
The Pathankot Air Force Station which is under attack by terrorists is a tactically important base for various reasons. The air station is located on the tip of Punjab which is around 40 kilometers from the India-Pakistan international border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X