Viral Video: ಪ್ರೇಯಸಿ ಜೊತೆ ಸಿಕ್ಕಿಬಿದ್ದ ಮಗ; ಮೆಟ್ರೋ ನಿಲ್ದಾಣದಲ್ಲೇ ಎಂಗೇಜ್‌ಮೆಂಟ್ ಮಾಡಿಸಿದ ಪೋಷಕರು
ಪ್ರೀತಿಯಲ್ಲಿ ಬಿದ್ದವರು ಸಾಮಾನ್ಯವಾಗಿ ಮನೆಯವರ ಕಣ್ಣಿಗೆ ಕಾಣದಂತೆ ಕದ್ದುಮುಚ್ಚಿ ಓಡಾಡುವುದೇ ಹೆಚ್ಚು. ಯಾರಾದ್ರೂ ನೋಡಿದ್ರೆ ನಮ್ ಕಥೆ ಮುಗೀತು? ಅನ್ನೋ ಭಯದಲ್ಲೇ ಇರುತ್ತಾರೆ. ಆದರೆ ಪ್ರೇಯಸಿ ಜೊತೆ ಸಿಕ್ಕಿಬಿದ್ದ ಮಗನಿಗೆ ಪೋಷಕರು ಮೆಟ್ರೋ ನಿಲ್ದಾಣದಲ್ಲೇ ಸರಳವಾಗಿ ಎಂಗೇಜ್‌ಮೆಂಟ್ ನೆರವೇರಿಸಿ, ಆಶೀರ್ವಾದ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಹುಬ್ಬೇರಿಸಿದೆ. ಈ ವಿಡಿಯೋ ವೈರಲ್ ಆಗಿದ್ದು, ಇದು ನಿಜವಾಗಿ ನಡೆದಿರುವುದಾ? ಅಥವಾ ಜನರ ಗಮನ ಸೆಳೆಯಲು ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದಾ? ಎಂಬ ಚರ್ಚೆಗಳು ನಡೆಯುತ್ತಿವೆ. ಪ್ರೇಮಿಗಳ ದಿನ ಸಮಯದಲ್ಲೇ ಈ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.
ಸಾಮಾನ್ಯವಾಗಿ ಮನೆ ಅಥವಾ ಮಂಟಪಗಳಲ್ಲಿ ನಡೆಯುವ ನಿಶ್ಚಿತಾರ್ಥ ಸಮಾರಂಭವು ಈ ಬಾರಿ ಮೆಟ್ರೋ ನಿಲ್ದಾಣದಲ್ಲೇ ನಡೆದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಸಮಾರಂಭದ ವೀಡಿಯೊ ಇದೀಗ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ವೈರಲ್ ವೀಡಿಯೊದಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯೊಂದಿಗೆ ಮೆಟ್ರೋ ನಿಲ್ದಾಣದಲ್ಲಿ ಕುಳಿತಿರುವಾಗ ಅವನ ಪೋಷಕರು ಅಲ್ಲಿಗೆ ಬಂದು ಹಿಡಿದಿದ್ದಾರೆ ಎಂದು ನ್ಯೂಸ್-18 ವರದಿ ಮಾಡಿದೆ.

ಜೋಡಿಗೆ ಸಿಹಿ ತಿನ್ನಿಸಿದ ತಾಯಿ
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡುತ್ತಿರುವ ಮೆಟ್ರೋ ನಿಲ್ದಾಣದಲ್ಲಿ ತನ್ನ ಮಗನನ್ನು ಪ್ರೇಯಸಿಯೊಂದಿಗೆ ಕಂಡ ತಾಯಿ, ಯಾವುದೇ ಹಿಂಜರಿಕೆಯಾಗದೆ ಅಲ್ಲಿಯೇ ಇಬ್ಬರ ನಿಶ್ಚಿತಾರ್ಥ ಮಾಡಿಸಿದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಮೆಟ್ರೋ ನಿಲ್ದಾಣದ ಬೆಂಚ್ ಮೇಲೆ ಕುಳಿತಿದ್ದ ಯುವಕ ಮತ್ತು ಆತನ ಪ್ರೇಯಸಿಯ ಬಳಿ ತಾಯಿ ಸಿಹಿ ಮತ್ತು ಹಣ್ಣುಗಳನ್ನು ನೀಡಿ, ನಿಶ್ಚಿತಾರ್ಥ ನೆರವೇರಿಸುತ್ತಿರುವ ದೃಶ್ಯಗಳಿವೆ. ಈ ವೇಳೆ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿಗೆ, "ಸರಿಯಾಗಿ ವೀಡಿಯೊ ತೆಗಿ" ಎಂದು ತಾಯಿ ಹೇಳಿದ್ದಾರೆ.
ವಿಡಿಯೋ ಅಸಲಿಯತ್ತೇನು?
ವೈರಲ್ ವೀಡಿಯೊದಲ್ಲಿ ತಾಯಿ ತನ್ನ ಮಗ ಮತ್ತು ಆತನ ಪ್ರೇಯಸಿಗೆ ಸಿಹಿ ತಿನ್ನಿಸುತ್ತಾ, ಸಂಪ್ರದಾಯಬದ್ಧವಾಗಿ ಆಶೀರ್ವದಿಸಿರುವುದು ಕಂಡುಬರುತ್ತದೆ. ಈ ಸಂದರ್ಭದಲ್ಲಿ ಯುವಕ ತಾಯಿಗೆ ಸಮಾರಂಭ ನಿಲ್ಲಿಸುವಂತೆ ಪದೇ ಪದೇ ಮನವಿ ಮಾಡಿದರೂ ತಾಯಿ ಅದಕ್ಕೆ ಒಪ್ಪಿಲ್ಲ. ಇದರಿಂದ ನಮ್ಮ ಮಾನ ಹಾಳಾಗಿದೆ, ಅದಕ್ಕೆ ಏನು ಹೇಳ್ತಿಯ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ತಾಯಿ. ಕೊನೆಯಲ್ಲಿ ಎಲ್ಲ ಅಸಮಾಧಾನಗಳ ನಡುವೆಯೂ ತಾಯಿಯು ಮಗ ಮತ್ತು ಅವನ ಪ್ರೇಯಸಿಗೆ "ಖುಷಿಯಾಗಿರಿ" ಎಂದು ಆಶೀರ್ವದಿಸಿದ್ದಾರೆ.
🚨 A mother caught her son with his girlfriend at a metro station…
— Anjali (@anjaliankit_cpl) February 7, 2026
So she did the most desi thing ever —
arranged their engagement on the spot 😂💍
No more excuses. No more secret meetings.
Problem solved in one move.#IntelligentMom #DesiLogic pic.twitter.com/ufkKqG6ar8
ಆದರೆ ಈ ಘಟನೆಯ ಸ್ಥಳ ಮತ್ತು ಸಮಯದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ವೈರಲ್ ವಿಡಿಯೋದಲ್ಲಿ ಮೆಟ್ರೋ ನಿಲ್ದಾಣದ ಹೆಸರು "bangur nagar" ಎಂದು ಬರೆಯಲಾಗಿದ್ದು, ಇದು ಮುಂಬೈನಲ್ಲಿರುವ ಒಂದು ಪ್ರದೇಶ ಎಂದು ತಿಳಿದುಬಂದಿದೆ.
ವೀಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ತಾಯಿಯ ಧೈರ್ಯ ಮತ್ತು ನಿರ್ಧಾರವನ್ನು ಮೆಚ್ಚಿಕೊಂಡಿದ್ದರೆ, ಇನ್ನು ಕೆಲವರು ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯ ಘಟನೆ ನಡೆಸಿರುವುದನ್ನು ಟೀಕಿಸಿದ್ದಾರೆ. ಕೆಲವರು ಇದನ್ನು ಸ್ಕ್ರಿಪ್ಟೆಡ್ ಎಂದೂ ಕರೆದಿದ್ದಾರೆ. ಯಾರಾದರೂ ಈ ರೀತಿ ಎಂಗೇಜ್‌ಮೆಂಟ್‌ಗೆ ಸಿದ್ಧರಾಗಿ ಮೆಟ್ರೋ ನಿಲ್ದಾಣಕ್ಕೆ ಬರಲು ಸಾಧ್ಯವೇ? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಎಲ್ಲ ಮನೆಯಲ್ಲಿ ಪೋಷಕರು ಇದೇ ರೀತಿ ಇದ್ದರೆ ಎಷ್ಟು ಚೆಂದ? ಹಣ ಕೂಡ ಉಳಿತಾಯ ಎಂದೂ ಕಾಮೆಂಟ್ ಮಾಡಿದ್ದಾರೆ. ಪ್ರೇಮಿಗಳ ದಿನದ ಹೊತ್ತಲ್ಲೇ ಮೆಟ್ರೋ ನಿಲ್ದಾಣದಲ್ಲಿ ಈ ನಿಶ್ಚಿತಾರ್ಥ ವಿಡಿಯೋ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Water: ಅನಂತರಪುರ ಜಿಲ್ಲೆಯ ಬರಡು ಭೂಮಿಯ ಯಶೋಗಾಥೆ: ಜಗದೀಶ್ ಕೊಪ್ಪ ಬರಹ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
Bangladesh Bus Tragedy: ನದಿಗೆ ಉರಳಿದ 50 ಪ್ರಯಾಣಿಕರಿದ್ದ ಬಸ್, ಹಲವರು ಸಾವು; ಎದೆ ನಡುಗಿಸೋ ವಿಡಿಯೋ -
Tejasvi Surya: ಕೆಎಸ್ಸಿಎನಿಂದ ಐಪಿಎಲ್ ಫ್ರೀ ಟಿಕೆಟ್ ಚರ್ಚೆ: ಕಾಂಗ್ರೆಸ್ ಶಾಸಕರಿಗೆ ಸಂಸದ ತೇಜಸ್ವಿ ಸೂರ್ಯ ಕ್ಲಾಸ್ -
IPL Tickets: ನಾವು ವಿಐಪಿಗಳು; 5 ಫ್ರೀ ಟಿಕೆಟ್ ಕೊಡಲಿ: ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ -
ಕರ್ನಾಟಕದ ಕರಾವಳಿಯಲ್ಲಿ ಕಾಣದ ಅಗ್ನಿಕುಂಡದ ಮೇಲೆ ಘನತ್ಯಾಜ್ಯ ವಿಲೇವಾರಿಗೆ ವೀರಾವೇಶದ ಜಿದ್ದಾಜಿದ್ದಿ: ರಾಜಾರಾಂ ತಲ್ಲೂರು ಬರಹ -
Love Mocktail 3 Row: ಕೃತಿಚೌರ್ಯ ವಿವಾದದ ನಡುವೆ ಸತ್ಯ ಮತ್ತು ನೈತಿಕತೆ ಚರ್ಚೆ: ಮಧು ವೈ.ಎನ್ ಬರಹ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Rashmika Mandanna: ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಕನಸಿನ ಹನಿಮೂನ್: ವಿಶೇಷ ವಿಡಿಯೋ ಹಂಚಿಕೊಂಡ ಜೋಡಿ












Click it and Unblock the Notifications