ಕುಲಭೂಷಣ್ ಭೇಟಿ; ಹೇಳಿದಂತೆ ನಡೆದುಕೊಳ್ಳದ ಪಾಕ್
ನವದೆಹಲಿ, ಜುಲೈ 16 : ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯ ನೌಕಾಪಡೆಯ ನಿವೃತ್ತ ಯೋಧ ಕುಲಭೂಷಣ್ ಜಾಧವ್ ಭೇಟಿಗೆ ಅಡೆತಡೆ ಇಲ್ಲದ ಅನುಮತಿಯನ್ನು ಪಾಕ್ ಸರ್ಕಾರ ನೀಡಿಲ್ಲ. ಅವರು ಒತ್ತಡದಲ್ಲಿದ್ದಾರೆ ಎಂದು ಹೇಳಿದೆ.
Recommended Video
ಗುರುವಾರ ಕೇಂದ್ರ ವಿದೇಶಾಂಗ ಇಲಾಖೆ ಈ ಕುರಿತು ಮಾಹಿತಿ ನೀಡಿದೆ. ಪಾಕಿಸ್ತಾನ ಕುಲಭೂಷಣ್ ಜಾಧವ್ ಭೇಟಿಗೆ ಭಾರತದ ಕನ್ಸುಲರ್‌ಗೆ ಅಡೆತಡೆ ಇಲ್ಲದ ಒಪ್ಪಿಗೆಯನ್ನು ನೀಡಿಲ್ಲ. ಭೇಟಿಯ ವೇಳೆ ಪಾಕಿಸ್ತಾನದ ಅಧಿಕಾರಿಗಳು ಹತ್ತಿರಲ್ಲಿಯೇ ಇದ್ದರು.
ಕುಲಭೂಷಣ್ ಜಾಧವ್ ಒತ್ತಡದಲ್ಲಿದ್ದಾರೆ. ಕನ್ಸುಲರ್ ಭೇಟಿ ಮಾಡಿದಾಗ ಇದು ಸಾಬೀತಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಭೇಟಿಗೆ ಅವಕಾಶ ಮಾಡಿಕೊಟ್ಟ ವ್ಯವಸ್ಥೆ ಬಗ್ಗೆ ವಿದೇಶಾಂಗ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ.

ಭಾರತದ ಕನ್ಸುಲರ್ ಮತ್ತು ಕಲಭೂಷಣ್ ಜಾಧವ್ ನಡುವಿನ ಮಾತುಕತೆಯನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಯಾವುದೇ ಷರತ್ತು ಇಲ್ಲದೇ ಭೇಟಿ ಮಾಡಲು ಪಾಕಿಸ್ತಾನ ಅವಕಾಶವನ್ನು ನೀಡಿಲ್ಲ ಎಂದು ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ.
ಕನ್ಸುಲರ್ ಭೇಟಿಗೆ ಪಾಕಿಸ್ತಾನ ಮಾಡಿಕೊಟ್ಟ ವ್ಯವಸ್ಥೆ ಸರಿ ಇರಲಿಲ್ಲ. ಕುಲಭೂಷಣ್ ಜಾಧವ್ ಜೊತೆಗಿದ್ದ ಅಧಿಕಾರಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಅಲ್ಲಿಂದ ತೆರಳಿದರು. ಜಾಧವ್‌ಗೆ ಕಾನೂನು ನೆರವು ನೀಡುವ ಕುರಿತು ಮಾತನಾಡಲು ಆಗಿಲ್ಲ.
ಭಾರತದ ಅಧಿಕಾರಿಗಳಿಗೆ 2ನೇ ಬಾರಿಗೆ ಕುಲಭೂಷಣ್ ಜಾಧವ್ ಭೇಟಿ ಮಾಡಲು ಪಾಕಿಸ್ತಾನ ಅವಕಾಶ ನೀಡಿದೆ. ಮೊದಲ ಬಾರಿಗೆ 2019ರಲ್ಲಿ ಭೇಟಿಗೆ ಅವಕಾಶ ನೀಡಲಾಗಿತ್ತು. ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅವರು ಶಿಕ್ಷೆಯನ್ನು ಮರುಪರಿಶೀಲನೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಲು ನಿರಾಕರಿಸಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ.
ಪಾಕಿಸ್ತಾನದ ವಿರುದ್ಧ ಬೇಹುಗಾರಿಕೆ ಮಾಡಿದ ಆರೋಪದಲ್ಲಿ ಕುಲಭೂಷಣ್ ಜಾಧವ್ ಬಂಧಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಅವರು ಪಾಕಿಸ್ತಾನದ ಜೈಲಿನಲ್ಲಿದ್ದಾರೆ.












Click it and Unblock the Notifications