ಸೈನಿಕರ ಶಿರಚ್ಛೇದ: ಮೋದಿ 56 ಇಂಚು ಎದೆ ಪ್ರದರ್ಶಿಸುವುದು ಯಾವಾಗ?
ಪದೇ ಪದೇ ಸೈನಿಕರ ಮೇಲೆ ದಾಳಿ ನಡೆಯುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ 56 ಇಂಚು ಎದೆ ಪ್ರದರ್ಶಿಸುವುದು ಯಾವಾಗ? ಕಾಂಗ್ರೆಸ್ ಪ್ರಶ್ನೆ
ರಾಷ್ಟ್ರೀಯತೆ, ದೇಶದ ಭದ್ರತೆಯ ವಿಚಾರದಲ್ಲಿ ದೇಶದ ಬಹುಸಂಖ್ಯಾತರಿಗೆ ನರೇಂದ್ರ ಮೋದಿಯವರ ಮೇಲಿರುವ ವಿಶ್ವಾದ ಕಮ್ಮಿಯಾಗುತ್ತಿದೆಯೇ? ಈ ಪ್ರಶ್ನೆ ಮತ್ತೆ ಮತ್ತೆ ಕಾಡುವುದು ನಮ್ಮ ಸೈನಿಕರ ಮೇಲೆ ಪಾಕಿಸ್ತಾನದ ಪಡೆಗಳಿಂದ ಮುಂದುವರಿಯುತ್ತಿರುವ ಅಮಾನವೀಯ ಕೃತ್ಯಗಳು.
ಗಡಿ ನಿಯಂತ್ರಣ ರೇಖೆ ಬಳಿ ಇಬ್ಬರು ಭಾರತದ ಯೋಧರನ್ನು ಹತ್ಯೆಗೈದು, ದೇಹವನ್ನು ಕತ್ತರಿಸಿದ ಪಾಕಿಸ್ತಾನದ ಪೈಶಾಚಿಕ ಕೃತ್ಯಕ್ಕೆ ದೇಶದೆಲ್ಲಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಚುನಾವಣೆಯ ವೇಳೆ 56 ಇಂಚು ಎದೆಯ ಬಗ್ಗೆ ಮಾತನಾಡಿದ್ದ ಮೋದಿಯ ಎದೆಯ ಗಾತ್ರ ಕಮ್ಮಿಯಾಯಿತೇ ಎಂದು ವಿರೋಧ ಪಕ್ಷಗಳು ಲೇವಡಿ ಮಾಡಲಾರಂಭಿಸಿವೆ. (ಭಾರತೀಯ ಸೈನಿಕರ ದೇಹ ತುಂಡರಿಸಿದ ಪಾಕ್ ಸೇನೆ)
ಕಳೆದ 35 ತಿಂಗಳಲ್ಲಿ 1343 ಬಾರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದು 172ಬಾರಿ ಉಗ್ರರು ದಾಳಿ ನಡೆಸಿದ್ದಾರೆ. ಬಿಜೆಪಿಗೆ ಭಾರತವನ್ನು ರಕ್ಷಿಸಲು ಸಾಧ್ಯವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪಾಕಿಸ್ತಾನಕ್ಕೆ ಕಠಿಣ ಸಂದೇಶವನ್ನು ಸರಕಾರ ಕಳುಹಿಸುವುದು ಯಾವಾಗ, ಪ್ರಧಾನಮಂತ್ರಿಯವರು 56 ಇಂಚು ಎದೆಯನ್ನು ಯಾವಾಗ ಪ್ರದರ್ಶಿಸುವುದು ಎಂದು ಕಾಂಗ್ರೆಸ್ ಟೀಕಿಸಿದೆ.
#ModiWeakestPMever ಎನ್ನುವ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದ್ದು, ಒಂದೇ ಸಮನೆ ಟ್ವೀಟುಗಳು ಹರಿದು ಬರುತ್ತಿವೆ. ಕೆಲವೊಂದು ಸ್ಯಾಂಪಲ್.. ಮುಂದೆ ಓದಿ..

ಸೈನಿಕರ ದೇಹವನ್ನು ಕತ್ತರಿಸಿದ್ದ ಪಾಪಿಗಳು
ಪಾಕಿಸ್ತಾನ ಪಡೆಗಳು ಸೋಮವಾರ (ಮೇ 1) ಬೆಳಗ್ಗೆ ಇಬ್ಬರು ಭಾರತೀಯ ಸೈನಿಕರನ್ನು ಕೊಂದು, ಅವರ ದೇಹವನ್ನು ಕತ್ತರಿಸಿ ವಿಕೃತಿ ಮೆರೆದಿದ್ದವು. ಕೃಷ್ಣ ಘಾಟಿ ವಲಯದ ಗಡಿ ನಿಯಂತ್ರಣ ರೇಖೆ ಬಳಿ ಈ ಘಟನೆ ನಡೆದಿತ್ತು. ಈ ಕೃತ್ಯಕ್ಕೆ ತಿರುಗೇಟು ನೀಡಿದ ಭಾರತೀಯ ಸೇನೆ ಏಳು ಪಾಕ್ ಸೈನಿಕರನ್ನು ಕೊಂದು, ಎರಡು ಬಂಕರ್ ಗಳನ್ನು ಧ್ವಂಸಗೊಳಿಸಿತ್ತು. ಪದೇಪದೇ ನಮ್ಮ ಸೈನಿಕರ ಮೇಲೆ ದಾಳಿ ನಡೆಯುತ್ತಿದ್ದರೂ, ಚುನಾವಣೆಯ ವೇಳೆ ತನ್ನ ಎದೆಗಾತ್ರದ ಬಗ್ಗೆ ಹೇಳಿದ್ದ ಮೋದಿ ಯಾಕೆ ಸುಮ್ಮನಿದ್ದಾರೆಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ.
|
ಚುನಾವಣೆಯ ವೇಳೆ
ಚುನಾವಣೆಯ ವೇಳೆ ಮತ್ತು ಅಧಿಕಾರದಲ್ಲಿರುವಾಗ ಮೋದಿಯವರ ಭಂಗಿ
|
ಹಿಂದಿನ ಟ್ವೀಟ್
ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಸುಷ್ಮಾ ಸ್ವರಾಜ್ ಮಾಡಿದ್ದ ಟ್ವೀಟ್ ಉಲ್ಲೇಖಿಸಿ ತರಾಟೆ
|
ಪಾಕ್ ಮೇಲೆ ದಾಳಿ ಮಾಡಬೇಕು
ಮೋದಿ ಪಾಕಿಸ್ತಾನದ ಜೊತೆ ಕಠಿಣ ನಿಲುವು ತಳೆದು, ಪಾಕ್ ಮೇಲೆ ದಾಳಿ ಮಾಡಬೇಕು.
|
ಮೋದಿ ಯಾವ ಮಾತೂ ಕಾರ್ಯರೂಪಕ್ಕೆ ಬರುವುದಿಲ್ಲ
ಮೋದಿ ಭಾಷಣ ಏನು ಮಾಡುತ್ತಾರೋ, ಅದ್ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ. ಈಗ ತ್ರಿಬಲ್ ತಲಾಕ್ ಬಗ್ಗೆ ಮಾತನಾಡುತ್ತಿದ್ದಾರೆ ಎಚ್ಚರ.
|
ಸ್ಮೃತಿ ಇರಾನಿಯಿಂದ ಮೋದಿಗೆ ಬಳೆ
ಸಚಿವೆ ಸ್ಮೃತಿ ಇರಾನಿ ಮೋದಿಗೆ ಬಳೆ ಕಳುಹಿಸುವ ಸಮಯಕ್ಕಾಗಿ ಕಾಯುತ್ತಿದ್ದೇನೆ.











Click it and Unblock the Notifications