ಸಾಲದ ಸುಳಿಯಲ್ಲಿರುವ ILFS ನ ಪದಚ್ಯುತ ಎಂ.ಡಿ. ಹರಿಶಂಕರನ್ ಬಂಧನ
ಐಎಲ್ ಅಂಡ್ ಎಫ್ ಎಎಸ್ ನ ಪದಚ್ಯುತ ಕಾರ್ಯನಿರ್ವಾಹಕ ನಿರ್ದೇಶಕ ಹರಿಶಂಕರನ್ ಅವರನ್ನು ಗಂಭೀರ ವಂಚನೆ ಪ್ರಕರಣಗಳ ತನಿಖಾ ಕಚೇರಿಯಿಂದ ಬಂಧಿಸಲಾಗಿದೆ. ಈ ಬಗ್ಗೆ ಸೋಮವಾರ ಸರಕಾರಿ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಗುರುವಾರದ ತನಕ ಹರಿಶಂಕರನ್ ರನ್ನು ವಶಕ್ಕೆ ನೀಡಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಐಎಲ್ ಅಂಡ್ ಎಫ್ ಎಸ್ ನಲ್ಲಿ ಅಧಿಕಾರ ದುರುಪಯೋಗದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ವಂಚಕ ನಡವಳಿಕೆ ಹಾಗೂ ವಿಶ್ವಾಸಾರ್ಹವಲ್ಲದ ಅಥವಾ ಅನುತ್ಪಾದಕ ಆಸ್ತಿ ಎಂದು ಘೋಷಿಸಲಾದ ಕಂಪನಿಗಳಿಗೆ ಸಾಲ ನೀಡಿದ ಅರೋಪ ಅವರ ಮೇಲಿದೆ.
ಹರಿಶಂಕರನ್ ಅವರು ತೆಗೆದುಕೊಂಡ ಕ್ರಮದಿಂದಾಗಿ ಐಎಲ್ ಅಂಡ್ ಎಫ್ ಎಸ್ ಕಂಪನಿಗೆ ಸರಿಪಡಿಸಲಾಗದ ನಷ್ಟವಾಗಿದೆ. ಕಾರ್ಪೊರೇಟ್ ಬಾಂಡ್ ಮಾರುಕಟ್ಟೆಯಲ್ಲಿ ನೂರಾರು ಕೋಟಿ ಡಾಲರ್ ಸಾಲ ಎತ್ತಿ, ಕಂಪನಿಯನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಹದಿನೇಳು ಸಾವಿರ ಕೋಟಿ ರುಪಾಯಿಗೂ ಹೆಚ್ಚು ಮೊತ್ತವನ್ನು ಬ್ಯಾಂಕ್ ಸಾಲ ಮತ್ತು ಇತರ ಮೂಲದಿಂದ ಸಂಗ್ರಹಿಸಲಾಗಿದೆ.

ಪಿಎಫ್, ಪೆನ್ಷನ್ ಫಂಡ್, ಗ್ರಾಚ್ಯುಯಿಟಿ ಫಂಡ್, ಮ್ಯೂಚುವಲ್ ಫಂಡ್, ಖಾಸಗಿ ಹಾಗೂ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ಸಹ ಐಎಲ್ ಅಂಡ್ ಎಫ್ ಎಸ್ ನ ಸಾಲ ಪತ್ರಗಳ ಮೇಲೆ ಹಣ ತೊಡಗಿಸಿದ್ದವು.











Click it and Unblock the Notifications