ಖ್ಯಾತ ಪಂಜಾಬಿ ಗಾಯಕ ದಲೇರ್ ಮೆಹೆಂದಿ ಬಿಜೆಪಿಗೆ ಸೇರ್ಪಡೆ: ಓ..ಭಲ್ಲೇ..ಭಲ್ಲೇ..
Recommended Video
ನವದೆಹಲಿ, ಏ 26: ಸನ್ನಿ ಡಿಯೋಲ್, ಹನ್ಸ್ ರಾಜ್ ಹನ್ಸ್ ನಂತರ ಖ್ಯಾತ ಪಂಜಾಬಿ ಗಾಯಕ ದಲೇರ್ ಮೆಹೆಂದಿ ಭಾರತೀಯ ಜನತಾಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಹನ್ಸ್ ರಾಜ್ ಹನ್ಸ್ ಸಮ್ಮುಖದಲ್ಲಿ ದಲೇರ್ ಮೆಹೆಂದಿ ಅವರನ್ನು ಕೇಂದ್ರ ಸಚಿವ ವಿಜಯ್ ಗೋಯಲ್ ಪಕ್ಷಕ್ಕೆ ಬರಮಾಡಿಕೊಂಡು, ಪಕ್ಷದ ಬಾವುಟವನ್ನು ಅವರ ಕೈಗೆ ನೀಡಿ ಕೇಸರಿ ಶಾಲನ್ನು ಹೊದಿಸಿದ್ದಾರೆ.
ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ಮತ್ತು ಇತ್ತೀಚೆಗೆ ಬಿಜೆಪಿ ಸೇರಿರುವ ಮತ್ತು ಪೂರ್ವ ದೆಹಲಿ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಗೌತಂ ಗಂಭೀರ್ ಕೂಡಾ ಈ ವೇಳೆ ಹಾಜರಿದ್ದರು. 2013ರಲ್ಲಿ ದಲೇರ್ ಮೆಹೆಂದಿ ಕಾಂಗ್ರೆಸ್ ಪಕ್ಷದ ಜೊತೆಗೆ ಗುರುತಿಸಿಕೊಂಡಿದ್ದರು.

ನಾಲ್ಕನೇ ಹಂತದ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಖ್ಯಾತನಾಮರನ್ನು ಪಕ್ಷಕ್ಕೆ ಸೆಳೆಯುತ್ತಿದ್ದು, ಅವರಿಂದ ಪ್ರಚಾರ ಮಾಡಿಸುವ ಯೋಜನೆಯನ್ನು ಹಾಕಿಕೊಂಡಿದೆ.
ಪಂಜಾಬ್ ರಾಜ್ಯದಲ್ಲಿರುವ ಹದಿಮೂರು ಲೋಕಸಭಾ ಕ್ಷೇತ್ರಗಳ ಚುನಾವಣೆ, ಏಳನೇ ಮತ್ತು ಕೊನೆಯ ಹಂತದಲ್ಲಿ (ಮೇ 19) ನಡೆಯಲಿದೆ. ಮೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಇತ್ತೀಚೆಗೆ, ಸ್ಟಾರ್ ನಟ ಧರ್ಮೇಂದ್ರ ಅವರ ಪುತ್ರ, ನಟ ಸನ್ನಿ ಡಿಯೋಲ್ ಬಿಜೆಪಿ ಸೇರಿದ್ದರು, ಅವರಿಗೆ ಪಕ್ಷ ಗುರುದಾಸಪುರದಿಂದ (ಪಂಜಾಬ್) ಟಿಕೆಟ್ ನೀಡಿದೆ. (ಚಿತ್ರ : ANI)












Click it and Unblock the Notifications