ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ
ನವದೆಹಲಿ, ಡಿ.01: ಇಂಧನ ದರ ಇಳಿಕೆ ಮಾಡಿದ ಬೆನ್ನಲ್ಲೇ ಪೆಟ್ರೋಲಿಯಂ ಕಂಪನಿಗಳು ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆ ಮಾಡಿವೆ.
ಸಬ್ಸಿಡಿ ರಹಿತ ಅಡುಗೆ ಅನಿಲ ಪ್ರತಿ ಸಿಲಿಂಡರ್ ಮೇಲೆ 61.50 ರು ಏರಿಕೆಯಾಗಿದೆ. ಜೆಟ್ ಇಂಧನ ಅಥವಾ ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ಬೆಲೆ ಶೇ 1.2ರಷ್ಟು ಇಳಿಕೆ ಮಾಡಲಾಗಿದೆ. [ಸ್ಥಿತಿವಂತರಿಗೆ ಎಲ್ ಪಿಜಿ ಸಬ್ಸಿಡಿ ಸ್ಥಗಿತ: ವೆಂಕಯ್ಯ ನಾಯ್ಡು]

ಗ್ರಾಹಕರು ತಮ್ಮ ನಿಗದಿತ ಕೋಟಾ ನಂತರ ಪಡೆಯುವ ಸಬ್ಸಿಡಿ ರಹಿತ ಸಿಲಿಂಡರ್ (14.2 ಕೆ ಜಿ ತೂಗುವ) ಮೇಲೆ ಇನ್ಮುಂದೆ 61.50 ರು ಹೆಚ್ಚಿಗೆ ನೀಡಬೇಕಾಗುತ್ತದೆ. ದೆಹಲಿಯಲ್ಲಿ ಈಗ ಪರಿಷ್ಕೃತ ದರದಂತೆ 606.50 ರು ಪ್ರತಿ ಸಿಲಿಂಡರ್ ಗೆ ನೀಡಬೇಕು.[ಆನ್ ಲೈನ್ ನಲ್ಲೇ ಹೊಸ ಗ್ಯಾಸ್ ಸಂಪರ್ಕ ಪಡೆಯಿರಿ]
ನವೆಂಬರ್ 1ರಂದು ಸಬ್ಸಿಡಿ ರಹಿತ ಸಿಲಿಂಡರ್ ಗಳ ದರ 27.50ರು ಏರಿಕೆ ಮಾಡಲಾಗಿತ್ತು. ಇದಕ್ಕೂ ಮುನ್ನ ಅಕ್ಟೋಬರ್ ತಿಂಗಳಿನಲ್ಲಿ ಮೂರು ಬಾರಿ ಬೆಲೆ ಏರಿಕೆಯಾಗಿತ್ತು.












Click it and Unblock the Notifications