ಡಿಸೆಂಬರ್ ಆರಂಭಕ್ಕೆ ತೈಲ ದರ ಇಳಿಕೆ ಭಾಗ್ಯ
ನವದೆಹಲಿ, ಡಿಸೆಂಬರ್. 01: ನವೆಂಬರ್ ತಿಂಗಳ ಅಂತ್ಯಕ್ಕೆ ಕೇಂದ್ರ ಸರ್ಕಾರ ತೈಲ ದರದಲ್ಲಿ ಪರಿಷ್ಕರಣೆ ಮಾಡಿದೆ. ಪೆಟ್ರೋಲ್ ಲೀಟರ್ಗೆ 58 ಪೈಸೆ ಹಾಗೂ ಡೀಸೆಲ್ ಲೀಟರ್ಗೆ 25 ಪೈಸೆಯಷ್ಟು ಕಡಿಮೆಯಾಗಿದೆ.
ಹೊಸ ದರ ನವೆಂಬರ್ 30 ರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ. ಪೆಟ್ರೋಲ್ ದರವನ್ನು ನವೆಂಬರ್ 16ರಂದು 36 ಪೈಸೆ ಹೆಚ್ಚಳ ಮಾಡಲಾಗಿತ್ತು. ಹಿಂದೆಲ್ಲಾ ದರ ಪರಿಷ್ಕರಣೆಗೊಂಡಾಗ ಏರಿಕೆ ಕಾಣುತ್ತಿದ್ದ ಡೀಸೆಲ್ ಇದೇ ಮೊದಲ ಬಾರಿ ಇಳಿಕೆ ಭಾಗ್ಯ ನೀಡಿದೆ.[ಪೆಟ್ರೋಲ್ ದರ ಹಿಂದಿನ ಪರಿಷ್ಕರಣೆ ನೋಡಿ]

ಜಾಗತಿಕ ಮಾರುಕಟ್ಟೆಯನ್ನು ಆಧರಿಸಿ ದರ ಇಳಿಕೆ ಮಾಡಲಾಗಿದೆ. ರುಪಾಯಿ-ಡಾಲರ್ ವಿನಿಮಯ ದರಗಳನ್ನು ಪರಿಗಣಿಸಿ ತೈಲ ದರ ಇಳಿಕೆ ಮಾಡಲಾಗಿದೆ ಎಂದು ಭಾರತೀಯ ತೈಲ ನಿಗಮ (ಐಒಸಿ) ತಿಳಿಸಿದೆ.[ಜೀವನದಲ್ಲಿ ನಾವು ಎಷ್ಟು ಸೈಕಲ್ ಹೊಡೆದರೂ ಸಾಲದು!]
ಬೆಂಗಳೂರಿಗರು ಎಷ್ಟು ನೀಡಬೇಕು?
ಹೊಸ ದರ ಪರಿಷ್ಕರಣೆ ಅನ್ವಯ ಬೆಂಗಳೂರಿಗರು ಲೀಟರ್ ಪೆಟ್ರೋಲ್ ಗೆ 63.93 ರು. ಮತ್ತು ಡೀಸೆಲ್ ಗೆ 49.25 ರು. ನೀಡಬೇಕಾಗುತ್ತದೆ. ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ಸಾಮಾನ್ಯವಾಗಿ ತಿಂಗಳಲ್ಲಿ ಎರಡು ಸಾರಿ ತೈಲ ದರ ಪರಿಷ್ಕರಣೆ ಮಾಡುತ್ತಿವೆ.












Click it and Unblock the Notifications