ಹಬ್ಬಗಳ ಸೀಸನ್ ಮುಗಿಯುವವರೆಗೂ ಫ್ರಿಜ್, ಟಿವಿ ದರ ಹೆಚ್ಚಳ ಇಲ್ಲ!
ಬೆಂಗಳೂರು, ಸೆಪ್ಟೆಂಬರ್ 17: ಈಗಾಗಲೇ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿದೆ ಹೀಗಿರುವಾಗ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುವುದು ಸಹಜ, ಆದರೆ ಹಬ್ಬಗಳ ಸೀಸನ್ ಮುಗಿಯುವವರೆಗೂ ಟಿವಿ, ಫ್ರಿಜ್ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಕಂಪನಿಗಳು ತಿಳಿಸಿವೆ.
ಡಾಲರ್ ಮೌಲ್ಯದ ಏರಿಕೆ ನಡುವೆ ಗೃಹ ಬಳಕೆ ಸಾಧನಗಳ ದರವನ್ನು ಹೆಚ್ಚಿಸದೆ ಇರಲು ಕಂಪನಿಗಳು ನಿರ್ಧಾರ ಮಾಡಿವೆ. ಕಳೆದ ತಿಂಗಳು ರೂಪಾಯಿ ಮೌಲ್ಯ ಕುಸಿತದ ಕಾರಣಕ್ಕೆ ಶೇ.5ರಷ್ಟು ದರವನ್ನು ಹೆಚ್ಚಿಸಲಾಗಿತ್ತು. ಮುಂಬರುವ ಹಬ್ಬಗಳಲ್ಲಿ ಉತ್ತಮ ವಹಿವಾಟಿನ ನಿರೀಕ್ಷೆಯಲ್ಲಿರುವ ಕಂಪನಿಗಳು ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಸದ್ಯಕ್ಕೆ ದರ ಹೆಚ್ಚಳ ಮಾಡದಿರಲು ನಿರ್ಧರಿಸಿವೆ.
ಕಂಪನಿಗೆ ನಷ್ಟವಾದರೂ ತೊಂದಿರೆಯಿಲ್ಲ ಆದರೆ ಹಬ್ಬದ ಸಂದರ್ಭದಲ್ಲಿ ಗ್ರಾಹಕರ ಮನಸ್ಸಿಗೆ ನೋವು ಮಾಡಲು ಸಾಧ್ಯವಿಲ್ಲ ಎಂದಿವೆ, ದರ ಏರಿಕೆ ಮಾಡುವ ಪರಿಸ್ಥಿತಿಯಲ್ಲಿ ಉದ್ಯಮ ಇಲ್ಲ, ಆದಾಗ್ಯೂ ಡಾಲರ್ ಎದುರು ರೂಪಾಯಿ ಮೌಲ್ಯವು 73 ಮುಟ್ಟಿದರೆ, ಹೊರೆ ನಿಭಾಯಿಸುವ ಸಾಮರ್ಥ್ಯ ಕಂಪನಿಗಳಿಗೆ ಇಲ್ಲ ಎಂದು ಪ್ಯಾನಾಸೋನಿಕ್ ಇಂಡಿಯಾದ ಸಿಇಒ ಮುನಿಶ್ ಶರ್ಮಾ ಹೇಳಿದ್ದಾರೆ.

ಡಾಲರ್ ನ ಏರಿಳಿತಕ್ಕೂ, ಟಿವಿ, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಮೈಕ್ರೋವೇವ್ ಮತ್ತಿತರೆ ಗೃಹ ಬಳಕೆ ವಸ್ತುಗಳ ದರ ಹೆಚ್ಚಳಕ್ಕೂ ಸಂಬಂಧವಿದೆ. ಈ ವಸ್ತುಗಳ ಮೇಲಿನ ಜಿಎಸ್ ಟಿಯನ್ನು ಸರ್ಕಾರ ಶೇ.28ರಿಂದ 18ಕ್ಕೆ ಇಳಿಕೆ ಮಾಡಿತ್ತು, ಆದರೆ ಕಂಪನಿಗಳು ಕಳೆದ ತಿಂಗಳು ಶೇ.5ರಷ್ಟು ದರ ಹೆಚ್ಚಳ ಮಾಡಿದ್ದವು.












Click it and Unblock the Notifications