ಪತಂಜಲಿ ಯೋಗಪೀಠದಲ್ಲಿ ಯಾರಿಗೂ ಕೊರೊನಾ ಸೋಂಕು ಇಲ್ಲ: ರಾಮ್‌ದೇವ್

ಹರಿದ್ವಾರ, ಏಪ್ರಿಲ್ 24: ಪತಂಜಲಿ ಯೋಗಪೀಠದಲ್ಲಿ ಯಾರಿಗೂ ಕೊರೊನಾ ಸೋಂಕು ತಗುಲಿಲ್ಲ ಎಂದು ಯೋಗ ಗುರು ಬಾಬಾ ರಾಮ್‌ದೇವ್ ಸ್ಪಷ್ಟಪಡಿಸಿದ್ದಾರೆ.

ಪತಂಜಲಿ ಯೋಗಪೀಠಕ್ಕೆ ಭೇಟಿ ನೀಡಲು ಬಂದಿದ್ದ 14 ಮಂದಿಗೆ ಕೊರೊನಾ ಸೋಂಕು ಇದ್ದ ಕಾರಣ ಅವರನ್ನು ಆವರಣದೊಳಗೆ ಬಿಡಲಿಲ್ಲ. ಇನ್ನು ಐಪಿಡಿ ಹಾಗೂ ಆಚಾರ್ಯಕುಲಂನಲ್ಲಿ ದಾಖಲಾಗಲು ಬಂದಿದ್ದ ಹೊಸ ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿದ್ದು,ಕೊರೊನಾ ನೆಗೆಟಿವ್ ಬಂದಿದೆ.

ಕೊರೊನಾ ಯೋಗಪೀಠದಲ್ಲಿ ಯಾರಿಗೂ ಕೊರೊನಾ ಸೋಂಕು ತಗುಲಿಲ್ಲ, ಇನ್ನುಳಿದಂತೆ ಹರಿದಾಡಿದ ಸುದ್ದಿಗಳೆಲ್ಲವೂ ಸುಳ್ಳು, ಬೆಳಗ್ಗೆ 5 ರಿಂದ 10 ಗಂಟೆಯವರೆಗೆ ಯೋಗ ಕಾರ್ಯಕ್ರಮಗಳು ನಡೆಯಲಿವೆ.

No Coronavirus Case In Patanjali Main Campus, Says Ramdev

ಪತಂಜಲಿ ಯೋಗ ಪೀಠದಲ್ಲಿ 83 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎನ್ನುವ ಸುದ್ದಿಯನ್ನು ಪತಂಜಲಿ ವಕ್ತಾರ ತಿಜಾರವಾಲಾ ಅಲ್ಲಗಳೆದಿದ್ದಾರೆ. ಒಂದು ಮಾಹಿತಿಯ ಪ್ರಕಾರ, ಪತಂಜಲಿ ಯೋಗ ಪೀಠದ ಸಂಸ್ಥೆಗಳಲ್ಲಿ ಪ್ರತಿನಿತ್ಯ ಒಬ್ಬೊಬ್ಬ ಕೊರೊನಾವೈರಸ್ ಸೋಂಕಿತ ವ್ಯಕ್ತಿಗಳು ಪತ್ತೆಯಾಗುತ್ತಿದ್ದಾರೆ ಎಂದು ಹರಿದ್ವಾರದ ಸಿಎಓ ಡಾ. ಶಂಭು ಜಾ ತಿಳಿಸಿದ್ದಾರೆ.

ಏಪ್ರಿಲ್ 10ರವರೆಗೆ ಪತಂಜಲಿ ಯೋಗ ಪೀಠ ಆಚಾರ್ಯ ಕುಲಂ ಹಾಗೂ ಯೋಗ ಗ್ರಾಮದಲ್ಲಿ 83 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಪತಂಜಲಿ ಕ್ಯಾಂಪಸ್ ನಲ್ಲಿ ಈ ಸೋಂಕಿತರನ್ನು ಐಸೋಲೇಟ್ ಮಾಡಲಾಗಿದೆ ಎಂದು ಹೇಳಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+