ಹರಿದಾಡುತ್ತಿರುವ ಸಚಿವ ಸ್ಥಾನ ಪಟ್ಟಿಯನ್ನು ನಂಬಬೇಡಿ: ಮೋದಿ
ಹರಿದಾಡುತ್ತಿರುವ ಸಚಿವ ಸ್ಥಾನ ಪಟ್ಟಿಯನ್ನು ನಂಬಬೇಡಿ: ಮೋದಿ
Recommended Video
ನವದೆಹಲಿ, ಮೇ 26: ನಮಗೆ ಸಂಪೂರ್ಣ ಬಹುಮತ ಬಂದ ನಂತರ, ಸಾಮಾಜಿಕ ತಾಣ ಮತ್ತು ಇತರ ಕಡೆ ಹರಿದಾಡುತ್ತಿರುವ ಸಂಭಾವ್ಯ ಸಚಿವ ಸ್ಥಾನ ಪಟ್ಟಿಯನ್ನು ನಂಬಬಾರದು ಎಂದು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಂಭಾವ್ಯ ಸಚಿವರು ಎಂದು ಪತ್ರಿಕೆಯಲ್ಲಿ ಬಂದ ಎಲ್ಲ ಮುಖಂಡರು ಸಚಿವರಾಗಲು ಸಾಧ್ಯವಿಲ್ಲ ಎಂದಿರುವ ಮೋದಿ, ನಾವಿನ್ನೂ ಯಾವುದೇ ಹೆಸರು ಮತ್ತು ಹುದ್ದೆಯನ್ನು ಅಂತಿಮಗೊಳಿಸಿಲ್ಲ ಎಂದು ಹೇಳಿದ್ದಾರೆ.
ಎನ್ಡಿಎ ಮೈತ್ರಿಕೂಟದಲ್ಲಿ ಬಿರುಕು ಮೂಡಿಸಲು ಈ ರೀತಿಯ ಹುನ್ನಾರ ನಡೆಯುತ್ತಿದ್ದು, ಇವೆಲ್ಲವೂ ಕಪೋಕಲ್ಪಿತ ವರದಿಗಳಾಗಿವೆ, ಹಾಗಾಗಿ ಇದನ್ನು ನಂಬಬಾರದು ಎಂದು ಮೋದಿ ವಿನಂತಿಸಿಕೊಂಡಿದ್ದಾರೆ.

ಒಂದಂತೂ ಸತ್ಯ, ನಮ್ಮ ಮೈತ್ರಿಕೂಟದ ಯಾವುದೇ ಪಕ್ಷದ ಸದಸ್ಯರಿಗೆ ನಾವು ತಾರತಮ್ಯ ಮಾಡುವುದಿಲ್ಲ, ಅರ್ಹರಿಗೆ ಸಚಿವ ಸ್ಥಾನ ಖಂಡಿತ ಸಿಗುತ್ತದೆ ಎಂದು ಮೋದಿ ಹೇಳಿದ್ದಾರೆ.
ಎನ್ಡಿಎ ಮಿತ್ರಪಕ್ಷಗಳ ಎಲ್ಲಾ ಸಂಸದರಿಗೆ ಪ್ರಾತಿನಿಧ್ಯ ನೀಡಲಾಗುವುದು, ಎಲ್ಲಾ ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸಿ, ಸಚಿವ ಸಂಪುಟ ಅಂತಿಮಗೊಳಿಸಲಾಗುವುದು ಎಂದು ಮೋದಿ ಹೇಳಿದ್ದಾರೆ.
ಚುನಾವಣೆಯಲ್ಲಿ ಇಷ್ಟು ದೊಡ್ಡ ಜನಾದೇಶ ಸಿಕ್ಕಿರುವುದು ನಮಗೆ ಸಂತೋಷ ತಂದಿದೆ ಎಂದಿರುವ ಮೋದಿ, ಇದು ಇನ್ನಷ್ಟು ನಮ್ಮ ಹೊಣೆಗಾರಿಕೆಯನ್ನು ಹೆಚ್ಚಿಸಿದೆ ಎಂದು ಹೇಳಲು ಮರೆಯಲಿಲ್ಲ.












Click it and Unblock the Notifications