ಚಿತ್ರ ಸುದ್ದಿ : ಮಂಗಳವಾರ ಭಾರತದಲ್ಲಿ ಏನೇನಾಯ್ತು ನೋಡಿ

ಬೆಂಗಳೂರು, ಜ. 27: ಭಾರತ ಹಾಗೂ ಇತರ ದೇಶಗಳಲ್ಲಿ ಮಂಗಳವಾರ ಸಂಭವಿಸಿದ ವಿವಿಧ ಸುದ್ದಿಗಳನ್ನು ಚಿತ್ರ ಸಹಿತ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ನೀಡಲಾಗಿದೆ.

ರಾಜಸ್ತಾನದಲ್ಲಿ ಭಾರತೀಯ ಯುದ್ಧ ವಿಮಾನ ಮಿಗ್-27 ಅಪಘಾತ, ಬೆಂಗಳೂರಿನಲ್ಲಿ ಮಹಿಳೆಯರ ಪಿಂಕ್‌ಥಾನ್ ಓಟ ಕುರಿತು ಘೋಷಣೆ, ಜಮ್ಮು ಕಾಶ್ಮೀರದಲ್ಲಿ ನಡೆದ ಹಿಜ್ಬುಲ್ ಮುಜಾಹಿದೀನ್ ಉಗ್ರರ ಎನ್‍‌ಕೌಂಟರ್, ನವದೆಹಲಿ ವಿಧಾನಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪ್ರಚಾರ ಸೇರಿದಂತೆ ಇನ್ನಿತರ ಪ್ರಮುಖ ಸುದ್ದಿಗಳನ್ನು ಓದಬಹುದು.

ಮಹಿಳೆಯರ ಪಿಂಕಥಾನ್ ಓಟ

ಮಹಿಳೆಯರ ಪಿಂಕಥಾನ್ ಓಟ

ಬೆಂಗಳೂರಿನಲ್ಲಿ ಆಯೋಜಿಸಿರುವ ಮಹಿಳೆಯರ ಪಿಂಕಥಾನ್ ಓಟದ ಕುರಿತು ವಿವರಣೆ ನೀಡಿದ ಸಂದರ್ಭ ಬಾಲಿವುಡ್ ನಟ ಮಿಲಿಂದ್ ಸೋಮನ್ ಹಾಗೂ ಇತರರು.

ವಿಮಾನಾಪಘಾತ

ವಿಮಾನಾಪಘಾತ

ರಾಜಸ್ತಾನದ ಬಾರ್ಮರ್ ಜಿಲ್ಲೆಯಲ್ಲಿ ಮಂಗಳವಾರ ಅಪಘಾತಕ್ಕೀಡಾದ ಭಾರತೀಯ ವಾಯು ದಳದ ಮಿಗ್-27 ಯುದ್ಧ ವಿಮಾನ.

ಉಗ್ರರ ಎನ್‌ಕೌಂಟರ್

ಉಗ್ರರ ಎನ್‌ಕೌಂಟರ್

ಜಮ್ಮು ಕಾಶ್ಮೀರದ ಟ್ರಾಲ್ ಪಟ್ಟಣದಲ್ಲಿ ದಾಳಿ ನಡೆಸಿದ ಹಿಜ್ಬುಲ್ ಮುಜಾಹಿದೀನ್ ಉಗ್ರರ ಎನ್‌ಕೌಂಟರ್ ನಂತರ ಸ್ಥಳವನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವ ಭಾರತೀಯ ಸೈನಿಕರು.

ಕಸ್ಟಮ್ಸ್ ಅಧಿಕಾರಿಗೆ ಪ್ರಮಾಣಪತ್ರ

ಕಸ್ಟಮ್ಸ್ ಅಧಿಕಾರಿಗೆ ಪ್ರಮಾಣಪತ್ರ

ನವದೆಹಲಿಯಲ್ಲಿ ಆಯೋಜಿಸಿದ್ದ ಇನ್ವೆಸ್ಟಿಚರ್ ಸೆರೆಮನಿ 2015 ಹಾಗೂ ಇಂಟರ್‌ನ್ಯಾಶನಲ್ ಕಸ್ಟಮ್ಸ್ ಡೇ 2015 ಕಾರ್ಯಕ್ರಮದಲ್ಲಿ ಮಹಿಳಾ ಕಸ್ಟಮ್ಸ್ ಅಧಿಕಾರಿಯೋರ್ವರಿಗೆ ಪ್ರಮಾಣಪತ್ರವನ್ನು ವಿತ್ತ ಸಚಿವ ಅರುಣ್ ಜೈಟ್ಲಿ ವಿತರಿಸಿದರು.

ಟೆನ್ನಿಸ್ ಸಂಭ್ರಮ

ಟೆನ್ನಿಸ್ ಸಂಭ್ರಮ

ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ಉದ್ಘಾಟಿಸಿದ ಸನ್‌ಫೀಸ್ಟ್ ಎಐಟಿಎ (ಆಲ್ ಇಂಡಿಯಾ ಟೆನ್ನಿಸ್ ಅಸೋಸಿಯೇಶನ್) ಪಂದ್ಯಾವಳಿ ಸಂದರ್ಭ ರಾಜ್ಯಪಾಲ ಕೆ.ಎನ್. ತ್ರಿಪಾಠಿ ಹಾಗೂ ಹಿರಿಯ ಟೆನ್ನಿಸ್ ಆಟಗಾರರು ಸಂಭ್ರಮಿಸಿದ್ದು ಹೀಗೆ.

ವಿದೇಶಿ ಕಲಾವಿದರು

ವಿದೇಶಿ ಕಲಾವಿದರು

ಕೋಲ್ಕತದಲ್ಲಿ ಆಯೋಜಿಸಿರುವ 39ನೇ ಅಂತಾರಾಷ್ಟ್ರೀಯ ಕೋಲ್ಕೊತಾ ಬುಕ್ ಫೇರ್‌ನಲ್ಲಿ ಪ್ರದರ್ಶನ ನೀಡುತ್ತಿರುವ ವಿದೇಶಿ ಕಲಾವಿದರು.

ನೆನಪಿನ ಕಾಣಿಕೆ

ನೆನಪಿನ ಕಾಣಿಕೆ

ನವದೆಹಲಿಯಲ್ಲಿ ಅಮೆರಿಕದ ವಾಣಿಜ್ಯ ಸಚಿವೆ ಪೆನ್ನಿ ಪ್ರಿಟ್ಜರ್ ಅವರಿಗೆ ನೆನಪಿನ ಕಾಣಿಕೆ ನೀಡಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹಾಗೂ ಬಾಬುಲ್ ಸುಪ್ರಿಯೊ.

ರಾಷ್ಟ್ರಪತಿಯೊಂದಿಗೆ ಕಲಾವಿದರು

ರಾಷ್ಟ್ರಪತಿಯೊಂದಿಗೆ ಕಲಾವಿದರು

ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಕಲಾವಿದರು ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೊಂದಿಗೆ.

ರಾಹುಲ್ ಪ್ರಚಾರ

ರಾಹುಲ್ ಪ್ರಚಾರ

ನವದೆಹಲಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕಿಳಿದ ಪಕ್ಷದ ಯುವರಾಜ ರಾಹುಲ್ ಗಾಂಧಿ.

ರಷ್ಯಾ ಕೆಡೆಟ್‌ಗಳು

ರಷ್ಯಾ ಕೆಡೆಟ್‌ಗಳು

ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ರಷ್ಯಾದ ಎನ್‌ಸಿಸಿ ಕೆಡೆಟ್‌ಗಳು ರಾಷ್ಟ್ರಪತಿ ಭವನದಲ್ಲಿ ಕಾಣಿಸಿಕೊಂಡಿದ್ದು ಹೀಗೆ.

ಅಲಂಕೃತ ರೈಸಿನಾ ಹಿಲ್

ಅಲಂಕೃತ ರೈಸಿನಾ ಹಿಲ್

ಗಣರಾಜ್ಯೋತ್ಸವ ನಿಮಿತ್ತ ಅಲಂಕೃತಗೊಂಡಿದ್ದ ರಾಷ್ಟ್ರಪತಿ ಭವನ ಇರುವ ರೈಸಿನಾ ಹಿಲ್.

ಸೌದಿ ರಾಜನ ಕೈ ಕುಲುಕಿದ ಒಬಾಮ

ಸೌದಿ ರಾಜನ ಕೈ ಕುಲುಕಿದ ಒಬಾಮ

ಭಾರತದಲ್ಲಿ ಮೂರು ದಿನಗಳ ಪ್ರವಾಸ ಮುಗಿಸಿ ಸೌದಿ ಅರೇಬಿಯಾಕ್ಕೆ ತೆರಳಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರ ಕೈಕುಲುಕಿದರು.

ಶಮಿತಾಬ್ ಪ್ರಚಾರದಲ್ಲಿ ಅಮಿತಾಬ್

ಶಮಿತಾಬ್ ಪ್ರಚಾರದಲ್ಲಿ ಅಮಿತಾಬ್

ಲಂಡನ್‌ನಲ್ಲಿ ಶಮಿತಾಬ್ ಹಿಂದಿ ಚಿತ್ರದ ಪ್ರಮೋಶನ್‌ಗೆ ತೆರಳಿರುವ ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್, ಧನುಷ್ ಹಾಗೂ ಅಕ್ಷರಾ ಹಾಸನ್ ಕಾಣಿಸಿಕೊಂಡಿದ್ದು ಹೀಗೆ.

ಗೆಲುವಿನ ಸಂಭ್ರಮ

ಗೆಲುವಿನ ಸಂಭ್ರಮ

ಮೆಲ್ಬೋರ್ನ್ ನಗರದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪೇನ್‌ನ ರಾಫೆಲ್ ನಡಾಲ್‌ ಅವರನ್ನು ಸೋಲಿಸಿದ ನಂತರ ಸಂಭ್ರಮಿಸಿದ ಚೆಕ್ ಗಣರಾಜ್ಯದ ಥಾಮಸ್ ಬರ್ಡಿಚ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+