Get Updates
Get notified of breaking news, exclusive insights, and must-see stories!

ಹೊಸ ಪ್ಯಾನ್ ಕಾರ್ಡ್ ಶುಲ್ಕ ರೂ 105ಕ್ಕೆ ಏರಿಕೆ

ನವದೆಹಲಿ, ಜ.29: ಪ್ಯಾನ್ ಕಾರ್ಡ್ ಈಗಂತೂ ಎಲ್ಲಾ ವಹಿವಾಟುಗಳಿಗೂ ಕಡ್ಡಾಯಗೊಳಿಸಲಾಗಿದೆ. ಹಾಗಾಗಿ ಅದಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಹಾಗಾಗಿ ಹೊಸ ಪ್ಯಾನ್ ಕಾರ್ಡ್ ಮಾಡಿಸಬೇಕೆಂದರೆ ಈಗ ಸ್ವಲ್ಪ ಹೆಚ್ಚಿನ ಶುಲ್ಕ ಭರಿಸಬೇಕಾಗಿದೆ.

ಈ ಹಿಂದೆ ಶುಲ್ಕದ ಜತೆಗೆ ಒಂದಷ್ಟು ಹಣವನ್ನು ದಲ್ಲಾಳಿಗಳಿಗೆ ನೀಡಿದರೆ ನಿಮ್ಮ ಹೆಸರಿನಲ್ಲಿ PAN card ಒಂದು ತಿಂಗಳಲ್ಲಿ ಮನೆಗೆ ಬರುತ್ತಿತ್ತು. ಆದರೆ ಇನ್ನು ಮುಂದೆ ಸ್ವಲ್ಪ ಹೆಚ್ಚಿಗೇ ಹಣ ಪಾವತಿಸಬೇಕಾಗಿದೆ. ಹೊಸದಾಗಿ ಕಾರ್ಡ್ ಮಾಡಿಸಬೇಕಾದರೆ ಇಲಾಖೆಗೇ ಶುಲ್ಕ ರೂಪದಲ್ಲಿ 105 ರೂ. ಪಾವತಿಸಬೇಕಾಗಿದೆ. PAN application processing fee = Rs 105.00 ( Rs 93.00 + 12.36 % ಸೇವಾ ತೆರಿಗೆ).

New PAN card to cost Rs 105 CBDT and IT department

ಜತೆಗೆ, ಹೊಸ PAN card ಮಾಡಿಸಲು ಆದಾಯ ತೆರಿಗೆ ಇಲಾಖೆ ಒಂದಷ್ಟು ಹೊಸ ನಿಯಮಗಳನ್ನೂ ಜಾರಿಗೆ ತಂದಿದೆ. ಇದೀಗ ಅಡ್ರಸ್ ಪ್ರೂಫ್ ಮತ್ತು ಐಡೆಂಟಿಟಿ ಪ್ರೂಫ್ ಕಡ್ಡಾಯವಾಗಿದೆ. ನಕಲಿ ಅಥವಾ ಬಹುಸಂಖ್ಯೆಯಲ್ಲಿ ಪ್ಯಾನ್ ಕಾರ್ಡ್ ಮಾಡಿಸಿ, ತೆರಿಗೆ ವಂಚಿಸುವುದನ್ನು ತಪ್ಪಿಸುವ ಉದ್ದೇಶದಿಂದ ಈ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಇಲಾಖೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಈ ವೆಬ್ ಸೈಟಿಗೆ ಭೇಟಿ ನೀಡಿ - https://tin.tin.nsdl.com/pan/correction.html

Central Board of Direct Taxes (CBDT) ಅಧಿಸೂಚನೆ ಪ್ರಕಾರ ಫೆಬ್ರವರಿ 3 ರಿಂದ ಹೊಸದಾಗಿ ಪ್ಯಾನ್ ಕಾರ್ಡ್ ಮಾಡಿಸಿಕೊಳ್ಳಲು ಇಚ್ಛಿಸುವವರು ಅಡ್ರಸ್ ಪ್ರೂಫ್, ಐಡೆಂಟಿಟಿ ಪ್ರೂಫ್ ಮತ್ತು ಜನ್ಮ ದಿನಾಂಕ ದಾಖಲಾತಿಯನ್ನು ಅರ್ಜಿ ಸಲ್ಲಿಕೆ ವೇಳೆ ಹಾಜರುಪಡಿಸುವುದು ಕಡ್ಡಾಯವಾಗಿದೆ.

ಆದರೆ ಗಮನಿಸಿ 10 ಸಂಖ್ಯೆಗಳ PAN cardನಲ್ಲಿ ವಿಳಾಸವನ್ನು ನಮೂದಿಸುವುದಿಲ್ಲ. ಕೇವಲ ಹೆಸರು ಮತ್ತು ಜನ್ಮ ದಿನಾಂಕ ಮಾತ್ರವೇ ದಾಖಲಾಗುತ್ತದೆ. ಹಾಗಾಗಿ ಅದನ್ನು ಅಡ್ರಸ್ ಪ್ರೂಫ್ ಗೆ ಬಳಸಲು ಬರುವುದಿಲ್ಲ. ( HRA: 1 ಲಕ್ಷ ರೂ ಬಾಡಿಗೆಗೆ ಓನರ್ ಪ್ಯಾನ್ ಕಡ್ಡಾಯ )

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+