New FASTag: 10 ದಿನದಲ್ಲಿ ಹೊಸ ಫಾಸ್ಟ್‌ಟ್ಯಾಗ್ ಪಾಸ್: ಯಾವೆಲ್ಲಾ ವಾಹನ ಸವಾರರು ಬಳಸಬಹುದು ? ಇಲ್ಲಿದೆ ಸಂಪೂರ್ಣ ಮಾಹಿತಿ
New FASTag: ಕೇಂದ್ರ ಸರ್ಕಾರವು ವಾಹನ ಸವಾರರಿಗೆ ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಫಾಸ್ಟ್ ಟ್ಯಾಗ್‌ನಲ್ಲಿದ್ದ ಗೊಂದಲಗಳಿಗೆ ಮುಕ್ತಿ ದೊರೆತಿದ್ದು ಇನ್ನು ಕೇವಲ ಹತ್ತು ದಿನಗಳಲ್ಲಿ ಹೊಸ ಫಾಸ್ಟ್ ಟ್ಯಾಗ್ ಪಾಸ್ ಸಿಗಲಿದೆ. ಅದೂ ಸಹ ಅತ್ಯಂತ ಕಡಿಮೆ ಬೆಲೆ ಫಾಸ್ಟ್ ಟ್ಯಾಗ್ ಸಿಗಲಿದೆ. ವಾರ್ಷಿಕ ಟೋಲ್ / ಫಾಸ್ಟ್ ಟ್ಯಾಗ್ ಪರಿಕಲ್ಪನೆಯನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಪರಿಚಯಿಸಿದ್ದಾರೆ. ಈ ಯೋಜನೆಯು ಇದೇ (ಆಗಸ್ಟ್) 15ರಿಂದ ಜಾರಿಗೆ ಬರಲಿದೆ.
ವಾರ್ಷಿಕ ಫಾಸ್ಟ್ ಟ್ಯಾಗ್ (ಟೋಲ್ ಪಾಸ್) ವಿವರ ಇಲ್ಲಿದೆ
ಭಾರತ ಸರ್ಕಾರವು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಓಡಾಡುವ ವಾಹನ ಸವಾರರಿಗೆ ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ಕೊಡುತ್ತಿದೆ. ಈ ಫಾಸ್ಟ್‌ಟ್ಯಾಗ್ ಪಾಸ್‌ಗೆ ಒಮ್ಮೆ ನೀವು ರಿಚಾರ್ಜ್ ಮಾಡಿಸಿದರೆ ವರ್ಷ ಪೂರ್ತಿ ಬಳಕೆ ಮಾಡುವುದಕ್ಕೆ ಅವಕಾಶ ಇದೆ.

ಈ ಫಾಸ್ಟ್ ಟ್ಯಾಗ್‌ನ ಪ್ರಮುಖ ವಿವರ ಇಲ್ಲಿದೆ
1. 2025-26ರ ವರ್ಷದ ವಾರ್ಷಿಕ ಟೋಲ್ ಪಾಸ್‌ನ ಬೆಲೆ ₹ 3,000 ಸಾವಿರ ಇದೆ.
2. ಈ ಪಾಸ್ ತೆಗೆದುಕೊಂಡರೆ 200 ಟೋಲ್-ಫ್ರೀ ಟ್ರಿಪ್‌ಗಳಿಗೆ ಅಥವಾ ಒಂದು ವರ್ಷಕ್ಕೆ, ಯಾವುದು ಮೊದಲು ಮಿತಿಯನ್ನು ತಲುಪುತ್ತದೆಯೋ ಅಲ್ಲಿಯವರೆಗೆ ಕವರೇಜ್ ಅನ್ವಯವಾಗಲಿದೆ.
3. ಇನ್ನು ರಾಷ್ಟ್ರೀಯ ಹೆದ್ದಾರಿ (NH) ಹಾಗೂ ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ (NE) ಶುಲ್ಕ ಪ್ಲಾಜಾಗಳಲ್ಲಿ ಮಾತ್ರ ಈ ಪಾಸ್ ಬಳಕೆ ಮಾಡುವುದಕ್ಕೆ ಸಾಧ್ಯವಿದೆ. ಉಳಿದಂತೆ ರಾಜ್ಯ ಹೆದ್ದಾರಿಗಳು, ಖಾಸಗಿ ರಸ್ತೆಗಳು ಮತ್ತು ರಾಜ್ಯ ಸರ್ಕಾರದಿಂದ ನಿರ್ವಹಿಸಲ್ಪಡುತ್ತಿರುವ ಎಕ್ಸ್‌ಪ್ರೆಸ್‌ವೇಗಳಲ್ಲಿ ನೀವು ಈ ಪಾಸ್ ಬಳಕೆ ಮಾಡುವುದಕ್ಕೆ ಸಾಧ್ಯವಿಲ್ಲ. ಈ ನಿರ್ದಿಷ್ಟ ಜಾಗಗಳಲ್ಲಿ ನೀವು ಹಣ ಪಾವತಿ ಮಾಡಬೇಕು.
ಯಾರೆಲ್ಲಾ ಈ ಟೋಲ್ ಪಾಸ್ ಬಳಸಿಕೊಳ್ಳಬಹುದು: ಖಾಸಗಿ ಕಾರು, ಜೀಪ್ ಮತ್ತು ವ್ಯಾನ್‌ಗಳನ್ನು ಹೊಂದಿರುವವರಿಗೆ ಈ ಪಾಸ್ ಸಿಗಲಿದೆ. ಆದರೆ ವಾಣಿಜ್ಯ ಬಳಕೆಗೆ ಇದು ಸಿಗುವುದಿಲ್ಲ.
ಇನ್ನು ರಾಜಮಾರ್ಗಯಾತ್ರೆ ಮೊಬೈಲ್ ಅಪ್ಲಿಕೇಶನ್ ಅಥವಾ ಅಧಿಕೃತ NHAI ವೆಬ್‌ಸೈಟ್ ಮೂಲಕ ಪಾಸ್ ಪಡೆದುಕೊಳ್ಳುವುದುಕ್ಕೆ ಅವಕಾಶ ಇದೆ. ಅಲ್ಲದೇ ಇದರಲ್ಲೇ ಪಾಸ್‌ಗಳನ್ನು ನವೀಕರಣ ಸಹ ಮಾಡಿಕೊಳ್ಳಲು ಅವಕಾಶ ಇದೆ. ಪಾಸ್ ಅನ್ನು ಈಗಾಗಲೇ ಅಸ್ತಿತ್ವದಲ್ಲಿರುವ FASTag ನಲ್ಲಿ ಆಕ್ಟಿವೇಟ್ ಮಾಡಲಾಗುತ್ತದೆ. ನೀವು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಹೊಸ ಫಾಸ್ಟ್ ಟ್ಯಾಗ್ ಖರೀದಿ ಮಾಡುವ ಅವಶ್ಯಕತೆ ಇರುವುದಿಲ್ಲ. ಸಾಮಾನ್ಯವಾಗಿ ನೀವು ಹಣ ಪಾವತಿ ಮಾಡಿದ ಎರಡು ಗಂಟೆಗಳಲ್ಲಿ ಈ ಪಾಸ್ ಆಕ್ಟಿವೇಟ್ ಆಗಲಿದೆ.
ವಾರ್ಷಿಕ ಫಾಸ್ಟ್‌ಟ್ಯಾಗ್‌ನ ಪ್ರಯೋಜನಗಳು
ವೆಚ್ಚ ಉಳಿತಾಯ: ಪ್ರತಿ - ಪ್ರವಾಸದ ಟೋಲ್‌ಗಳು ಅಥವಾ ಮಾಸಿಕ ಪಾಸ್‌ಗಳನ್ನು ಪಾವತಿಸುವುದಕ್ಕೆ ಹೋಲಿಸಿದರೆ. ಈ ಪಾಸ್‌ನಿಂದ ಹೆಚ್ಚು ಹಣ ಉಳಿತಾಯ ಆಗಲಿದೆ. ವಿಶೇಷವಾಗಿ ಆಗಾಗ್ಗೆ ಪ್ರವಾಸಗಳನ್ನು ಮಾಡುವವರಿಗೆ ಲಾಭವಾಲಿದೆ. ಬಳಕೆಯನ್ನು ಅವಲಂಬಿಸಿ ಬಳಕೆದಾರರಿಗೆ ವಾರ್ಷಿಕವಾಗಿ ₹20,000 ವರೆಗೆ ಉಳಿತಾಯ ಮಾಡುವ ಅವಕಾಶ ಇದೆ ಎಂದು ಅಂದಾಜಿಸಲಾಗಿದೆ.
ಪಾಸ್ ಟೋಲ್ ಪಾವತಿ ಪ್ರಕ್ರಿಯೆಯನ್ನು ಸುಗಮಗೊಳಿಸುವುದು. ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯ ಮತ್ತು ದಟ್ಟಣೆಯನ್ನು ಕಡಿಮೆ ಮಾಡುವುದು ಈ ಪಾಸ್‌ನ ಉದ್ದೇಶವಾಗಿದೆ ಎಂದ ನಿತಿನ್ ಗಡ್ಕರಿ ಹೇಳಿದ್ದಾರೆ.
ವಾರ್ಷಿಕ ಫಾಸ್ಟ್ ಟ್ಯಾಗ್‌ನ ಮಿತಿಗಳು
ಇನ್ನು ವಾರ್ಷಿಕ ಫಾಸ್ ಟ್ಯಾಗ್‌ನಿಂದ ಸಾಕಷ್ಟು ಅನುಕೂಲಗಳು ಇವೆಯಾದರೂ ಇದೇ ಸಂದರ್ಭದಲ್ಲಿ ಕೆಲವೊಂದು ಷರತ್ತುಗಳನ್ನು ಸಹ ಇದರಲ್ಲಿ ವಿಧಿಸಲಾಗಿದೆ.
1. ಪಾಸ್ ಅನ್ನು ವರ್ಗಾಯಿಸಲು ಸಾಧ್ಯವಿಲ್ಲ ಹಾಗೂ ನೋಂದಾಯಿತ ವಾಹನಕ್ಕೆ ಮಾತ್ರ ಅನ್ವಯವಾಗಲಿದೆ.
2. 200 ಟ್ರಿಪ್‌ಗಳು ಅಥವಾ ಒಂದು ವರ್ಷದ ಮಾನ್ಯತೆಯ ಮಿತಿಯನ್ನು ತಲುಪಿದ ನಂತರ, FASTag ಸ್ವಯಂಚಾಲಿತವಾಗಿ ಅದರ ನಿಯಮಿತ ಟೋಲ್ ಕಡಿತ ಮೋಡ್ ಆಕ್ಟಿವೇಟ್ ಆಗಲಿದೆ. ವರ್ಷದೊಳಗೆ ಹೆಚ್ಚುವರಿ ಟ್ರಿಪ್‌ಗಳು ಅಗತ್ಯವಿದ್ದರೆ, ಮತ್ತೊಂದು ₹3,000 ಗೆ ಹೊಸ ಪಾಸ್ ಅನ್ನು ಖರೀದಿಸಬಹುದು.
3. FASTag ವಾರ್ಷಿಕ ಪಾಸ್ ಭಾರತದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಆಗಾಗ್ಗೆ ಪ್ರಯಾಣಿಸುವವರಿಗೆ ವೆಚ್ಚ-ಪರಿಣಾಮಕಾರಿ ಮತ್ತು ಅನುಕೂಲಕರ ಪರಿಹಾರವನ್ನು ನೀಡುತ್ತದೆ. ಇದು ಟೋಲ್ ಪಾವತಿಗಳನ್ನು ಸರಳಗೊಳಿಸುವ ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ರಾಜ್ಯ ಅಭಿವೃದ್ಧಿ ಮಾಡಿದ ಪ್ರದೇಶಗಳಲ್ಲಿ ಅನ್ವಯವ ಆಗಲ್ಲ.












Click it and Unblock the Notifications