'ಪ್ರಧಾನಿ ಮೋದಿ ಕ್ಷಮಿಸಿದರೂ ಬಾಲಕಿ ವಿರುದ್ಧದ ಎಫ್‌ಐಆರ್ ರದ್ದಾಗಿಲ್ಲ ಯಾಕೆ?'

ನೀಟ್‌ ಪರೀಕ್ಷೆ ಅಕ್ರಮ ಪ್ರಕರಣ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಮೋದಿ ವಿರುದ್ಧ ಅಪ್ರಾಪ್ತ ಬಾಲಕಿಯೊಬ್ಬಳು ನಿಂದನಾತ್ಮಕ ಹೇಳಿಕೆ ನೀಡಿದ್ದು, ಇವರ ವಿರುದ್ಧ ಕೇಸ್ ದಾಖಲಾಗಿತ್ತು. ಇದೀಗ ಈ ಬಾಲಕಿಯ ಮೇಲಿನ ಎಫ್‌ಐಆರ್ ರದ್ದಾಗಿಲ್ಲ ಎಂದು ಸಿಜೆಪಿ ಆಕ್ರೋಶ ಹೊರಹಾಕಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

'ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿದ್ದ 15 ವರ್ಷದ ಅಪ್ರಾಪ್ತ ಬಾಲಕಿಯ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಇನ್ನೂ ರದ್ದಾಗಿಲ್ಲ. ಆಕೆ ಮತ್ತು ಅವರ ಕುಟುಂಬ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ. ಅಲ್ಲದೆ ಪ್ರಧಾನಿ ಅವರೇ ಸ್ವತಃ ಬಹಿರಂಗವಾಗಿ ಬಾಲಕಿಯನ್ನು ಕ್ಷಮಿಸಿರುವುದಾಗಿ ಹೇಳಿದ್ದಾರೆ. ಆದರೂ ಪೊಲೀಸರು ಪ್ರಕರಣವನ್ನು ವಾಪಸ್ ಪಡೆಯದಿರುವುದು ಅವರ ತಾಯಿಗೆ ತೀವ್ರ ಆತಂಕವನ್ನು ಉಂಟುಮಾಡಿದೆ,' ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತಿಳಿಸಿದೆ.

NEET Protest Row CJP Demands Withdrawal of FIR Against Minor Girl Despite PM Modi s Forgiveness

ಪ್ರಧಾನಿ ಮೋದಿ ವಿರುದ್ಧ ನಿಂದನಾತ್ಮಕ ಹೇಳಿಕೆ

ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಸಿಜೆಪಿ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆದಿತ್ತು. ಈ ವೇಳೆ 15 ವರ್ಷದ ಬಾಲಕಿಯೊಬ್ಬಳು ಪ್ರಧಾನಿ ಮೋದಿ ಅವರ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಪ್ರಧಾನಿಯವರ ಘನತೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ನೋಯ್ಡಾ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್‌ಐಆರ್ ದಾಖಲಾಗಿತ್ತು. ನಂತರ ಈ ಪ್ರಕರಣವನ್ನು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾವರಣೆ ಮಾಡಲಾಗಿತ್ತು.

ಪ್ರಧಾನಿ ಮೋದಿಗೆ ಸಿಜೆಪಿ ಮನವಿ ಏನು?

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 'ದಾರಿ ತಪ್ಪಿದ ಮಕ್ಕಳ ಮೇಲೆ ಕೋಪ ಅಥವಾ ಸೇಡಿನ ಕ್ರಮ ಕೈಗೊಳ್ಳುವುದು ಸರಿಯಲ್ಲ. ಮಕ್ಕಳು ಮಾಡಿದ ತಪ್ಪನ್ನು ಕ್ಷಮಿಸಿ, ಅವರಿಗೆ ಸರಿಯಾದ ದಾರಿ ತೋರಿಸುವುದು ನಮ್ಮ ಕರ್ತವ್ಯ,' ಎಂದು ಹೇಳಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಈ ಹೇಳಿಕೆಯ ನಂತರ ಬಾಲಕಿ ಕೂಡ ವಿಡಿಯೋ ಬಿಡುಗಡೆ ಮಾಡಿ, 'ಆ ಸಂದರ್ಭಕ್ಕೆ ಮರುಳಾಗಿ ನಾನು ತಪ್ಪು ಮಾಡಿದೆ. ಇದು ನನ್ನ ಮೊದಲ ಮತ್ತು ಕೊನೆಯ ತಪ್ಪು. ದೇಶದ ಜನತೆ ಹಾಗೂ ಪ್ರಧಾನಿಯವರಲ್ಲಿ ಕ್ಷಮೆ ಕೇಳುತ್ತೇನೆ,' ಎಂದು ಹೇಳುವ ಮೂಲಕ ಕಣ್ಣೀರಿಟ್ಟಿದ್ದಳು.

ಹಿಂಪಡೆಯದ ಎಫ್‌ಐಆರ್, ತಾಯಿ ಆತಂಕ

ಸಿಜೆಪಿ ನಿಯೋಗದ ವಕೀಲೆ ಹಾಗೂ ವಕ್ತಾರೆ ರತ್ನಾ ಸಿಂಗ್ ಅವರು ಬಾಲಕಿಯ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ನಂತರ ಈ ವಿಷಯವನ್ನು ಹಂಚಿಕೊಂಡಿದ್ದಾರೆ. 'ಪ್ರಧಾನಿಯವರು ಸಾರ್ವಜನಿಕವಾಗಿ ಕ್ಷಮಿಸಿದ್ದಾರೆ. ಮಗಳು ಕ್ಷಮೆ ಕೇಳಿದ ಹೊರತಾಗಿಯೂ ಪೊಲೀಸರು ಎಫ್‌ಐಆರ್ ಹಿಂಪಡೆದಿಲ್ಲ ಎಂದು ತಾಯಿ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಾಧ್ಯಮಗಳು ನಿರಂತರವಾಗಿ ತಮ್ಮ ಮನೆಗೆ ಬಂದು ಪ್ರಶ್ನಿಸುತ್ತಿರುವುದರಿಂದ ಕುಟುಂಬ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದೆ,' ಎಂದು ಅವರು ತಿಳಿಸಿದ್ದಾರೆ.

ಪ್ರಕರಣದ ಎಫ್‌ಐಆರ್‌ನಲ್ಲಿ ಬಾಲಕಿಗೆ 15 ವರ್ಷವಾಗಿದ್ದರೂ, ವಯಸ್ಸನ್ನು 25 ವರ್ಷ ಎಂದು ತಪ್ಪಾಗಿ ನಮೂದಿಸಲಾಗಿದೆ ಎಂದು ತಾಯಿ ದೂರಿದ್ದು, ಪ್ರಕರಣವನ್ನು ತಕ್ಷಣವೇ ರದ್ದುಗೊಳಿಸುವಂತೆ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಈ ನಡುವೆ ಸಿಜೆಪಿ ಬಾಲಕಿಯ ಕುಟುಂಬದ ಬೆಂಬಲಕ್ಕೆ ನಿಂತಿದೆ. 'ಬಾಲಕಿಯ ವಿರುದ್ಧ ಯಾವುದೇ ರೀತಿಯ ಕಾನೂನು ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು,' ಎಂದು ಭರವಸೆ ನೀಡಿದೆ. 'ಬಾಲಕಿಗೆ ಅಗತ್ಯ ಇರುವ ಉಚಿತ ಕಾನೂನು ನೆರವು, ಕೌನ್ಸೆಲಿಂಗ್ ಹಾಗೂ ಬೆಂಬಲವನ್ನು ಒದಗಿಸಲಾಗುವುದು,' ರತ್ನಾ ಸಿಂಗ್ ತಿಳಿಸಿದ್ದಾರೆ. ಪ್ರಧಾನಿಯವರು ಹೇಳಿಕೆಗೆಷ್ಟೇ ಆಗದೆ, ಪೊಲೀಸರಿಗೆ ಸೂಚಿಸಿ ಪ್ರಕರಣವನ್ನು ಅಧಿಕೃತವಾಗಿ ಹಿಂಪಡೆಯಬೇಕು ಎಂದು ಸಿಜೆಪಿ ಆಗ್ರಹಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+