ಗುಜರಾತ್ ಸಿಬ್ಬಂದಿ ಮಕ್ಕಳ ಶಿಕ್ಷಣಕ್ಕೆ ಮೋದಿ ದೇಣಿಗೆ
ನವದೆಹಲಿ. ಮೇ.23: ಗುಜರಾತ್ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರು ಚಾಲಕರು ಮತ್ತು ಜವಾನರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು 21 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಟ್ವಿಟ್ಟರ್‌ನಲ್ಲಿ ಈ ಸುದ್ದಿಯನ್ನು ನರೇಂದ್ರ ಮೋದಿ ತಿಳಿಸಿದ್ದು ತಮ್ಮ ಈ ಚಿಕ್ಕ ಕೊಡುಗೆ ಹೆಣ್ಣುಮಕ್ಕಳ ಸಬಲೀಕರಣಕ್ಕೆ ನೆರವಾಗಲಿದೆ ಎನ್ನುವ ಆಶಾಭಾವ ಹೊಂದಿರುವುದಾಗಿ ಹೇಳಿದ್ದಾರೆ.
ತಮ್ಮ ಸಂಪಾದನೆಯಲ್ಲಿ ಉಳಿಸಿದ ಹಣವನ್ನು ಈ ಮೂಲಕ ನೀಡಿರುವುದಾಗಿ ಅವರು ಹೇಳಿದ್ದಾರೆ. ಗುಜರಾತ್‌ನ ನೂತನ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ನೂತನ ಶಾಶ್ವತ ನಿಧಿಯನ್ನು ಸ್ಥಾಪಿಸಲಿದ್ದು ಈ ನಿಧಿಯ ಮೂಲಕ ಈ ಹಣ ವಿನಿಯೋಗವಾಗಲಿದೆ.ನರೇಂದ್ರ ಮೋದಿ ಪಟ್ಟಾಭಿಷೇಕಕ್ಕೆ ಇವರೇ ವಿಶೇಷ ಅತಿಥಿ]

ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಕನ್ಯಾ ಕೆಲವಾನಿ (Kanya Kelavani) ನಿಧಿ ಯೋಜನೆಯನ್ನು ಆರಂಭಿಸಿದ್ದರು. ಮುಖ್ಯಮಂತ್ರಿ ಅವಧಿಯಲ್ಲಿ ತಮಗೆ ಸಿಕ್ಕಿದ ಉಡುಗೊರೆಯನ್ನು ಹರಾಜು ಹಾಕಿ 19 ಕೋಟಿ ರೂಪಾಯಿಯನ್ನು ಈ ಯೋಜನೆಗೆ ದೇಣಿಗೆ ನೀಡಿದ್ದರು.
I salute the Consulate staff for their indomitable spirit & high morale throughout the difficult circumstances http://t.co/ZY3y2ANqtR
— Narendra Modi (@narendramodi) May 23, 2014 Before leaving Gujarat, I gave Rs. 21 lakh from my personal savings to educate daughters of drivers & peons working with Guj Govt.
— Narendra Modi (@narendramodi) May 23, 2014 This small contribution will be a part of a corpus fund that will hopefully grow in future & empower our daughters http://t.co/mMu5H1syj0
— Narendra Modi (@narendramodi) May 23, 2014 











Click it and Unblock the Notifications