ನರೇಂದ್ರ ಮೋದಿ ಪಟ್ಟಾಭಿಷೇಕಕ್ಕೆ ಇವರೇ ವಿಶೇಷ ಅತಿಥಿ

ನವದೆಹಲಿ, ಮೇ 24: ನರೇಂದ್ರ ಮೋದಿ ಅವರ ಪಾಲಿಗೆ ಮೇ 26 ಸೋಮವಾರ ಅತ್ಯಂತ ವಿಶೇಷ ದಿನವಾಗಿ ಪರಿಣಮಿಸಲಿದೆ. ಅಂದು ಮೋದಿ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ಒಂದು ಸಾಲಿನ ಸುದ್ದಿಯಾದರೆ ಅದರಾಚೆಗೆ ಈ ಸಮಾರಂಭಕ್ಕೆ ನಾನಾ ಮುಖಗಳು/ ವೈಶಿಷ್ಯಗಳು ಗೋಚರವಾಗುತ್ತಿವೆ. ಅಂದು ಅನೇಕಾನೇಕ ಪ್ರಥಮಗಳು ಘಟಿಸುತ್ತಿವೆ. ಒಟ್ಟಿನಲ್ಲಿ ಮೋದಿಗೆ ಅಂದು ಚರಿತ್ರಾರ್ಹ ದಿನವಾಗಲಿದೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮೋದಿ ಪ್ರಮಾನ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ.

ಇನ್ನು, ತೀರಾ ಖಾಸಗಿಯಾಗಿ ಹೇಳಬೇಕೆಂದರೆ ಮೋದಿ ಅವರ ತಾಯಿ ಹೀರಾಬೆನ್‌ ಮತ್ತು ಇಬ್ಬರು ಸೋದರರು ಸೋಮವಾರ ನಡೆಯುವ ಪಟ್ಟಾಭಿಷೇಕಕ್ಕೆ ಸಾಕ್ಷಿಯಾಗಲಿದ್ದಾರೆ. ಇಬ್ಬರು ಸೋದರರು ಸೋಮಭಾಯಿ ದಾಮೋದರದಾಸ್ ಮೋದಿ, ಪಂಕಜ್ ದಾಮೋದರದಾಸ್ ಮೋದಿ ಮತ್ತು ತಂಗಿ ವಾಸಂತಿ ಅವರು ತಾಯಿಯ ಜತೆಗೂಡಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಮತ್ತೊಂದು ಸುದ್ದಿ ತೇಲಿಬಂದಿದೆ. ವಡೋದರಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವಾಗ ತಮ್ಮ ಪತ್ನಿಯ ಹೆಸರನ್ನು ಜಶೋದಾಬೆನ್ ಎಂದು ನಮೂದಿಸಿ, ತನಗೆ ಮದುವೆಯಾಗಿರುವುದಾಗಿ ಮೋದಿ ಘಂಟಾಘೋಷವಾಗಿ ಹೇಳಿಕೊಂಡಿದ್ದರು.

I Will attend Narendra Modi oath-taking ceremony if invited - his wife Jashodaben

ತಾಜಾ ಸುದ್ದಿಯೇನಪ್ಪಾ ಅಂದರೆ 'ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆ ಏರುತ್ತಿರುವುದು ಸಂತಸದ ಸಂಗತಿ. ಇಷ್ಟು ವರ್ಷಗಳ ನಂತರವೂ ಅವರಿಗೆ ನನ್ನ ನೆನಪು ಇದೆ. ಅವರು ನನ್ನನ್ನು ಪತ್ನಿಯನ್ನಾಗಿ ಒಪ್ಪಿಕೊಂಡಿರುವುದು ನನಗೆ ಅತೀವ ಸಂತೋಷ ತಂದಿದೆ. ಅದು ನನ್ನ ಸೌಭಾಗ್ಯವೂ ಹೌದು' ಎಂದು ಮೋದಿ ಪತ್ನಿ ಜಶೋದಾಬೆನ್ ಅವರು ಟಿವಿ9 ಗುಜರಾತಿ ಚಾನೆಲ್ ಜತೆ ಮಾತನಾಡುತ್ತಾ ಮುಗ್ಧರಾಗಿ ಹೇಳಿದ್ದಾರೆ.

ಅದೇ ರೀತಿ, ಮೇ 26ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದರೆ ಅಲ್ಲಿಗೆ ಹೋಗುತ್ತೇನೆ. ಪ್ರಧಾನಿಗಳ ಅಧಿಕೃತ ನಿವಾಸಕ್ಕೆ ಆಹ್ವಾನಿಸಿದರೆ ಅಲ್ಲಿಗೂ ಸಂತೋಷದಿಂದ ತೆರಳುತ್ತೇನೆ' ಎಂದು ಜಶೋದಾಬೆನ್ ಅವರು ಹೇಳಿದ್ದಾರೆ.

Will attend Modi oath-taking ceremony if invited - Jashodaben

'ಅವರು ಈ ಮಟ್ಟಕ್ಕೆ ತಲುಪಿರುವುದು ನನಗೆ ಸಂತೋಷ ತಂದಿದೆ. ಅವರ ಬುದ್ಧಿಮತ್ತೆಯೇ ಅವರ ಕೈಹಿಡಿದಿದೆ. ಜತೆಗೆ ಕಠಿಣ ಪರಿಶ್ರಮವೂ ಅವರಿಗೆ ಸಾಥ್ ನೀಡಿದೆ. ಅವರು ಇನ್ನಷ್ಟು ಮತ್ತಷ್ಟು ಏಳಿಗೆ ಸಾಧಿಸಲಿ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಇಬ್ಬರೂ ಬೇರೆ ಬೇರೆಯಾಗಿ ಜೀವಿಸುತ್ತಿರುವುದರ ಬಗ್ಗೆ ಕೇಳಲಾಗಿ 'ಅಯ್ಯೋ ನಾವೇನೂ ವಿಚ್ಛೇದನ ಪಡೆದಿಲ್ಲ. ನಾವಿಬ್ಬರೂ ಬೇರೆಯಾಗಿಲ್ಲ. ನಾವು ಒಟ್ಟಿಗೇ ಇದ್ದೇವೆ. ಅವರು ಕುಟುಂಬವನ್ನು ಬಿಟ್ಟು ದೇಶ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ. ಹಾಗಾಗಿ ನಾವು ಬೇರೆಯಾಗಬೇಕಾಯಿತು, ಅಷ್ಟೇ' ಎಂದು ನಿವೃತ್ತ ಶಾಲಾ ಶಿಕ್ಷಕಿ ಜಶೋದಾಬೆನ್ ಅವರು ಮಾರ್ಮಿಕವಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+