ವ್ಯಾಪಾರಿಗಳು ಹವಾಮಾನ ತಜ್ಞರಂತೆ : ನರೇಂದ್ರ ಮೋದಿ

ನವದೆಹಲಿ, ಏಪ್ರಿಲ್ 19 : 'ವ್ಯಾಪಾರಿಗಳು ಹವಾಮಾನ ತಜ್ಞರಂತೆ. ಎಲ್ಲವೂ ಅವರಿಗೆ ಮೊದಲೇ ತಿಳಿದಿರುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವ್ಯಾಪಾರಿಗಳ ಸಮಾವೇಶ ಉದ್ದೇಶಿಸಿ ಮಾತನಾಡಿದರು. 'ನಾವು ಚುನಾವಣೆ ವೇಳೆ ಕೊಟ್ಟ ಭರವಸೆಗಳನ್ನು ಮರೆಯುತ್ತೇವೆ ಎಂದು ಜನರು ಹೇಳುತ್ತಾರೆ. ಆದರೆ, ನೋಡಿ ನಾವು ಹೇಳಿದ ಮಾತಿನಂತೆ 1500 ನಿಯಮಗಳನ್ನು ರದ್ದುಗೊಳಿಸಿದ್ದೇವೆ' ಎಂದರು.

'ಮೊದಲ ಬಾರಿ ನಿಮ್ಮನ್ನು ಭೇಟಿಯಾದಾಗ ನಾನು ಹೇಳಿದ್ದೆ. ಹೊಸ ಕಾನೂನುಗಳನ್ನು ತರುವುದೇ ಸರ್ಕಾರವಲ್ಲ. ನಾವು ಪ್ರತಿದಿನ ಒಂದು ಕಾನೂನನ್ನು ರದ್ದು ಮಾಡುತ್ತೇವೆ ಎಂದು' ಅದನ್ನು ಈಗ ಮಾಡಿದ್ದೇವೆ ಎಂದು ತಿಳಿಸಿದರು.

Narendra Modi addresses a convention of traders highlights

'ಭಾರತವನ್ನು ಒಂದು ಕಾಲದಲ್ಲಿ ಚಿನ್ನದ ಗಣಿ ಎಂದು ಕರೆಯಲಾಗುತ್ತಿತ್ತು. ಇದೇ ವ್ಯಾಪಾರಿಗಳ ಶಕ್ತಿ. ಅವರು ಯಾವಾಗಲೂ ದೇಶದ ಬಗ್ಗೆ ಮಾತನಾಡುತ್ತಾರೆ. ಹವಾಮಾನ ತಜ್ಞರಂತೆ ಅವರಿಗೆ ಮುಂದೇನಾಗುತ್ತದೆ ಎಂಬುದು ತಿಳಿದಿರುತ್ತದೆ' ಎಂದು ಮೋದಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+