ಅಯ್ಯಯ್ಯೋ! ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿದ ಚಿಕನ್‌ನಲ್ಲಿ ಮಾತ್ರೆಗಳು ಪತ್ತೆ..!

ಈ ಆಧುನಿಕ ಜಗದಲ್ಲಿ ಜನರಿಗೆ ಎಲ್ಲವೂ ಬಹಳ ಸುಲಭ ಹಾಗೂ ವೇಗವಾಗಿ ಸಿಗಬೇಕು. ಊಟ, ತಿಂಡಿ ಕೂಡ ಕ್ಷಣ ಮಾತ್ರದಲ್ಲಿ ಯಾವುದೇ ಶ್ರಮವಿಲ್ಲದೇ ಸಿಗಬೇಕು. ಈ ಒಂದು ಯೋಚನೆಯಲ್ಲೇ ಹುಟ್ಟಿಕೊಂಡ ಪರಿಕಲ್ಪನೆ ಆನ್‌ಲೈನ್‌ ಫುಡ್‌ ಆರ್ಡರ್‌. ದುಡ್ಡೊಂದಿದ್ದರೆ ನಿಮಗೆ ಬೇಕಾದ, ನಿಮಗೆ ಇಷ್ಟವಾದ ಆಹಾರವನ್ನು ಜಸ್ಟ್‌ ಒಂದು ಕ್ಲಿಕ್‌ನಲ್ಲಿ ನೀವು ಪಡೆಯಬಹುದು.

ಆನ್‌ಲೈನ್‌ನಲ್ಲಿ ಆಹಾರ ತರಿಸಿಕೊಂಡು ತಿನ್ನುವುದು ಸುಲಭವಾದ ಮಾರ್ಗವಾದರೂ ಸಹ, ಈ ಬಗ್ಗೆ ಪ್ರತಿನಿತ್ಯ ಒಂದಲ್ಲ ಒಂದು ಆರೋಪಗಳು ಕೇಳಿ ಬರುತ್ತಲೇ ಇರುತ್ತದೆ. ಯಾರು..? ಎಲ್ಲಿ..? ಹೇಗೆ ತಯಾರಿಸುತ್ತಾರೆ ಎಂದು ಗೊತ್ತಿಲ್ಲದೇ ಆನ್‌ಲೈನ್‌ನಲ್ಲಿ ಫುಡ್‌ ಆರ್ಡರ್‌ ಮಾಡಿ ತರಿಸಿ ತಿನ್ನುತ್ತಾರೆ. ಆನ್‌ಲೈನ್‌ನಲ್ಲಿ ತರಿಸಿಕೊಂಡ ಫುಡ್‌ನಲ್ಲಿ ಹುಳಗಳು, ಜಿರಳೆಗಳು ಅಥವಾ ಬೇರೆ ಕ್ರಿಮಿ ಕೀಟಗಳು ಪತ್ತೆಯಾಗುವುದು ಈಗೀಗ ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಘಟನೆ ಆಶ್ಚರ್ಯದ ಜೊತೆಗೆ ಆತಂಕವನ್ನು ಹೆಚ್ಚಿಸಿದೆ.

Mumbai Man Found Tablets In Food At Swiggy Order

ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದ ಊಟದಲ್ಲಿ ಒಂದಲ್ಲಾ ಎರಡು ಮಾತ್ರೆಗಳು ಪತ್ತೆಯಾಗಿದ್ದು, ವ್ಯಕ್ತಿ ಆತಂಕಕ್ಕೊಳಗಾಗಿದ್ದಾರೆ. ಭಾರೀ ಹಸಿವಿನಿಂದ ಚಿಕನ್‌ ಆರ್ಡರ್‌ ಕಾದು ಇನ್ನೇನು ತಿನ್ನಬೇಕು ಎಂದುಕೊಂಡ ವ್ಯಕ್ತಿ ಆಹಾರದ ಪೊಟ್ಟಣ ತೆಗೆದು ನೋಡಿ ಆತಂಕಗೊಂಡಿದ್ದಾರೆ. ಮುಂಬೈಮಲ್ಲಿ ಈ ಘಟನೆ ನಡೆದಿದ್ದು, ಚಿಕನ್‌ನಲ್ಲಿ ಮಾತ್ರೆಗಳು ಪತ್ತೆಯಾಗಿರುವ ಫೋಟೋ ವೈರಲ್‌ ಆಗಿದೆ.

ಮುಂಬೈನ ವ್ಯಕ್ತಿಯಾದ ಉಜ್ವಲ್‌ ಪುರಿ ಎನ್ನುವವರು ಆನ್‌ಲೈನ್‌ ಫುಡ್‌ ಆರ್ಡರ್ ಆ್ಯಪ್‌ ಸ್ವಿಗ್ಗಿ ಮೂಲಕ ನಗರದಲ್ಲಿ ಫೇಮಸ್​ ಕೆಫೆ ಆಗಿರುವ ಲಿಯೋಪೋಲ್ಡ್ ಕೆಫೆಯಿಂದ ಚಿಕನ್ ಆರ್ಡರ್​ ಮಾಡಿದ್ದರು. ಅವರು ನೀಡಿದ್ದ ಸಮಯ ಕಾದ ನಂತರ ಸ್ವಿಗ್ಗಿ ಬಾಯ್ ಕೆಫೆಯಿಂದ ಚಿಕನ್‌ ತಂದುಕೊಟ್ಟಿದ್ದಾನೆ. ಚಿಕನ್‌ ಪ್ಯಾಕ್ ನೋಡಿ ಖುಷಿಯಾದ ಉಜ್ವಲ್‌ ಪುರಿ ಖುಷಿಯಿಂದಲೇ ಓಪನ್ ಮಾಡಿದ್ದಾರೆ. ಆದರೆ ಚಿಕನ್‌ನೊಂದಿಗೆ ಬಂದ ಮಾತ್ರೆಗಳನ್ನು ಕಂಡು ಉಜ್ವಲ್‌ ಪುರಿ ಗಾಬರಿಗೊಂಡಿದ್ದಾರೆ.

Mumbai Man Found Tablets In Food At Swiggy Order

ಈ ವಿಚಾರವನ್ನು ಎಲ್ಲರಿಗೂ ತಿಳಿಸುವ ಸಲುವಾಗಿ ಉಜ್ವಲ್‌ ಪುರಿ ಎನ್ನುವವರು ಚಿಕನ್ ಜೊತೆ ಮಾತ್ರೆ ಇರುವ ಫೋಟೋವನ್ನು ಕ್ಲಿಕ್ ಮಾಡಿ ತಮ್ಮ ಎಕ್ಸ್‌ ಅಕೌಂಟ್​​ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಇದು ಕ್ರಿಸ್​ಮಸ್​ಗೆ ಸಿಕ್ಕ ವಿಶೇಷ ಕೊಡುಗೆ ಎಂದು ಬರೆದುಕೊಂಡು ಸ್ವಿಗ್ಗಿ ಕಂಪನಿಗೆ ಟ್ಯಾಗ್‌ ಮಾಡಿದ್ದಾರೆ.

ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದ್ದು, ನೆಟ್ಟಿಗರು ಸ್ವಿಗ್ಗಿ ಹಾಗೂ ಲಿಯೋಪೋಲ್ಡ್ ಕೆಫೆ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಉಜ್ವಲ್‌ ಪುರಿ ನೀಡಿರುವ ದೂರಿಗೆ ಸ್ವಿಗ್ಗಿ ಕಂಪನಿ ಪ್ರತಿಕ್ರಿಯಿಸಿದ್ದು, ಈ ಆರ್ಡರ್‌ ಬಗ್ಗೆ ಎಲ್ಲ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+