Express train: ಹಳಿತಪ್ಪಿದ ಅಗರ್ತಲಾ-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ರೈಲಿನ 8 ಬೋಗಿಗಳು
ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ದಿಬಾಲಾಂಗ್ ನಿಲ್ದಾಣದಲ್ಲಿ ಅಗರ್ತಲಾ-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ರೈಲಿನ 8 ಬೋಗಿಗಳು ಇಂದು (ಅಕ್ಟೋಬರ್ 17) ಹಳಿತಪ್ಪಿವೆ. ಈ ಬಗ್ಗೆ ಈಶಾನ್ಯ ಫ್ರಾಂಟಿಯರ್ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಹಾಗೂ ಗಂಭೀರ ಗಾಯಗಳಾದ ಬಗ್ಗೆ ವರದಿ ಆಗಿಲ್ಲ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ಇಂದು (ಅಕ್ಟೋಬರ್ 17) ಮಧ್ಯಾಹ್ನ ಅಗರ್ತಲಾ-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ರೈಲಿನ ಎಂಟು ಬೋಗಿಗಳು ಹಳಿ ತಪ್ಪಿದೆ. ಇದಕ್ಕೆ ನಿಖರ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಹಳಿತಪ್ಪಿದ ಬೋಗಿಗಳಲ್ಲಿ ಪವರ್ ಕಾರ್ ಮತ್ತು ರೈಲಿನ ಎಂಜಿನ್ ಕೂಡ ಸೇರಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಕ್ಷಣಾ ಕಾರ್ಯಾಚರಣೆ ಮತ್ತು ರೈಲು ಸೇವೆ ಮರುಸ್ಥಾಪನೆ ಕಾರ್ಯದ ಮೇಲ್ವಿಚಾರಣೆ ಮಾಡಲು ಹಿರಿಯ ಅಧಿಕಾರಿಗಳೊಂದಿಗೆ ಅಪಘಾತ ಪರಿಹಾರ ವೈದ್ಯಕೀಯ ರೈಲು ಈಗಾಗಲೇ ಲುಮ್ಡಿಂಗ್‌ನಿಂದ ಸ್ಥಳಕ್ಕೆ ತೆರಳಿದೆ. ಲುಮ್ಡಿಂಗ್-ಬದರ್‌ಪುರ್ ಸಿಂಗಲ್ ಲೈನ್ ಬೆಟ್ಟದ ವಿಭಾಗದಲ್ಲಿ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗರ್ತಲಾ-ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲು (ಗಾಡಿ ಸಂಖ್ಯೆ12520) ಎಂದಿನಂತೆ ಗುರುವಾರವು ಮುಂಬೈ ಕಡೆಗೆ ಪ್ರಯಾಣ ಬೆಳೆಸಿತ್ತು. ಈ ವೇಳೆ ಲಿಮ್ಡಿಂಗ್ ಮತ್ತು ಬದರ್‌ಪುರ್ ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.
ರೈಲಿನ ಇಂಜಿನ್ ಸೇರಿ ಒಟ್ಟು ಎಂಟು ಬೋಗಿಗಳು ಇಂದು ಮಧ್ಯಾಹ್ನ 03:55ಕ್ಕೆ ಹಳಿ ತಪ್ಪಿ ಚೆಲ್ಲಾಪಿಲ್ಲಿಯಾಗಿ ಉರುಳಿ ಬಿದ್ದಿವೆ. ಅದೃಷ್ಟವಶಾತ್ ಈವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿ ಆಗಿದೆ. ಇನ್ನು ರೈಲ್ವೆ ಪೊಲೀಸರು, ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಹೀಗೆ ಮೇಲಿಂದ ಮೇಲೆ ರೈಲು ಅಪಘಾತಗಳು ಸಂಭವಿಸುತ್ತಿರುವುದ ರೈಲ್ವೆ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.












Click it and Unblock the Notifications