ಶಾಕಿಂಗ್: ಮೋದಿ ಟ್ವಿಟ್ಟರ್ ಫಾಲೋವರ್ಸ್ ಗಳಲ್ಲಿ ಫೇಕುಗಳದ್ದೇ ಕಾರುಬಾರು ಜಾಸ್ತಿ

ನವದೆಹಲಿ, ಜ 20: ಪ್ರಧಾನಿ ನರೇಂದ್ರ ಮೋದಿ ಹೊಂದಿರುವ ಕೋಟಿ ಕೋಟಿ ಫಾಲೋವರ್ಸ್ ಟ್ವಿಟ್ಟರ್ ಅಕೌಂಟ್ ನಲ್ಲಿ ಅಸಲಿಗಿಂತ ನಕಲಿಗಳ ಕಾರುಬಾರೇ ಜಾಸ್ತಿ ಎನ್ನುವ ವರದಿಯೊಂದು ಹೊರಬಿದ್ದಿದೆ.

ಟ್ವಿಪ್ಲೊಮಸಿ ಎನ್ನುವ ಸಂಸ್ಥೆಯೊಂದು ಅಧ್ಯಯನ ನಡೆಸಿ, ವಿಶ್ವದ ಪ್ರಮುಖ ವ್ಯಕ್ತಿಗಳು ಹೊಂದಿರುವ ಟ್ವಿಟ್ಟರ್ ಖಾತೆಯಲ್ಲಿ ನಕಲಿ ಫಾಲೋವರ್ಸ್ ಗಳ ಸಂಖ್ಯೆ ಎಷ್ಟು ಎನ್ನುವ ಮಾಹಿತಿಯನ್ನು ಬಹಿರಂಗ ಪಡಿಸಿದೆ.

ಈ ವರದಿಯ ಪ್ರಕಾರ, ಮೋದಿಯವರ ಟ್ವಿಟ್ಟರ್ ಖಾತೆಯನ್ನು ಹಿಂಬಾಲಿಸುವ ಖಾತೆಗಳಲ್ಲಿ ಶೇ. 60ರಷ್ಟು ನಕಲಿ. ಅಂದರೆ, ಮೋದಿ ಹೊಂದಿರುವ ಒಟ್ಟು 40.3 ಮಿಲಿಯನ್ ಫಾಲೋವರ್ಸ್ ಗಳ ಪೈಕಿ, ಶೇ. 24.18 ಮಿಲಿಯನ್ ಖಾತೆಗಳು ನಕಲಿ ಎಂದು ವರದಿಯಲ್ಲಿ ಹೇಳಲಾಗಿದೆ.

More Than 60 Percent Of Twitter Followers Of PM Modi Account Is Fake

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ. 37, ಪೋಪ್ ಫ್ರಾನ್ಸಿಸ್ ಶೇ. 59, ಕಿಮ್ ಕರ್ದೇಶನ್ ಶೇ. 44, ಕಿಂಗ್ ಸಲ್ಮಾನ್ ಶೇ.8ರಷ್ಟು ನಕಲಿ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

"ಪ್ರಮುಖ ನಾಯಕರನ್ನು ಹಿಂಬಾಲಿಸುತ್ತಿರುವ ಟ್ವಿಟ್ಟರ್ ಅಕೌಂಟ್ ಗಳೆಲ್ಲಾ ಅಸಲಿಯಲ್ಲ" ಎನ್ನುವ ಒಕ್ಕಣೆಯೊಂದಿಗೆ ಟ್ವಿಪ್ಲೊಮಸಿ ಸಂಸ್ಥೆ, ಮೇಲಿನ ಅಂಕಿಅಂಶದ ಸಮೇತ ಟ್ವೀಟ್ ಮಾಡಿದೆ.

ಟ್ವಿಪ್ಲೊಮಸಿ ಸಂಸ್ಥೆಯು ಸರಕಾರ, ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ಮುಖಂಡರುಗಳಿಗೆ ಡಿಜಿಟಲ್ ತಂತ್ರಜ್ಞಾನ, ಅವುಗಳ ನಿರ್ವಹಣೆ ಮತ್ತು ಅಭಿವೃದ್ದಿಯ ಬಗ್ಗೆ ಸಲಹೆ ನೀಡುವ ಸಂಸ್ಥೆಯಾಗಿದ್ದು, ಅಮೆರಿಕಾ ಮತ್ತು ಸ್ವಿಜರ್ಲ್ಯಾಂಡ್ ನಲ್ಲಿ ಕಚೇರಿಯನ್ನು ಹೊಂದಿದೆ. ಸಂಸ್ಥೆಯ ಅಧಿಕೃತ ಟ್ವಿಟ್ಟರ್ ಖಾತೆಗೆ 62ಸಾವಿರ ಹಿಂಬಾಲಕರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+