ಮೂಡ್ ಆಫ್ ದಿ ನೇಶನ್ ಸಮೀಕ್ಷೆ: ಮೋದಿ ಕ್ಯಾಬಿನೆಟಿನ ಜನಪ್ರಿಯ ಸಚಿವರು ಇವರೇ

ಇಂಡಿಯಾ ಟುಡೇ- ಖಾರ್ವಿ ಇನ್ಸೈಟ್ಸ್ ಜಂಟಿಯಾಗಿ ಸಮೀಕ್ಷೆಯೊಂದನ್ನು ನಡೆಸಿದೆ. ಅದರಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದಲ್ಲಿನ ಸಚಿವರಲ್ಲಿ ಯಾರು ಪವರ್ ಫುಲ್/ಜನಪ್ರಿಯ ಎನ್ನುವ ಪ್ರಶ್ನೆಯೂ ಒಂದಾಗಿತ್ತು.

ಜನವರಿ'2020ರಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಮತ್ತು ಪಿಯೂಶ್ ಗೋಯಲ್, ಮೊದಲ ಐದನೇ ಸ್ಥಾನದಲ್ಲಿದ್ದರು.

ಈಗ ನಡೆಸಿದ ಸಮೀಕ್ಷೆಯಲ್ಲೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೊದಲ ಸ್ಥಾನದಲ್ಲಿದ್ದರೂ, ಕಳೆದ ಮೂಡ್ ಆಫ್ ದಿ ನೇಶನ್ ಗೆ ಹೋಲಿಸಿದರೆ, ಅವರ ಜನಪ್ರಿಯತೆ ಕಮ್ಮಿಯಾಗಿದೆ.

ಪ್ರಧಾನಿ ಮೋದಿಯವರ ಕಾರ್ಯವೈಖರಿ, ಈಗಲೇ ಲೋಕಸಭಾ ಚುನಾವಣೆ ನಡೆದರೆ, ನಿಮ್ಮ ಬೆಂಬಲ ಯಾರಿಗೆ ಮುಂತಾದ ಪ್ರಶ್ನೆಗಳನ್ನೂ ಈ ಸಮೀಕ್ಷೆಯಲ್ಲಿ ಕೇಳಲಾಗಿದೆ. ಶಾ, ಜನಪ್ರಿಯತೆ ಕುಸಿತ.

ಗೃಹಸಚಿವ ಅಮಿತ್ ಶಾ, ಮೋದಿ ಕ್ಯಾಬಿನೆಟಿನ ಜನಪ್ರಿಯ ಸಚಿವ

ಗೃಹಸಚಿವ ಅಮಿತ್ ಶಾ, ಮೋದಿ ಕ್ಯಾಬಿನೆಟಿನ ಜನಪ್ರಿಯ ಸಚಿವ

ಇಂಡಿಯಾ ಟುಡೇ, ಸಮೀಕ್ಷೆ ಪ್ರಕಾರ, ಗೃಹಸಚಿವ ಅಮಿತ್ ಶಾ, ಮೋದಿ ಕ್ಯಾಬಿನೆಟಿನ ಜನಪ್ರಿಯ ಮತ್ತು ಕಾರ್ಯಶೀಲ ಸಚಿವರಾಗಿದ್ದಾರೆ. ಮೋದಿ-2 ಸರಕಾರದಲ್ಲಿ ಹಲವು ಮಹತ್ವದ ಹೆಜ್ಜೆಗಳನ್ನು ಕೇಂದ್ರ ಸರಕಾರ ಇಟ್ಟಿತ್ತು. ಆದರೆ, ಆರ್ಟಿಕಲ್ 370, ಸಿಎಎ, ಜಮ್ಮು ಕಾಶ್ಮೀರ ಮುಂತಾದವೂ ಸೇರಿತ್ತು.

ಮೋದಿ ಕ್ಯಾಬಿನೆಟ್

ಮೋದಿ ಕ್ಯಾಬಿನೆಟ್

ಆಗಸ್ಟ್ ತಿಂಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಯಾವ ಸಚಿವರು ಮೊದಲ ಐದು ಸ್ಥಾನದಲ್ಲಿದ್ದಾರೆ?
ಅಮಿತ್ ಶಾ - ಶೇ. 39
ರಾಜನಾಥ್ ಸಿಂಗ್ - ಶೇ. 17
ಇತರರು - ಶೇ. 14
ನಿತಿನ್ ಗಡ್ಕರಿ - ಶೇ. 10
ನಿರ್ಮಲಾ ಸೀತಾರಾಮನ್ - ಶೇ. 9

6ನೇ ಸ್ಥಾನದಲ್ಲಿ ರವಿಶಂಕರ್ ಪ್ರಸಾದ್

6ನೇ ಸ್ಥಾನದಲ್ಲಿ ರವಿಶಂಕರ್ ಪ್ರಸಾದ್

ನಂತರದ ಸ್ಥಾನಗಳಲ್ಲಿರುವ ಸಚಿವರು ಇವರು.
ರವಿಶಂಕರ್ ಪ್ರಸಾದ್ - ಶೇ. 3
ಧರ್ಮೇಂದ್ರ ಪ್ರಧಾನ್ - ಶೇ.2
ಸ್ಮೃತಿ ಇರಾನಿ - ಶೇ.2
ರಾಂ ವಿಲಾಸ್ ಪಾಸ್ವಾನ್ - ಶೇ. 1
ಎಸ್.ಜೈಶಂಕರ್ - ಶೇ. 1

3ನೇ ಸ್ಥಾನದಲ್ಲಿದ್ದ ನಿತಿನ್ ಗಡ್ಕರಿ

3ನೇ ಸ್ಥಾನದಲ್ಲಿದ್ದ ನಿತಿನ್ ಗಡ್ಕರಿ

ಜನವರಿ ತಿಂಗಳಲ್ಲಿ ನಡೆಸಿದ್ದ ಮೂಡ್ ಆಫ್ ದಿ ನೇಶನ್ ಸಮೀಕ್ಷೆಯ ಫಲಿತಾಂಶ ಹೀಗಿದೆ:
ಅಮಿತ್ ಶಾ - ಶೇ. 43
ರಾಜನಾಥ್ ಸಿಂಗ್ - ಶೇ. 39
ನಿತಿನ್ ಗಡ್ಕರಿ - ಶೇ. 34
ನಿರ್ಮಲಾ ಸೀತಾರಾಮನ್ - ಶೇ. 26
ಪಿಯೂಶ್ ಗೋಯಲ್ - ಶೇ. 24

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+