ಭಾರತ ಒಡೆಯಲು ಗಲಭೆ, ಆಡಳಿತ ಬದಲಾವಣೆ ತಂತ್ರ: ಯುವಜನತೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಿವಿಮಾತು

ನಾಗ್‌ಪುರ, ಅಕ್ಟೋಬರ್ 20: ದಸರಾ ಹಬ್ಬದ ಶುಭ ಸಂದರ್ಭದಲ್ಲೇ ಆರ್‌ಎಸ್‌ಎಸ್ ಸಂಸ್ಥೆಯು ತನ್ನ 101ನೇ ಸ್ಥಾಪನಾ ದಿನವನ್ನು ಆಚರಿಸಿಕೊಂಡಿದೆ. ನಾಗ್‌ಪುರದಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ವಾರ್ಷಿಕ ವಿಜಯದಶಮಿ ಕಾರ್ಯಕ್ರಮದಲ್ಲಿ ಭಾರತದ ಆಡಳಿತ ಬದಲಾವಣೆ ಕುರಿತು ಮೋಹನ್ ಭಾಗವತ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮೋಹನ್ ಭಾಗವತ್ ಅವರು ಸಾಂಪ್ರದಾಯಿಕ 'ಶಾಸ್ತ್ರ ಪೂಜೆ' ನೆರವೇರಿಸಿದರು.

Mohan Bhagwat Warns of Conspiracies to Change India s Government at RSS Vijayadashami Event Viral

ಬಳಿಕ ಮಾತನಾಡಿದ ಅವರು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹಬ್ ಭಾಗವತ್ ಅವರು, 'ಬಾಂಗ್ಲಾದೇಶ ಮತ್ತು ಫ್ರಾನ್ಸ್‌ನಲ್ಲಿ ನಡೆದ ಮಾದರಿಯಲ್ಲೇ ಭಾರತದಲ್ಲೂ ಆಡಳಿತ ಬದಲಾವಣೆ ಮಾಡಲು ಹಾಗೂ ದೇಶವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಅಂತಾರಾಷ್ಟ್ರೀಯ ಷಡ್ಯಂತ್ರಗಳ ಕುರಿತು ಜಾಗರೂಕರಾಗಿರಬೇಕು,' ಎಂದು ಯುವಜನತೆಗೆ ಕರೆ ನೀಡಿದರು.

ಜಾಗತಿಕ ಗಲಭೆಗಳ ಹಿಂದಿದೆ ಆ ಶಕ್ತಿ

ಇತ್ತೀಚೆಗೆ ಫ್ರಾನ್ಸ್ ಮತ್ತು ಅಲ್ಬೇನಿಯಾಗಳಲ್ಲಿ ನಡೆದ ಅಶಾಂತಿ ಹಾಗೂ ಈ ಹಿಂದೆ ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಉಂಟಾದ ರಾಜಕೀಯ ದಂಗೆಗಳನ್ನು ಉಲ್ಲೇಖಿಸಿದ ಅವರು, 'ಪ್ರಪಂಚದಾದ್ಯಂತ ಒಂದೇ ರೀತಿಯ ಪ್ರತಿಭಟನೆ ಮತ್ತು ಹಿಂಸಾಚಾರಗಳು ನಡೆಯುತ್ತಿವೆ. ಸರ್ಕಾರದ ಬದಲಾವಣೆಯಿಂದ ದೇಶದ ಪರಿಸ್ಥಿತಿ ಹಾಗೂ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಇದರಿಂದ ದೇಶಕ್ಕೆ ಎಂದಿಗೂ ಪ್ರಯೋಜನವಾಗಿಲ್ಲ. ಸ್ವಹಿತಾಸಕ್ತಿ ಹೊಂದಿರುವ ವಿದೇಶಿ ಶಕ್ತಿಗಳ ಏಜೆಂಟರು ಪ್ರಭಾವಶಾಲಿಯಾಗಿದ್ದು, ದೇಶಗಳನ್ನು ಅಸಾಂಶಗೊಳಿಸುತ್ತಿದ್ದಾರೆ,' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯುವಜನತೆಗೆ ಮೋಹನ್ ಭಾಗವತ್ ಕಿವಿಮಾತು

ದೇಶದಲ್ಲಿ ಇತ್ತೀಚೆಗೆ Gen-Z ಮತ್ತು ಇತರ ನೆಪಗಳಲ್ಲಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಮಾತನಾಡಿ, 'ಆ ಶಕ್ತಿಗಳ ಅಂತಿಮ ಗುರಿ ಈಗ ಭಾರತವಾಗಿದೆ. ನಮ್ಮ ದೇಶದ ಯುವಶಕ್ತಿ ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳು ಅಥವಾ ಇತರ ಮೂಲಗಳಿಂದ ಸಿಗುವ ಯಾವುದೇ ವಿಷಯವನ್ನು ಕುರುಡಾಗಿ ನಂಬಬಾರದು. ಪ್ರತಿಯೊಂದು ಮಾಹಿತಿಯೂ ಸತ್ಯವೋ, ಸುಳ್ಳೋ ಮತ್ತು ಅದು ದೇಶದ ಹಿತದೃಷ್ಟಿಗೆ ಸೂಕ್ತವೇ ಎಂಬುದನ್ನು ಪರಿಶೀಲಿಸಿದ ನಂತರವಷ್ಟೇ ಒಪ್ಪಿಕೊಳ್ಳಬೇಕು,' ಎಂದು ಕವಿಮಾತು ಹೇಳಿದರು.

ದೃಢ ನಾಯಕತ್ವದಿಂದ ವಿಫಲವಾದ ತಂತ್ರ

'ಭಾರತವನ್ನು, ಹಿಂದೂ ಸಮಾಜವನ್ನು ಮತ್ತು ಸಂಘಟನೆಯನ್ನು ವಿಭಜಿಸುವ ಕುತಂತ್ರಗಳು ನಿರಂತರವಾಗಿ ನಡೆಯುತ್ತಿವೆ. ಆದರೆ, ಕಳೆದ ದಶಕದಿಂದ ಭಾರತ ಅನುಸರಿಸಿಕೊಂಡು ಬರುತ್ತಿರುವ ದೃಢ ಸಂಕಲ್ಪಗಳು ಹಾಗೂ ಅದನ್ನು ಕಾರ್ಯರೂಪಕ್ಕೆ ತಂದಿರುವ ಗಟ್ಟಿ ನಾಯಕತ್ವವು ಶತ್ರುಗಳ ಯೋಜನೆಯನ್ನು ತಡೆದುಹಾಕಿದೆ. ನಮ್ಮ ದೇಶವು ಇನ್ನು ಸಂಪೂರ್ಣ ಅಭಿವೃದ್ಧಿ ಹೊಂದಿಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ,' ಎಂದು ಅವರು ಹೇಳಿದರು.

ಹಿಮಾಲಯ ಪ್ರದೇಶದ ಪರಿಸರ ನಾಶದ ದುರಂತ

ಇದೇ ವೇಳೆ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಸಾವಿನ ದುರಂತವನ್ನು ನೆನಪಿಸಿದ ಅವರು, 'ಭಾರತ, ಟಿಬೆಟ್, ಭೂತಾನ್ ಮತ್ತು ಚೀನಾವನ್ನು ಒಳಗೊಂಡಿರುವ ಇಡೀ ಹಿಮಾಲಯ ಪ್ರದೇಶದಲ್ಲಿ ನಡೆಯುತ್ತಿರುವ ಏಕಪಕ್ಷೀಯ ಮತ್ತು ವೈಜ್ಞಾನಿಕವಲ್ಲದ ಅಭಿವೃದ್ಧಿ ಕಾಮಗಾರಿಗಳೇ ಈ ಭೀಕರ ದುರಂತಕ್ಕೆ ಮೂಲ ಕಾರಣ. ಪರಿಸರವನ್ನು ಸಂಪೂರ್ಣವಾಗಿ ನಾಶಪಡಿಸುವ ಅಭಿವೃದ್ಧಿ ಅಪಾಯಕಾರಿ. ಆದ್ದರಿಂದ ನಮಗೆ ಸಮಗ್ರ ಹಾಗೂ ಸಮತೋಲಿತ ಅಭಿವೃದ್ಧಿ ಮಾದರಿಯ ಅಗತ್ಯವಿದೆ,' ಎಂದು ಹೇಳಿದರು.

ದೇಶದ ಭವಿಷ್ಯವಾಗಿರುವ ಯುವಜನತೆ ವಿದೇಶಿ ಪ್ರಚೋದನೆಗಳು ಮತ್ತು ಸುಳ್ಳು ಹರಡುವ ಶಕ್ತಿಗಳಿಗೆ ಮರುಳಾಗಬಾರದು. ಸಂವಿಧಾನ, ರಾಷ್ಟ್ರೀಯತೆ ಮತ್ತು ಸತ್ಯದ ಹಾದಿಯಲ್ಲಿ ಮುನ್ನಡೆಯುವುದು ಅಗತ್ಯವಾಗಿದೆ ಎಂದು ಮೋಹನ್ ಭಾಗವತ್ ಅವರ ಹೇಳಿಕೆಯ ಹಿಂದಿನ ಅರ್ಥವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+