ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಜ್ರಿವಾಲ್ ಟ್ವಿಟ್ಟರ್ ಅಕೌಂಟ್ ಗೆ ಮೊಟ್ಟೆ, ಟೊಮೆಟೊ

|
Google Oneindia Kannada News

ನವದೆಹಲಿ, ನವೆಂಬರ್ 19: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನವೆಂಬರ್ 18ರಂದು ಬೆಳಗ್ಗೆ 9.23ಕ್ಕೆ ಟ್ವೀಟ್ ವೊಂದನ್ನು ಮಾಡಿದ್ದು, ಭಾರೀ ಪ್ರತಿಕ್ರಿಯೆಗಳು ಬಂದಿವೆ. ಮೋದಿ ಜೀ ಭಾರತದ ಜನರ ಮೇಲೆ ಯುದ್ಧ ಘೋಷಿಸಿದ್ದಾರೆ. ಇದು ಮೋದಿ ವರ್ಸಸ್ ಜನ ಸಾಮಾನ್ಯರು ಎಂಬುದು ಟ್ವಿಟ್ಟರ್ ಒಕ್ಕಣೆ.

ಇದಕ್ಕೆ ಬಂದಿರುವ ಆಯ್ದ ಪ್ರತಿಕ್ರಿಯೆಗಳನ್ನು ಇಲ್ಲಿ ಕೊಡಲಾಗಿದೆ. ಉಮೇಶ್ ದುಬೆ ಎಂಬುವರು, ಸರ್ ಶುಕ್ರವಾರ ರಾತ್ರಿ ನಿಮ್ಮ ಸಿನಿಮಾ ರಿವ್ಯೂ ಏನು ಅಂತ ಇವತ್ತು ಆಶ್ಚರ್ಯದಿಂದ ಕಾಯ್ತಾ ಇದ್ದೆ ಎಂದಿದ್ದಾರೆ. ಸುಮಿತ್, ನನ್ನನ್ನು ನಂಬಿ, ನಿಮಗೆ ಆರೋಗ್ಯ ಸರಿಯಿಲ್ಲ. ವೈದ್ಯರನ್ನು ಭೇಟಿಯಾಗಿ ಎಂದು ಪ್ರತಿಕ್ರಿಯಿಸಿದ್ದಾರೆ.['3 ದಿನದಲ್ಲಿ ಸಮಸ್ಯೆ ಸರಿಪಡಿಸಿ, ಇಲ್ಲದಿದ್ದರೆ ಸುಮ್ನೆ ಬಿಡಲ್ಲ']

Arvind Kejriwal

ಇನ್ನು ಆಶಿಷ್ ವೀರ್, ಕೇಜ್ರಿವಾಲ್ ಆರೋಗ್ಯ ಸಹಾಯ ನೀಡಿದರೂ ಸರಿಹೋಗದಷ್ಟು ಕೈ ಮೀರಿ ಹೋಗಿದ್ದಾರೆ ಎಂದು ಕಾಲೆಳೆದಿದ್ದಾರೆ. ಸಮೀರ್ ಅನಂದ್, ಮೋದಿ ನಮ್ಮನ್ನು ಸರ್ವನಾಶ ಮಾಡಿಬಿಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರುತಿ ಜೈನ್ ಎಂಬಾಕೆ, ಹೆಣ್ಣುಮಕ್ಕಳ ಶಿಕ್ಷಣದಲ್ಲಿ 21 ರಾಜ್ಯಗಳ ಪೈಕಿ ಗುಜರಾತ್ ಇಪ್ಪತ್ತನೇ ಸ್ಥಾನದಲ್ಲಿದೆ. ಇದು ಗುಜರಾತ್ ಮಾದರಿ ಎಂದಿದ್ದಾರೆ.[ಮೋದಿ ವಿರುದ್ದ 25 ಕೋಟಿ ಲಂಚ ಪಡೆದ ಗುರುತರ ಆರೋಪ!]

ಹೀ ಮ್ಯಾನ್ ನಮೋ, ನನಗೆ ಮಮತಾ ಹಾಗೂ ಕೇಜ್ರಿವಾಲ್ ನೋವೇನು ಅಂತ ಗೊತ್ತಾಗುತ್ತೆ. ಒಂದು ಸಲ ಪರ್ಸ್ ಕಳೆದುಕೊಂಡಾಗ ಹೀಗೆ ಎಲ್ಲದರ ಬಗ್ಗೆಯೂ ಹುಚ್ಚುಚ್ಚಾಗಿ ಆಡ್ತಿದ್ದೆ ಎಂದು ಟ್ವೀಟ್ ಮಾಡಿದ್ದಾರೆ. ನಿಮಗೆ ಅಷ್ಟು ನಂಬಿಕೆ ಇದ್ದರೆ ಸಾರ್ವಜನಿಕರ ಸಹಕಾರ ಸಿಗತ್ತೆ ಅಂತ, ಯಾವುದೇ ಕ್ಷೇತ್ರಕ್ಕೆ ಭೇಟಿ ಕೊಟ್ಟು, ಜನರನ್ನು ಉದ್ದೇಶಿಸಿ ಮಾತಾಡಿ ಎಂದು ಸವಾಲು ಹಾಕಿದ್ದಾರೆ ಸುಧಾಂಶು ಎಸ್.ಸಿಂಗ್.[ಬಡವರ ಹಣದ ಮೇಲೆ ಮೋದಿ ಸರ್ಜಿಕಲ್ ಸ್ಟ್ರೈಕ್ : ಕೇಜ್ರಿವಾಲ್]

ಒಟ್ಟಿನಲ್ಲಿ ಅರವಿಂದ್ ಕೇಜ್ರಿವಾಲ್ ಟ್ವಿಟ್ಟರ್ ಅಕೌಂಟ್ ನಲ್ಲಿ ಮೊಟ್ಟೆ, ಟೊಮೆಟೊ ವಾಸನೆ ಜೋರಾಗಿ ಬರುತ್ತಿದ್ದರೆ, ಮೋದಿಯನ್ನು ಎದುರಿಸಲು ಕೇಜ್ರಿವಾಲ್ ರಂಥವರಿಂದ ಮಾತ್ರ ಸಾಧ್ಯ ಎಂಬ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.

English summary
Demonetisation is a war against common man by Prime minister Narendra Modi, tweeted by Delhi chief minister Arvind Kejriwal. People hits back to his comment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X