18 ವರ್ಷ ಮೇಲ್ಪಟ್ಟಿರುವ ಎಲ್ಲಾ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು 1 ಸಾವಿರ ರೂ: ವಿವರ ತಿಳಿಯಿರಿ
ದೆಹಲಿ, ಮಾರ್ಚ್ 04: ಮುಖ್ಯಮಂತ್ರಿ ಸಮ್ಮಾನ್ ಯೋಜನೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲಾ ಹೆಣ್ಣುಮಕ್ಕಳಿಗೆ ಸರ್ಕಾರವು ಪ್ರತಿ ತಿಂಗಳು 1 ಸಾವಿರ ರೂ. ನೀಡುವುದಾಗಿ ದೆಹಲಿ ಹಣಕಾಸು ಸಚಿವ ಅತಿಶಿ ಹೇಳಿದ್ದಾರೆ. ಇಂದು 76,000 ಕೋಟಿ ರೂಪಾಯಿಯ ಬಜೆಟ್ನಲ್ಲಿ ಈ ವಿಚಾರ ಪ್ರಸ್ತಾಪಿಸಿದರು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದ 10ನೇ ಬಜೆಟ್ ಇದಾಗಿದೆ.
ಇನ್ಮುಂದೆ 18 ಮೇಲ್ಪಟ್ಟ ಹೆಣ್ಣುಮಕ್ಕಳಿಗೆ ಪ್ರತಿ ವರ್ಷ ತಿಂಗಳ 1 ಸಾವಿರ ರೂ. ನೀಡುವುದಾಗಿ ದೆಹಲಿ ಹಣಕಾಸು ಸಚಿವೆ ಅತಿಶಿ ಹೇಳಿದ್ದಾರೆ. ದೆಹಲಿ ಹಣಕಾಸು ಸಚಿವ ಅತಿಶಿ ಇಂದು 76,000 ಕೋಟಿ ರೂಪಾಯಿ ಬಜೆಟ್ ಮಂಡಿಸುತ್ತಿದ್ದಂತೆ ದೆಹಲಿ ಸರ್ಕಾರವು ಮುಖ್ಯಮಂತ್ರಿ ಸಮ್ಮಾನ್ ಯೋಜನೆ ಅಡಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ತಿಂಗಳಿಗೆ 1,000 ರೂಪಾಯಿಗಳನ್ನು ಘೋಷಿಸಿದೆ.

ಅತಿಶಿ ಅವರು "ಹಿಂದೆ, ಸೀಮಿತ ಸಂಪನ್ಮೂಲಗಳನ್ನು ಹೊಂದಿದ್ದ ದೆಹಲಿಯ ನಿವಾಸಿಗಳು ತಮ್ಮ ಪುತ್ರರನ್ನು ಖಾಸಗಿ ಶಾಲೆಗಳಿಗೆ ಮತ್ತು ಹೆಣ್ಣು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಿದ್ದರು" ಎಂದು ಹೇಳಿದರು.
"ಒಮ್ಮೆ 95 ಪ್ರತಿಶತ ಹುಡುಗಿಯರು ತಮ್ಮ ಸಹೋದರರು ಖಾಸಗಿ ಶಾಲೆಗಳಲ್ಲಿ ಓದುತ್ತಾರೆ ಎಂದು ನನಗೆ ಹೇಳಿದರು. ಆದರೆ ಈಗ, ದೆಹಲಿಯ ಸರ್ಕಾರಿ ಶಾಲೆಗಳ ಹುಡುಗಿಯರು IIT, NEET ಪರೀಕ್ಷೆಗಳಲ್ಲಿ ತೇರ್ಗಡೆಯಾಗುತ್ತಿದ್ದಾರೆ" ಎಂದು ಅವರು ಹೇಳಿದರು.
ಇಲ್ಲಿಯವರೆಗೆ ಶ್ರೀಮಂತ ಕುಟುಂಬದ ಮಗು ಶ್ರೀಮಂತ ಮತ್ತು ಬಡ ಕುಟುಂಬದ ಮಗು ಬಡವನಾಗುತ್ತಿತ್ತು ಆದರೆ ಇದು ರಾಮರಾಜ್ಯ ಪರಿಕಲ್ಪನೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ದೆಹಲಿ ಹಣಕಾಸು ಸಚಿವರು ಹೇಳಿದರು. ಕೇಜ್ರಿವಾಲ್ ಸರ್ಕಾರವು 2015 ರಿಂದ 22,711 ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಿದೆ. ಶಿಕ್ಷಣವು ನಮ್ಮ ಸರ್ಕಾರದ ಆದ್ಯತೆಯಾಗಿದೆ, ಈ ವರ್ಷ ಶಿಕ್ಷಣಕ್ಕಾಗಿ 16,396 ಕೋಟಿ ರೂ.ಗಳನ್ನು ಒದಗಿಸಿದೆ ಎಂದರು.
ಅರವಿಂದ್ ಕೇಜ್ರಿವಾಲ್ ಸರ್ಕಾರ ಹತ್ತನೇ ಬಜೆಟ್ ಮಂಡಿಸುತ್ತಿರುವುದು ಹೆಮ್ಮೆಯ ಸಂಗತಿ. ದೆಹಲಿ ಚಿತ್ರಣವನ್ನು ಬದಲಿಸಲು ಕೇಜ್ರಿವಾಲ್ ಭರವಸೆಯ ಕಿರಣವಾಗಿ ಬಂದರು. ನಾವೆಲ್ಲರೂ ರಾಮರಾಜ್ಯದಿಂದ ಸ್ಫೂರ್ತಿ ಪಡೆದಿದ್ದೇವೆ. ರಾಮರಾಜ್ಯದ ಕನಸನ್ನು ನನಸು ಮಾಡಲು ನಾವು ಶ್ರಮಿಸುತ್ತಿದ್ದೇವೆ ಎಂದಿದ್ದಾರೆ. ದೆಹಲಿಯಲ್ಲಿ ರಾಮ ರಾಜ್ಯ ಸ್ಥಾಪಿಸಲು ಬಹಳಷ್ಟು ಮಾಡಬೇಕಾಗಿದೆ ಆದರೆ ಕಳೆದ 9 ರಲ್ಲಿ ಬಹಳಷ್ಟು ಸಾಧಿಸಲಾಗಿದೆ ಎಂದು ಹೇಳಿದರು.
ನಾವು ಕಳೆದ 9 ವರ್ಷಗಳಲ್ಲಿ ದೆಹಲಿಯ ಜನರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ಒದಗಿಸಲು ಪ್ರಯತ್ನಿಸಿದ್ದೇವೆ. ದೆಹಲಿಯ ಹಣಕಾಸು ಸಚಿವರು, 2014-15ರಲ್ಲಿ ದೆಹಲಿಯ ಜಿಎಸ್‌ಡಿಪಿ 4.95 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ದೆಹಲಿಯ ಜಿಎಸ್‌ಡಿಪಿ ಸುಮಾರು ಎರಡೂವರೆ ಪಟ್ಟು ಹೆಚ್ಚಾಗಿದ್ದು 11.08 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ತಿಳಿಸಿದರು.












Click it and Unblock the Notifications