ನಾಪತ್ತೆಯಾದ ಮಕ್ಕಳ ಶೋಧಕ್ಕೆ ಮೋದಿ ಸರ್ಕಾರದ ವಿನೂತನ ಹೆಜ್ಜೆ

ನವದೆಹಲಿ, ಜೂ 3 (ಪಿಟಿಐ): ಅಧಿಕಾರಕ್ಕೆ ಬಂದ ಒಂದು ವರ್ಷದ ಅವಧಿಯಲ್ಲಿ ಹೊಸ ಹೊಸ ಪ್ರಯೋಗಕ್ಕೆ/ಕಾರ್ಯಕ್ರಮಕ್ಕೆ ಮುಂದಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಈಗ ಮತ್ತೊಂದು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಮನೆಯಿಂದ ನಾಪತ್ತೆಯಾದ ಮಕ್ಕಳ ಶೋಧಕ್ಕಾಗಿ ಮತ್ತು ಮಕ್ಕಳ ಕುಟುಂಬಗಳ ಪುನರ್ಮಿಲನಕ್ಕಾಗಿ 'ಕೋಯಾ ಪಾಯ' ಎನ್ನುವ ಹೊಸ ವೆಬ್ ಪೋರ್ಟಲಿಗೆ ಚಾಲನೆ ನೀಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ಮತ್ತು ಕೇಂದ್ರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಸಚಿವ ರವಿಶಂಕರ್ ಪ್ರಸಾದ್ ಮಂಗಳವಾರ (ಜೂ 2) ಈ ವೆಬ್ಸೈಟಿಗೆ ಚಾಲನೆ ನೀಡಿದ್ದಾರೆ. (ನೊಬೆಲ್ ಪಾರಿತೋಷಕ ವಿಜೇತ ಕೈಲಾಶ್ ಸತ್ಯಾರ್ಥಿ)

Modi government novel move, new web portal for missing childrens

ಮಕ್ಕಳ ಶೋಧಕ್ಕಾಗಿ 'ಟ್ರ್ಯಾಕ್ ಚೈಲ್ಡ್' ಎನ್ನುವ ಅಂತರ್ಜಾಲ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ಈ ಅಂತರ್ಜಾಲ ಪ್ರಮುಖವಾಗಿ ಪೊಲೀಸ್ ಇಲಾಖೆಗೆ ಸಹಾಯವಾಗುವಂತೆ ಕಾರ್ಯ ನಿರ್ವಹಿಸುತ್ತಿದೆ.

ಹಾಗಾಗಿ, ಕೋಯಾ ಪಾಯಾ ಎನ್ನುವ ಅಂತರ್ಜಾಲಕ್ಕೆ ಚಾಲನೆ ನೀಡಲಾಗಿದೆ ಎಂದು ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.

ಈ ಅಂತರ್ಜಾಲದಲ್ಲಿ ಸಾರ್ವಜನಿಕರು ಮುಕ್ತವಾಗಿ ಮಾಹಿತಿ ನೀಡಬಹುದಾಗಿದೆ. ಇಲ್ಲಿ ನಾಪತ್ತೆಯಾದ ಮಕ್ಕಳ ಮಾಹಿತಿ ಮತ್ತು ಭಾವಚಿತ್ರಗಳನ್ನು ಸಾರ್ವಜನಿಕರು ಅಪ್ಲೋಡ್ ಮಾಡಲು ಅವಕಾಶವಿರುತ್ತದೆ.

ಸರಕಾರದ ಈ ವಿನೂತನ ಕ್ರಮಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಮನೇಕಾ ಗಾಂಧಿ ಮನವಿ ಮಾಡಿದ್ದಾರೆ.

ನಾಪತ್ತೆಯಾದ ಹೆಚ್ಚಿನ ಮಕ್ಕಳು ಬಡಕುಟುಂಬಕ್ಕೆ ಸೇರಿದವಾರಾಗಿರುತ್ತಾರೆ. ಈ ಅಂತರ್ಜಾಲ ಮಕ್ಕಳ ಶೋಧಕ್ಕೆ ಉಪಯೋಗವಾಗಲಿದೆ ಎಂದು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ರಾಷ್ಟ್ರೀಯ ಕ್ರೈಮ್ ರಿಕಾರ್ಡ್ ಬ್ಯೂರೋ ಪ್ರಕಾರ ವರ್ಷವೊಂದಕ್ಕೆ ಸುಮಾರು ಎಪ್ಪತ್ತು ಸಾವಿರ ಮಕ್ಕಳು ನಾಪತ್ತೆಯಾಗುತ್ತಾರೆ. ಈ ಹೊಸ ಅಂತರ್ಜಾಲವನ್ನು ಮಹಿಳಾ, ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಮಾಹಿತಿ, ತಂತ್ರಜ್ಞಾನ ಸಚಿವಾಲಯ ಜಂಟಿಯಾಗಿ ಅಭಿವೃದ್ದಿ ಪಡಿಸಿದೆ.

ಕೋಯಾ-ಪಾಯ ಅಂತರ್ಜಾಲಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+