ಮಿಥುನ್ ಚಕ್ರವರ್ತಿ ಮಗ ಮಹಾಕ್ಷಯ್ ಮದ್ವೆ ಸಂಪನ್ನ

ಮುಂಬೈ, ಜುಲೈ 10: ಹಿಂದಿ ಚಿತ್ರರಂಗದ ನಟ ಮಿಥುನ್ ಚಕ್ರವರ್ತಿ ಅವರ ಮಗ ಮಹಾಕ್ಷಯ್ ಅವರ ಮದುವೆ ಚಿತ್ರ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ಮಹಾಕ್ಷಯ್ ವಿರುದ್ಧ ನಟಿಯೊಬ್ಬಳು ಅತ್ಯಾಚಾರ ಹಾಗೂ ಗರ್ಭಪಾತದ ದೂರು ದಾಖಲಿಸಿರುವ ಸುದ್ದಿ ಗೊತ್ತಿರಬಹುದು. ಇದಾದ ಬಳಿಕ ಮಹಾಕ್ಷಯ್ ಮದ್ವೆ ಮುರಿದು ಬಿದ್ದ ಸುದ್ದಿಯೂ ಬಂದಿತ್ತು. ಆದರೆ, ಈಗ ಸದ್ದಿಲ್ಲದೆ ಮಹಾಕ್ಷಯ್ ವಿವಾಹ ಮಹೋತ್ಸವ ಸಂಪನ್ನವಾಗಿದೆ.

ಸದ್ಯ ಅತ್ಯಾಚಾರ ಪ್ರಕರಣ ವಿಚಾರಣೆ ಹಂತದಲ್ಲಿದೆ. ಮಹಾಕ್ಷಯ್ ಹಾಗೂ ಆತನ ತಾಯಿ ಯೋಗಿತಾ ಬಾಲಿ ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.

Mithun Chakrabortys Son Mahaakshay Chakraborty MARRIES Madalsa Sharma
ಈ ಗಲಾಟೆ ನಡುವೆ ಮಹಾಕ್ಷಯ್ ಅವರು ನಟಿ ಮದಾಲಸಾ ಶರ್ಮಾ ಕೈ ಹಿಡಿದಿದ್ದಾರೆ ಎಂದು ಬಾಂಬೆ ಟೈಮ್ಸ್ ವರದಿ ಮಾಡಿದೆ. ನವ ದಂಪತಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜುಲೈ 7ರಂದು ಮದುವೆ ನಿಗದಿಯಾಗಿತ್ತು.

ಮಿಥುನ್ ಚಕ್ರವರ್ತಿ ಮಗನ ಮೇಲೆ ಲವ್, ಸೆಕ್ಸ್, ದೋಖಾ ಕೇಸ್
ಆದರೆ, ಆ ದಿನ ಮಹಾಕ್ಷಯ್ ಅವರ ಜಾಮೀನು ಅರ್ಜಿ ವಿಚಾರಣೆ ಇತ್ತು. ಜಾಮೀನು ಸಿಗುವುದು ತಡವಾಗಿದ್ದರಿಂದ ಮದುವೆ ಮುಂದೂಡಲಾಗಿದೆ ಎನ್ನಲಾಗಿತ್ತು. ತಪ್ಪು ಮಾಹಿತಿಯಿಂದ ಮದುವೆ ಮುರಿದು ಬಿದ್ದಿದೆ ಎಂದು ವರದಿಯೂ ಆಗಿತ್ತು.

33 ವರ್ಷ ವಯಸ್ಸಿನ ಮಹಾಕ್ಷಯ್ ಹಾಗೂ 26 ವರ್ಷ ವಯಸ್ಸಿನ ಮದಾಲಸಾ ಮದುವೆ ಉಡುಗೆಯಲ್ಲಿರುವ ಫೋಟೋ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+