ಮಿಥುನ್ ಚಕ್ರವರ್ತಿ ಮಗನ ಮೇಲೆ ಲವ್, ಸೆಕ್ಸ್, ದೋಖಾ ಕೇಸ್
ನವದೆಹಲಿ, ಜುಲೈ 03: ಹಿಂದಿ ಚಿತ್ರರಂಗದ ಹಿರಿಯ ನಟ ಮಿಥುನ್ ಚಕ್ರವರ್ತಿ ಮಗ ಮಹಾಕ್ಷಯನ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ ಕೇಳಿ ಬಂದಿದೆ. ಈ ವಾರದಲ್ಲಿ ಮಹಾಕ್ಷಯ್ ಮದುವೆ ನಡೆಯಲು ಮುಹೂರ್ತ ನಿಗದಿಯಾಗಿತ್ತು. ಆದರೆ, ಆತ್ಯಾಚಾರ, ವಂಚನೆ ಪ್ರಕರಣದಲ್ಲಿ ಸಿಲುಕಿದ್ದಾರೆ.
ಮಹಾಕ್ಷಯ ವಿರುದ್ಧ ಅತ್ಯಾಚಾರ, ಮೋಸ, ಬಲವಂತವಾಗಿ ಗರ್ಭಪಾತ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ. ದೆಹಲಿಯ ರೋಹಿಣಿ ಕೋರ್ಟ್ ಮಹಾಕ್ಷಯ್ ವಿರುದ್ಧ ದೂರು ದಾಖಲಿಸಿಕೊಳ್ಳಲು ಆದೇಶ ಮಾಡಿದೆ. ಮಿಥುನ್ ಪತ್ನಿ ಯೋಗಿತಾ ವಿರುದ್ಧ ಮಗನಿಗೆ ಬೆಂಬಲ ನೀಡಿದ್ದಕ್ಕೆ ಸಹ ಆರೋಪಿಯೆಂದು ದೂರು ದಾಖಲಿಸಿಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ.

ಮಹಾಕ್ಷಯ ಹಾಗೂ ಯೋಗಿತಾ ವಿರುದ್ಧ ಬೇಗಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಮಹಾಕ್ಷಯ ಹಾಗೂ ಯೋಗಿತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದೂರು ನೀಡಿದವಳು ಭೋಜ್ಪುರಿ ಚಿತ್ರ ನಟಿ ಎನ್ನಲಾಗಿದೆ. ಬಾಲಿವುಡ್ ನಲ್ಲಿ ಕೂಡ ಆಕೆ ನಟಿಸಿದ್ದಳು ಎನ್ನಲಾಗಿದೆ.
ಮಹಾಕ್ಷಯ್ ಕೂಡಾ ಈ ಹಿಂದೆ ಲೂಟ್, ಜಿಮ್ಮಿ, ಎನೆಮ್ಮಿ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ನಿರ್ಮಾಪಕ ಸುಭಾಷ್ ಶರ್ಮಾ, ಮಾಜಿ ನಟಿ ಶೀಲಾ ಶರ್ಮ ಮಗಳು ಮದಾಲಸಾ ಜೊತೆ ಜುಲೈ 7 ರಂದು ಮಹಾಕ್ಷಯ್ ಮದುವೆ ನಿಶ್ಚಯವಾಗಿತ್ತು.ಮಹಾಕ್ಷಯ್ ಮದುವೆಯಾಗುವುದಾಗಿ ಆಸೆ ತೋರಿಸಿ ಅನೇಕ ಬಾರಿ ನನ್ನ ಜತೆ ಶಾರೀರಿಕ ಸಂಬಂಧ ಬೆಳೆಸಿದ್ದ. ಆದರೆ, ಈಗ ಬೇರೆಯವರನ್ನು ಮದುವೆಯಾಗಲು ಮುಂದಾಗಿದ್ದಾನೆ ಎಂದು ದೂರಿನಲ್ಲಿ ಆಕೆ ಹೇಳಿದ್ದಾಳೆ. ಈ ಬಗ್ಗೆ ಪೀಡಿತೆ ಕೋರ್ಟ್ ನಲ್ಲಿ ದೂರು ನೀಡಿದ್ದಳು.

4 ವರ್ಷಗಳ ಕಾಲ ಸಂಬಂಧದಲ್ಲಿದ್ದ ಮಹಾಕ್ಷಯ್ ಜಾತಕ ಕೂಡ ಕೇಳಿದ್ದ. ಒಮ್ಮೆ ಗರ್ಭಪಾತ ಮಾಡಿಸಿದ್ದ. ಈಗ ಬೇರೆಯವಳನ್ನು ಮದುವೆಯಾಗ್ತಿದ್ದಾನೆಂದು ದೂರಿದ್ದಳು. ನನ್ನ ಮಗನ ತಂಟೆಗೆ ಬರಬೇಡ ಎಂದು ಯೋಗಿತಾ ಅವರು ನನಗೆ ಬೆದರಿಕೆ ಹಾಕಿದರು. ಜೀವ ಭಯದಿಂದ ಮುಂಬೈನಿಂದ ದೆಹಲಿಗೆ ಶಿಫ್ಟ್ ಆಗಬೇಕಾಯಿತು ಎಂದು ದೂರಿನಲ್ಲಿ ಹೇಳಿದ್ದಾಳೆ.












Click it and Unblock the Notifications