Metro: ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ ಮಾತ್ರ ತಮಿಳುನಾಡಿನ ಮಧುರೈ ನಗರಕ್ಕೆ ಮೆಟ್ರೋ ಎಂದು ಮಹಾ ಸಿಎಂ ಹೇಳಿದ್ರಾ
Metro: ತಮಿಳುನಾಡಿನ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ತಮಿಳುನಾಡಿನ ಮಧುರೈ ನಗರಕ್ಕೆ ಮೆಟ್ರೋ ಸೇವೆ ಕಲ್ಪಿಸುವ ಬಗ್ಗೆಯೂ ಹೆಚ್ಚು ಆಡಳಿತರೂಢ ಡಿಎಂಕೆ ಹಾಗೂ ಬಿಜೆಪಿ ನಡುವೆ ವಾಕ್ಸಮರ ನಡೆದಿದೆ. ಮಧುರೈ ನಗರದಲ್ಲಿ ಬಿಜೆಪಿ ಶಾಸಕ ಆಯ್ಕೆಯಾದರೆ ಮಾತ್ರ ಮಧುರೈಗೆ ಮೆಟ್ರೋ ಒದಗಿಸುವುದಾಗಿ ಬ್ಲಾಕ್ ಮೇಲ್ ಮಾಡಿ ಮಾತುಕತೆ ನಡೆಸುವುದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕೆಲಸವೇ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಪ್ರಶ್ನೆ ಮಾಡಿದ್ದಾರೆ.
ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಯೊಬ್ಬರು ವಿರೋಧ ಪಕ್ಷದ ಆಡಳಿತವಿರುವ ರಾಜ್ಯಕ್ಕೆ ಬಂದು ಈ ರೀತಿ ಮಾತನಾಡಲು ನಾಚಿಕೆಪಡಬೇಕು. ಕೇಂದ್ರ ಸರ್ಕಾರವು ಹಣಕಾಸಿನಲ್ಲಿ ನಿರ್ಲಕ್ಷ್ಯ ವಹಿಸಿದ್ದರೂ ತಮಿಳುನಾಡು ಸರ್ಕಾರ ಎಷ್ಟು ಸಾಧನೆ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಅವರಿಗೆ ತಿಳಿದಿದೆಯೇ? ಇಲ್ಲದಿದ್ದರೆ, ಅವರು ಮಾತನಾಡುವ ಮೊದಲು ಕೇಳಿ ತಿಳಿದುಕೊಳ್ಳಬೇಕು.

ದ್ರಾವಿಡಮಾದರಿ ಆಡಳಿತದಲ್ಲಿರುವ ತಮಿಳುನಾಡು, ನೀವು ಡಬಲ್ ಎಂಜಿನ್ ಎಂದು ಕರೆಯುತ್ತಿರುವ ಡಬಲ್ ಎಂಜಿನ್ ರಾಜ್ಯಗಳನ್ನು ಮೀರಿಸಿ ಡಬಲ್ ಡಿಜಿಟ್ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿದೆ ಎಂಬುದನ್ನು ನೆನಪಿನಲ್ಲಿಡೋಣ ಎಂದೂ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದೇನು
ತಮಿಳುನಾಡಿನ ಮಧುರೈ ದಕ್ಷಿಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮ ಶ್ರೀನಿವಾಸನ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಜೊತೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವೇಂದ್ರ ಫಡ್ನವೀಸ್ ಅವರು ಶ್ರೀನಿವಾಸನ್ ಚುನಾವಣೆಯಲ್ಲಿ ಗೆದ್ದ ಮೇಲೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಮೇಲೆ ಮಧುರೈ ನಗರಕ್ಕೆ ಮೆಟ್ರೋ ಯೋಜನೆ ಬರಲಿದೆ ಎಂದಿದ್ದರು. ಬಿಜೆಪಿ ಅಭ್ಯರ್ಥಿ ರಾಮ ಶ್ರೀನಿವಾಸನ್ ಗೆದ್ದರೆ ಮಧುರೈಗೆ ಮೆಟ್ರೋ ಯೋಜನೆ ಬರಲಿದೆ ಎಂಬರ್ಥದಲ್ಲಿ ಮಾತನಾಡಿರುವುದು ಇದೀಗ ಚರ್ಚೆ ಕಾರಣವಾಗಿದೆ.
Metro: ಕೆ. ಅಣ್ಣಾಮಲೈ ಹೇಳಿದ್ದೇನು
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಬಿಜೆಪಿ ಮುಖಂಡ ಕೆ. ಅಣ್ಣಾಮಲೈ ಅವರು ಸಹ ಪ್ರತಿಕ್ರಿಯೆ ನೀಡಿದ್ದಾರೆ. ಮಧುರೈ ಮೆಟ್ರೋ ಯೋಜನೆಗೆ ವಿವರವಾದ ಯೋಜನಾ ವರದಿಯನ್ನು ಸರಿಯಾಗಿ ಸಿದ್ಧಪಡಿಸಲು ಮತ್ತು ಒದಗಿಸಲು ಸಾಧ್ಯವಾಗದ ಅಸಮರ್ಥ ಡಿಎಂಕೆ ಸರ್ಕಾರದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸಹ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದರ ಅರ್ಥ, ಚುನಾವಣಾ ಫಲಿತಾಂಶಗಳ ನಂತರ ತಮಿಳುನಾಡಿನಲ್ಲಿ ರಚನೆಯಾಗಲಿರುವ ಮುಂಬರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರದಲ್ಲಿ, ವಿವರವಾದ ಯೋಜನಾ ವರದಿಯನ್ನು ಸರಿಯಾಗಿ ಸಿದ್ಧಪಡಿಸಲಾಗುವುದು ಮತ್ತು ಮಧುರೈ ಮೆಟ್ರೋ ಯೋಜನೆಗೆ ಅನುಮೋದನೆ ಪಡೆಯಲಾಗುವುದು ಎಂದು ಅಂತ ಕೆ. ಅಣ್ಣಾಮಲೈ ತಿರುಗೇಟು ನೀಡಿದ್ದಾರೆ.
ನೀವು ಅಧಿಕಾರಕ್ಕೆ ಬಂದ ತಕ್ಷಣ, ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಹೆಸರಿನಲ್ಲಿ ನಿಮ್ಮ ಕುಟುಂಬದೊಂದಿಗೆ ನೀವು ಹಲವಾರು ವಿದೇಶ ಪ್ರವಾಸಗಳನ್ನು ಮಾಡಿದ್ದೀರಿ. ಯಾವ ಹೂಡಿಕೆ ಬಂದಿತು, ಎಷ್ಟು ಜನರಿಗೆ ಉದ್ಯೋಗಾವಕಾಶಗಳು ಸಿಕ್ಕವು, ಕೇಂದ್ರ ಸರ್ಕಾರದ ಯೋಜನೆಗಳಿಂದ ಪಡೆದ ಅಭಿವೃದ್ಧಿಯ ಮೇಲೆ ನಿಮ್ಮ ಸ್ಟಿಕ್ಕರ್ ಅಂಟಿಸಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ನಿಮ್ಮ ಆಡಳಿತದಲ್ಲಿ, ನೀವು ಕಸ ಸಂಗ್ರಹಣೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದೀರಿ, ಚೆನ್ನೈ, ಮಧುರೈ ಮತ್ತು ತಿರುಪ್ಪೂರಿನಂತಹ ನಗರಗಳನ್ನು ಕಸದ ತೊಟ್ಟಿಗಳನ್ನಾಗಿ ಮಾಡುತ್ತಿದ್ದೀರಿ ಮತ್ತು "ಕಸ ಮಾದರಿ" ಸರ್ಕಾರವನ್ನು ನಡೆಸುತ್ತಿದ್ದೀರಿ. ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸ್ಥಾಪಿಸುವುದಾಗಿ ನೀವು ಭರವಸೆ ನೀಡಿದ ಮಧುರೈನಲ್ಲಿರುವ ಕೃಷಿ ವಿಶ್ವವಿದ್ಯಾಲಯ ಎಲ್ಲಿದೆ ಎಂದೂ ಅವರು ಕೇಳಿದ್ದಾರೆ.
பா.ஜ.க. MLA-வைத் தேர்ந்தெடுத்தால்தான் மதுரைக்கு மெட்ரோ தருவோம் என்று பேரம் பேசுவதும், பிளாக்மெயில் செய்வதும்தான் மகாராஷ்டிர முதலமைச்சரின் வேலையா?
— M.K.Stalin - தமிழ்நாட்டை தலைகுனிய விடமாட்டேன் (@mkstalin) April 7, 2026
அரசியலமைப்பின் மீது உறுதிமொழி ஏற்ற ஒரு முதலமைச்சர், எதிர்க்கட்சி ஆளும் மாநிலத்தில் வந்து இப்படி பேசுவதற்கு வெட்கப்பட வேண்டும்.
நிதி… https://t.co/VdDkctg3e8
-
ಧನುಷ್ ಜೊತೆ ಸ್ನೇಹ ಕಳೆದುಕೊಂಡಿದ್ದು ನನ್ನ ಜೀವನದ ದೊಡ್ಡ ನಷ್ಟ: ಪತ್ನಿ ನಯನತಾರ ಜೊತೆಗಿನ ಮನಸ್ತಾಪಕ್ಕೆ ವಿಘ್ನೇಶ್ ಶಿವನ್ ಬೇಸರ -
"ನಾನು ಔಟ್ ಆಗಿದ್ದಕ್ಕೇ ತುಂಬಾ ಖುಷಿಯಾಯ್ತು": ಸಿಎಸ್ಕೆ ಎದುರು ರನ್ ಮಳೆ ಹರಿಸಿದ ಬಳಿಕ ಪಡಿಕ್ಕಲ್ ಹೀಗಂದಿದ್ದೇಕೆ? -
2026ರ PUC ಫಲಿತಾಂಶಕ್ಕೆ ಕ್ಷಣಗಣನೆ; ಈ ಬಾರಿ ಡಿಜಿಲಾಕರ್ನಲ್ಲೂ ರಿಸಲ್ಟ್ ಲಭ್ಯ, ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru: ನಸುಕಿನ ಜಾವ 3 ಗಂಟೆಗೆ ರಾಪಿಡೋ ರೈಡರ್ ತೋರಿದ ಮಾನವೀಯತೆಗೆ ಮಹಿಳೆ ಫಿದಾ, Video Viral -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
Virat Kohli: ನಾನೇನು ವಿದೇಶಿ ಆಟಗಾರನಾ?: ಲಂಡನ್ ವಾಸ್ತವ್ಯದ ಬಗ್ಗೆ ಟೀಕಾಕಾರರಿಗೆ ವಿರಾಟ್ ಕೊಹ್ಲಿ ತಿರುಗೇಟು -
ಒರಾಕಲ್ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral -
Silk Board: ಹಳದಿ-ನೀಲಿ ಮೆಟ್ರೋ ಲೈನ್ ಪ್ರಯಾಣಿಕರಿಗಾಗಿ 'ಟ್ರಾವೆಲೇಟರ್-ಕನೆಕ್ಟಿಂಗ್ ವಾಕ್ವೇ ಸಂಪರ್ಕ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ












Click it and Unblock the Notifications